Home » ಚಿಕ್ಕಬಳ್ಳಾಪುರ ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ(VA) ಹುದ್ದೆಗೆ ಅರ್ಜಿ ಆಹ್ವಾನ

ಚಿಕ್ಕಬಳ್ಳಾಪುರ ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ(VA) ಹುದ್ದೆಗೆ ಅರ್ಜಿ ಆಹ್ವಾನ

by manager manager

chikkaballapura district Village Accountants recruitment 2018

ಕರ್ನಾಟಕ ಸರ್ಕಾರ ಕಂದಾಯ ಇಲಾಖೆ ಚಿಕ್ಕಬಳ್ಳಾಪುರ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿಗಳ(village accountant) ಹುದ್ದೆ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಕಂದಾಯ ಘಟಕದಲ್ಲಿ ವಿವಿಧ ಕಾರಣಗಳಿಂದ ಗ್ರಾಮಲೆಕ್ಕಿಗರ ಹುದ್ದೆಗಳು ತೆರವಾಗಿರುವ ಹಾಗೂ ತೆರವಾಗಲಿರುವ ಕಾರಣಗಳಿಂದ ಈ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ.

ಹುದ್ದೆಯ ಹೆಸರು : ಗ್ರಾಮ ಲೆಕ್ಕಿಗರು (Village Accountent)

ಒಟ್ಟು ಹುದ್ದೆಗಳ ಸಂಖ್ಯೆ : 40

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14-01-2019

ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 14-01-2019

– ಶುಲ್ಕ ಪಾವತಿಸಿದ ಚಲನ್‌ ಮಾಹಿತಿಯನ್ನು ಚಲನ್ ಸಂಖ್ಯೆ, ದಿನಾಂಕ ಸಹಿತ ಅರ್ಜಿಯೊಂದಿಗೆ ಅಪ್‌ಲೋಡ್‌ ಮಾಡಲು 14-01-2019 ಕೊನೆಯ ದಿನಾಂಕ.

– ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು State Bank of India, Chikkaballapura ಶಾಖೆಯಲ್ಲಿನ ಉಳಿತಾಯ ಖಾತೆ ಸಂಖ್ಯೆ 64030323576 ಗೆ (IFSC code SBIN0040082) ಪಾವತಿಸಬೇಕು.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ : ರೂ 200

ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ : ರೂ.200

ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ.200

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ : ರೂ.100

ಶೈಕ್ಷಣಿಕ ವಿದ್ಯಾರ್ಹತೆ:

ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ನಡೆಸುವ ದ್ವಿತೀಯ ಪಿಯುಸಿ ಅಥವಾ ಸಿಬಿಎಸ್‌ಇ, ಐಸಿಎಸ್‌ಇ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ವಯೋಮಿತಿ :

ಅರ್ಜಿಸುವ ಕೊನೆಯ ದಿನಾಂಕದೊಳಗೆ ಕನಿಷ್ಟ 18 ವರ್ಷ ಪೂರೈಸಿರಬೇಕು.

ಸಾಮಾನ್ಯ ವರ್ಗ ಗರಿಷ್ಠ : 35 ವರ್ಷ

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ : 40 ವರ್ಷ

ಪ್ರವರ್ಗ 2ಎ/ಬಿ/3ಎ/3ಬಿ : 38 ವರ್ಷ

ಅರ್ಜಿ ಸಲ್ಲಿಸುವುದು ಹೇಗೆ?

ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಅಧಿಕೃತ ವೆಬ್‌ಸೈಟ್ http://cbpur-va.kar.nic.in/ ಗೆ ಭೇಟಿ ನೀಡಿ ಸಲ್ಲಿಸಬೇಕು.

ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಮಲೆಕ್ಕಿಗರ ಹುದ್ದೆಯ ನೇಮಕಾತಿ ಪ್ರಕಟಣೆ ನೋಡಲು & ಇನ್ನೂ ಹೆಚ್ಚಿನ ಮಾಹಿತಿಗಾಗಿ – ಕ್ಲಿಕ್ ಮಾಡಿ

Chikkaballapura District Village Accountent Recruitment 2018 – Click Here

Karnataka revenue department invited application for the post of Chikkaballapura district Village Accountant(VA) 2018. Read full details here to apply for the VA job.

You may also like