Home » ಎಸ್‌ಎಸ್‌ಎಲ್‌ಸಿ ಪಾಸ್‌ ನಂತರ ಯಾವೆಲ್ಲ ಕೋರ್ಸ್‌ ಓದಬಹುದು ಗೊತ್ತೇ?

ಎಸ್‌ಎಸ್‌ಎಲ್‌ಸಿ ಪಾಸ್‌ ನಂತರ ಯಾವೆಲ್ಲ ಕೋರ್ಸ್‌ ಓದಬಹುದು ಗೊತ್ತೇ?

by manager manager

ಎಸ್‌ಎಸ್‌ಎಲ್‌ಸಿ ಪಾಸ್‌ ನಂತರ ವಿದ್ಯಾರ್ಥಿ ಯಾವ ಆಯ್ಕೆ ಮಾಡಿದ್ದಾನೆ ಎನ್ನುವುದರ ಆಧಾರದ ಮೇಲೆ ಭವಿಷ್ಯದಲ್ಲಿ ವೃತ್ತಿಯ ಆಯ್ಕೆಗೆ ಅನುಕೂಲ ಆಗುತ್ತದೆ. ಒಂದು ಹಂತದ ವಿದ್ಯಾಭ್ಯಾಸ ಮುಗಿಸಿ ಭವಿಷ್ಯದ ಗುರಿಗೆ ಸಜ್ಜಾಗುವ ಒಂದು ವಿಶೇಷ ಸಮಯ ಇದು. ಇಂತಹ ಸಮಯದಲ್ಲಿ ವಿದ್ಯಾರ್ಥಿ ತನ್ನ ಆಸಕ್ತಿ, ಸಾಮರ್ಥ್ಯ ಹಾಗೂ ವಿದ್ಯಾಭ್ಯಾಸದ ಬಗ್ಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕು. ಅದಕ್ಕಾಗಿ ಯಾವೆಲ್ಲ ಕೋರ್ಸ್‌ಗಳನ್ನು ತೆಗೆದುಕೊಳ್ಳಬಹುದು ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.

10ನೇ ತರಗತಿಯ ನಂತರ ಏನು ಅಧ್ಯಯನ ಮಾಡಬಹುದು?

  1. ಪಿಯುಸಿ ವಿದ್ಯಾಭ್ಯಾಸ,
  2. ಪಾಲಿಟೆಕ್ನಿಕ್ ಡಿಪ್ಲೋಮಾ ಕೋರ್ಸ್
  3. ಪ್ಯಾರಾಮೆಡಿಕಲ್/ ಅರೆವೈದ್ಯಕೀಯ ಕೋರ್ಸ್
  4. ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್‌(ಐಟಿಐ)
  5. ಅಲ್ಪಾವಧಿಯ ಕೋರ್ಸ್‍ಗಳು
  6. ಇತರ ವೃತ್ತಿ ಸಂಬಂಧಿತ ಕೋರ್ಸ್‍ಗಳು.

ಪಿಯುಸಿ ವಿದ್ಯಾಭ್ಯಾಸ
ಪಿಯುಸಿ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡರೆ ಜೀವಶಾಸ್ತ್ರ, ಕಂಪ್ಯೂಟರ್, ಎಲೆಕ್ಟ್ರಾನಿಕ್, ಐಟಿ, ಭೌತಶಾಸ್ತ್ರ, ರಸಾಯನಿಕ ಶಾಸ್ತ್ರ, ಗಣಿತ, ಭಾಷೆ ಸೇರಿದಂತೆ ಗಮನಾರ್ಹ ಪ್ರಯೋಗಾಲಯಗಳು ಇರುತ್ತವೆ. ಅವುಗಳಲ್ಲಿ ಸೂಕ್ತ ವಿದ್ಯಾಭ್ಯಾಸ ನಡೆಸಬಹುದು.

ಪಿಯುಸಿ ವಾಣಿಜ್ಯವನ್ನು ಆಯ್ಕೆ ಮಾಡಿಕೊಂಡರೆ ಅರ್ಥಶಾಸ್ತ್ರ, ವಾಣಿಜ್ಯದ ಪ್ರಮುಖ ವಿಷಯಗಳಾದ ಬಿಸಿನೆಸ್ ಎಕನಾಮಿಕ್ಸ್, ಅಕೌಂಟೆನ್ಸಿ, ಬಿಸಿನೆಸ್ ಸ್ಟಡಿ, ತೆರಿಗೆ, ಲೆಕ್ಕಪತ್ರ ನಿರ್ವಹಣೆ, ಮಾರ್ಕೆಟಿಂಗ್ ವಿಷಯಗಳನ್ನು ಅಧ್ಯಯನ ಮಾಡುವ ಅವಕಾಶಗಳಿರುತ್ತವೆ.

ಪಿಯುಸಿ ಆರ್ಟ್ಸ್‌ ಆಯ್ಕೆ ಮಾಡಿಕೊಂಡರೆ ಪತ್ರಿಕೋದ್ಯಮ, ಮನೋವಿಜ್ಞಾನ, ಸಾಹಿತ್ಯ, ಲಲಿತಕಲೆ, ರಾಜಕೀಯ ವಿಜ್ಞಾನ, ಅರ್ಥಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರಗಳು ಇರುತ್ತವೆ.

ಪಾಲಿಟೆಕ್ನಿಕ್ ಡಿಪ್ಲೋಮ ಕೋರ್ಸ್
ಈ ಕೋರ್ಸ್/ ತರಗತಿಯನ್ನು ಹತ್ತನೇ ತರಗತಿಯ ಆಧಾರದ ಮೇಲೆ ಅಥವಾ ಪಿಯುಸಿ ಅರ್ಹತೆ ಆಧಾರದ ಮೇಲೆ ಆಯ್ಕೆ ಮಾಡಬಹುದು. ಮೂರು ವರ್ಷಗಳ ಈ ಕೋರ್ಸ್ ಮುಗಿದ ತಕ್ಷಣ ಉದ್ಯೋಗಕ್ಕೆ ಸೇರಬಹುದು.

ಕರ್ನಾಟಕದಲ್ಲಿ 8 ಹೊಸ ಡಿಪ್ಲೊಮ ಕೋರ್ಸ್ ಪರಿಚಯಿಸಲಾಗಿದೆ. ಇವುಗಳನ್ನು ಎಸ್‌ಎಸ್‌ಎಲ್‌ಸಿ ನಂತರ ಅಧ್ಯಯನ ಮಾಡಬಹುದು. ಅವುಗಳೆಂದರೆ
– ಆಲ್ಟರ್ನೇಟಿವ್ ಎನರ್ಜಿ ಟೆಕ್ನಾಲಜಿ (Alternative Energy Technologies)
– ಆಟೋಮೇಷನ್ ಮತ್ತು ರೊಬಾಟಿಕ್ಸ್ (Automation and Robotics)
– ಕ್ಲೌಡ್ ಕಂಪ್ಯೂಟಿಂಗ್ ಮತ್ತು ಬಿಗ್ ಡಾಟಾ (Cloud Computing)
– ಫುಡ್ ಪ್ರೊಸೆಸಿಂಗ್ ಮತ್ತು ಪ್ರಿಸರ್ವೇಷನ್‌ (Food Processing and Preservation)
– ಪ್ರವಾಸೋದ್ಯಮ (Travel & Tourism )
– ಸೈಬರ್ ಭದ್ರತೆ (Cyber security)
– ನಿರ್ದೇಶನ ಮತ್ತು ಚಿತ್ರಕಥೆ ರಚನೆ, ಟೀವಿ ಕಾರ್ಯಕ್ರಮಗಳ ನಿರ್ಮಾಣ (Direction screen play writing and TV production)
– ಸೈಬರ್ ಭೌತಿಕ ವ್ಯವಸ್ಥೆ ಮತ್ತು ಭದ್ರತೆ (Cyber physical system and security)

ಪ್ಯಾರಾಮೆಡಿಕಲ್/ ಅರೆವೈದ್ಯಕೀಯ ಕೋರ್ಸ್ ಅನ್ನು ಎಸ್‌ಎಸ್‌ಎಲ್‌ಸಿ ನಂತರ ಓದಬಹುದು.

ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ (ಐಟಿಐ)
ಐಟಿಐ ಕೋರ್ಸ್‍ಗಳನ್ನು 10ನೇ ತರಗತಿಯ ನಂತರ ಆಯ್ಕೆ ಮಾಡಬಹುದು. ಈ ತರಗತಿಗಳನ್ನು ಸರ್ಕಾರಿ ತರಬೇತಿ ಸಂಸ್ಥೆಯು ತರಬೇತಿಯನ್ನು ನೀಡುತ್ತದೆ. ವಿವಿಧ ಕೈಗಾರಿಕೆಗಳಲ್ಲಿ ನುರಿತ ವ್ಯಕ್ತಿಗಳಿಂದ ಮ್ಯೆಕಾನಿಕಲ್ ವರ್ಕ್, ಎಲೆಕ್ಟ್ರಾನಿಕ್ಸ್, ಲಿಫ್ಟ್ ಮೆಕ್ಯಾನಿಕ್ಸ್, ಕಂಪ್ಯೂಟರ್ ಸಾಫ್ಟ್‍ವೇರ್, ಶೀಟ್ ಮೆಟಲ್, ಎಲೆಕ್ಟ್ರಿಕಲ್, ಪ್ಲಂಬಿಂಗ್, ವೈರಿಂಗ್ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುವುದು.

ಅಲ್ಪಾವಧಿಯ ಕೋರ್ಸ್‍ಗಳು
ಡಿಪ್ಲೊಮ ಇನ್ ಕಂಪ್ಯೂಟರ್ ಅಪ್ಲಿಕೇಷನ್, ವೆಬ್ ಡಿಸೈನಿಂಗ್ ಸರ್ಟಿಫಿಕೇಟ್ ಕೋರ್ಸ್‍ಗಳು, ಡಿಜಿಟಲ್ ಮಾರ್ಕೆಟಿಂಗ್, ಡಿಪ್ಲೋಮಾ ಇನ್ 2ಡಿ ಮತ್ತು 3ಡಿ ಎನಿಮೇಷನ್, ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಪ್ರಮಾಣಪತ್ರ ಕೋರ್ಸ್‍ಗಳು(ಜಾವ, ಸಿಸಿ++) ಕೋರ್ಸ್‍ಗಳನ್ನು ಬೇಡಿಕೆಯ ಪ್ರವೃತ್ತಿಗೆ ಅನುಗುಣವಾಗಿ ನೀಡಲಾಗುತ್ತದೆ. ಕೋರ್ಸ್ ಮುಗಿದ ನಂತರ ಪ್ರಮಾಣ ಪತ್ರವನ್ನು ಪಡೆದು ಅಪೇಕ್ಷಿತ ಉದ್ಯೋಗವನ್ನು ಮಾಡಬಹುದು.