Home » ಪ್ರಧಾನ ಮಂತ್ರಿ ಫಸಲ್‌ಭೀಮಾ ಯೋಜನೆಯಡಿ ಹುರಳಿ ಬೆಳೆಗೆ ಬೆಳೆ ವಿಮೆ

ಪ್ರಧಾನ ಮಂತ್ರಿ ಫಸಲ್‌ಭೀಮಾ ಯೋಜನೆಯಡಿ ಹುರಳಿ ಬೆಳೆಗೆ ಬೆಳೆ ವಿಮೆ

by manager manager

ಕೋಲಾರ: ಪ್ರಧಾನ ಮಂತ್ರಿ ಫಸಲ್‌ಭೀಮಾ ಯೋಜನೆಯನ್ನು ಹಿಂಗಾರು ಹಂಗಾಮಿನಲ್ಲಿ ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ಸ್ವಇಚ್ಚೆಯಿಂದ ಈ ಯೋಜನೆಯಡಿ ಪಾಲ್ಗೊಳ್ಳಬಹುದಾಗಿರುತ್ತದೆ. ಕೋಲಾರ ಜಿಲ್ಲೆಯಲ್ಲಿರುವ ಎಲ್ಲಾ ತಾಲ್ಲೂಕುಗಳಲ್ಲಿ ಮಳೆ ಆಶ್ರಿತ ಹುರಳಿ ಬೆಳೆಗೆ ನವೆಂಬರ್ 30 ರೊಳಾಗಾಗಿ ಬೆಳೆ ವಿಮೆ ಮಾಡಿಸಬಹುದಾಗಿರುತ್ತದೆ.

ಅರ್ಹತೆ
ಪ್ರತಿ ಹೆಕ್ವೇರ್‌ಗೆ 274 ವಿಮಾ ಕಂತು ಆಗಿದ್ದು, ಹೆಕ್ಟೇರ್‌ಗೆ ರೂ 18 ಸಾವಿರರು ವಿಮಾ ಮೊತ್ತವಾಗಿರುತ್ತದೆ. ರೈತರು ಅಂತಿಮ ದಿನಾಂಕದೊಳಗೆ ಪ್ರಸ್ತಾವನೆಗಳನ್ನು ತಮ್ಮ ಸೇವಾ ಕ್ಷೇತ್ರದ ಬ್ಯಾಂಕಿನಲ್ಲಿ ಸಲ್ಲಿಸಬಹುದಾಗಿರುತ್ತದೆ

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳನ್ನು ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ. ಈ ಸದಾವಕಾಶವನ್ನು ಜಿಲ್ಲೆಯ ರೈತರು ಸದುಪಯೋಗ ಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.