Home » ಉಸಿರಾಟದ ಸಮಸ್ಯೆ ಇದ್ದರೆ ಹೇಗಿರಬೇಕು? ಮನೆ ಮದ್ದು ಏನು?

ಉಸಿರಾಟದ ಸಮಸ್ಯೆ ಇದ್ದರೆ ಹೇಗಿರಬೇಕು? ಮನೆ ಮದ್ದು ಏನು?

by manager manager

ಉಸಿರಾಟದ ಸಮಸ್ಯೆ ನಮ್ಮ ಜೀವಕ್ಕೆ ಕೂತ್ತಾಗುವ ಸನ್ನಿವೇಶಗಳನ್ನು ತಂದ್ದೊಡ್ಡುವಲ್ಲಿ ಮೊದಲ ಸ್ಥಾನದಲ್ಲಿದೆ ಹಾಗಾಗೀ ಮನುಷ್ಯ ಆರಾಮವಾಗಿ ಉಸಿರಾಡುತ್ತಿದ್ದಾನೆ ಎಂದರೆ ಅವನು ಆರೋಗ್ಯವಾಗಿದ್ದಾನೆ ಎಂದೇ ಅರ್ಥ. ಉಬ್ಬಸ ಸಮಸ್ಯೆಯುಳ್ಳ ರೋಗಿಗಳು ಸಾಮಾನ್ಯವಾಗಿ ಇನ್ಹೇಲರ್ ಬಳಕೆ ಮಾಡುತ್ತಾರೆ. ಅಥವಾ ವೈದ್ಯರ ಸಲಹೆ ಮೇರೆಗೆ ಹಲವು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ಇನ್ಹೇಲರ್ ಬಳಸದೆ ಮನೆಯಲ್ಲೇ ಉಬ್ಬಸದ ತೊಂದರೆಯನ್ನು ನಿವಾರಿಸಲು ಹಲವು ಮಾರ್ಗಗಳಿವೆ. ಈ ಪೈಕಿ, ಪ್ರಮುಖ ಅಥಾ ಸುಲಭವಾದ ೬ ವಿಧಾನಗಳ ಮೂಲಕ ಉಬ್ಬಸ ಸಮಸ್ಯೆಗೆ ನಿವಾರಣೆ ಮಾಡಿಕೊಳ್ಳಬಹುದು. ಅದು ಹೇಗೆ ಗೊತ್ತಾ?

  • ಬಿಸಿ ನೀರಿಗೆ ಸ್ವಲ್ಪ ನೀಲಗಿರಿ ಎಣ್ಣೆ ಹಾಕಿ ಅದರ ಆವಿಯನ್ನು ಉಸಿರಾಟದ ಮೂಲಕ ದೇಹದೊಳಕ್ಕೆ ಎಳೆದುಕೊಂಡರೆ ಉಬ್ಬಸ ಸಮಸ್ಯೆಗೆ ಉತ್ತಮ ಪರಿಣಾಮ ಬೀರುತ್ತದೆ.
  • ಉಸಿರಾಡಲು ಕಷ್ಟವಾದಾಗ ಬಿಸಿ ನೀರಿನಿಂದ ಶವರ್ ಬಾತ್ ಮಾಡಿದರೆ ಉಬ್ಬಸದ ತೊಂದರೆಯಿAದ ರಿಲ್ಯಾಕ್ಸ್ ಅನಿಸುತ್ತದೆ.
  • ಉಗುರು ಬೆಚ್ಚನೆಯ ನೀರಿಗೆ ಸ್ವಲ್ಪ ನಿಂಬೆ ರಸ ಬೆರೆಸಿ ಕುಡಿದರೆ ಸಾಕು ಉಸಿರಾಟ ಸರಾಗವಾಗುತ್ತದೆ. ಇದರಿಂದ ಉಬ್ಬಸ ಸಮಸ್ಯೆಯಿಂದ ರಿಲೀಫ್ ನೀಡುತ್ತದೆ.
  • ನೀರಿಗೆ ಎರಡು ಟೇಬಲ್ ಸ್ಪೂನ್ ಆ್ಯಪ್ ಸೈಡರ್ ವಿನೆಗರ್ ಮತ್ತು ಒಂದು ಟೇಬಲ್ ಸ್ಪೂನ್ ಜೇನುತುಪ್ಪ ಬೆರೆಸಿ ಆಗಾಗ ಕುಡಿದರೆ ಶ್ವಾಸಕೋಶದ ಆರೋಗ್ಯಕ್ಕೆ ಉತ್ತಮ. ಇದರಿಂದ ಉಬ್ಬಸದ ತೊಂದರೆ ಕಡಿಮೆಯಾಗುವುದು.
  • ಉಬ್ಬಸ ಸಮಸ್ಯೆಗೆ ಶುಂಠಿ ತುಂಬಾ ಒಳ್ಳೆಯದು. ಇದರಲ್ಲಿರುವ ಉರಿ ನಿರೋಧಕ ಗುಣ ಉಸಿರಾಟಕ್ಕೆ ಇರುವ ಅಡೆತಡೆಗಳನ್ನು ದೂರ ಮಾಡುತ್ತದೆ. ಎದೆಯಲ್ಲಿ ಉಂಟಾಗುವ ಬಿಗಿತವನ್ನು ಇದು ಕಡಿಮೆ ಮಾಡುತ್ತದೆ. ಜತೆಗೆ, ಶುಂಠಿ ಹಾಕಿದ ಹರ್ಬಲ್ ಚಹಾ ಮತ್ತು ಬಿಸಿ ಬಿಸಿ ಸೂಪ್ ಕುಡಿದರೂ ಸಹ ಉಬ್ಬಸದ ಸಮಸ್ಯೆ ಕಡಿಮೆಯಾಗುತ್ತದೆ.
  • ಒಂದು ಕಪ್ ಹಾಲು ಅಥವಾ ನೀರಿನಲ್ಲಿ ಬೆಳ್ಳುಳ್ಳಿಯ ನಾಲ್ಕು ಎಸಳುಗಳನ್ನು ಬೇಯಿಸಿ. ಈ ನೀರನ್ನು ಪ್ರತಿದಿನ ಎರಡು ಮೂರು ಬಾರಿ ಕುಡಿದರೆ ಉಬ್ಬಸದ ತೊಂದರೆ ಕಡಿಮೆಯಾಗುವುದು ಎಂದು ತಜ್ಞರು ಹೇಳುತ್ತಾರೆ.
  • ಲೈಂಗಿಕತೆಗೂ ಮುನ್ನ ಸಾಕಷ್ಟು ಕೆಮ್ಮಿಕೊಳ್ಳಿ ಉಸಿರಾಟದ ತೊಂದರೆ ಇರುವ ವ್ಯಕ್ತಿಗಳಿಗೆ, ವಿಶೇಷವಾಗಿ ಎದೆಯಲ್ಲಿ ಚಳಿ ಹೊಂದಿರುವವರು ಬಲವಂತವಾಗಿಯಾದರೂ ಸರಿ, ಗಂಟಲಲ್ಲಿ ಸಂಗ್ರಹವಾಗಿದ್ದ ಕಫವನ್ನು ನಿವಾರಿಸಿಕೊಂಡೇ ಮುಂದುವರೆಯಬೇಕು. ಇದರಿಂದ ಪ್ರಣಯದ ಸಮಯದಲ್ಲಿ ಉಸಿರಾಟ ಹೆಚ್ಚು ಸರಾಗವಾಗಿರುತ್ತದೆ.
  • ಕೇವಲ ನಿರಾಳರಾಗಿದ್ದ ಸಮಯದಲ್ಲಿ ಮಾತ್ರವೇ ಈ ಕ್ರಿಯೆಗೆ ಮುಂದಾಗಿ ಲೈಂಗಿಕ ಕ್ರಿಯೆ ಸರಾಗವಾಗಿ ನಡೆಯಲು ದೇಹ ಮತ್ತು ಮನಸ್ಸುಗಳೆರಡೂ ನಿರಾಳವಾಗಿದ್ದು ಯಾವುದೇ ಒತ್ತಡದಲ್ಲಿರದೇ ಇರುವುದು ಅವಶ್ಯ. ಈ ಸಮಯದಲ್ಲಿ ಕೂಡುವ ಮೂಲಕ ಶ್ವಾಸಕೋಶಗಳ ಮೇಲೆ ಅತಿ ಕಡಿಮೆ ಒತ್ತಡವಿರುವ ಕಾರಣ ಆತ್ಮೀಯ ಕ್ಷಣಗಳಲ್ಲಿಯೂ ಏನೂ ತೊಂದರೆಯಾಗುವುದಿಲ್ಲ.

ಉಸಿರಾಟದ ತೊಂದರೆ ಇರುವ ವ್ಯಕ್ತಿಗಳು ಸಾಮಾನ್ಯವಾಗಿ ಉಸಿರಿನ ವೇಗವನ್ನು ಹೆಚ್ಚಿಸುವ ಯಾವುದೇ ಕಾರ್ಯವನ್ನು ಕೈಗೊಳ್ಳಲು ಹಿಂಜರಿಯುತ್ತಾರೆ. ಇದರಲ್ಲಿ ಸಂಗಾತಿಯೊಂದಿಗೆ ಕೂಡುವ ಆತ್ಮೀಯ ಕ್ಷಣಗಳೂ ಒಂದು. ಏಕೆಂದರೆ ಈ ಸಮಯದಲ್ಲಿ ಏರುವ ಉಸಿರಾಟದ ಗತಿ ಅವರ ಆರೋಗ್ಯವನ್ನು ಇನ್ನಷ್ಟು ಉಲ್ಬಣಗೊಳಿಸಬಹುದು ಎಂಬ ಅನುಮಾನ ಇವರಿಗೆ ಕಾಡುತ್ತಿರುತ್ತದೆ. ಕೆಲವರು ಮಿಲನದ ಸಮಯದಲ್ಲಿ ಈ ಸ್ಥಿತಿಗೆ ತಲುಪಿ ತಮಗೂ, ತಮ್ಮ ಸಂಗಾತಿಯೂ ಅಪಾರವಾದ ಬೇಸರ ಹಾಗೂ ಉಸಿರುಗಟ್ಟುವ ಮೂಲಕ ಆಪಾಯವನ್ನೂ ಆಹ್ವಾನಿಸಿಕೊಂಡಿದ್ದಾರೆ. ಆದರೆ ಈ ತೊಂದರೆ ಇದೆ ಎಂದ ಮಾತ್ರಕ್ಕೇ ಇವರು ನಿಸರ್ಗದ ಈ ಅಪ್ರತಿಮ ಕೊಡುಗೆಯಿಂದ ವಂಚಿತರಾಗಬೇಕಾಗಿಲ್ಲ. ತಜ್ಞರ ಪ್ರಕಾರ ಉಸಿರಾಟದ ತೊಂದರೆ ಇರುವ ವ್ಯಕ್ತಿಗಳು ಕೆಲವು ಆರೋಗ್ಯಕರ ಕ್ರಮಗಳನ್ನು ಅನುಸರಿಸುವ ಮೂಲಕ ತಮ್ಮ ಸಂಗಾತಿಯೊಂದಿಗೆ ಸುಖಕರ ಕ್ಷಣಗಳನ್ನು ಕಳೆಯಬಹುದು.

ಉಸಿರಾಟದ ತೊಂದರೆಯನ್ನು ನಿರ್ವಹಿಸಲು ಯೋಗಾಭ್ಯಾಸಕ್ಕಿಂತ ಉತ್ತಮವಾದ ವ್ಯಾಯಾಮ ಮತ್ತೊಂದಿಲ್ಲ. ಉಸಿರಾಟವನ್ನು ಉತ್ತಮಗೊಳಿಸುವ ಕೆಲವು ಆಸನಗಳನ್ನು ನಿಯಮಿತವಾಗಿ ಅನುಸರಿಸುತ್ತಾ ಬರುವ ಮೂಲಕ ನರಗಳನ್ನು ಶಾಂತಗೊಳಿಸಲು, ಮನಸ್ಸನ್ನು ಹತೋಟಿಯಲ್ಲಿಡಲು, ಧನಾತ್ಮಕ ಧೋರಣೆ ತಳೆಯಲು ಹಾಗೂ ಮುಖ್ಯವಾಗಿ ಶ್ವಾಸಕೋಶಗಳನ್ನು ಹಿಂಡುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದರ ಜೊತೆಗೇ ನಿಧಾನಗತಿಯ ಓಟ, ವೇಗದ ನಡಿಗೆ, ಧ್ಯಾನ ಹಾಗೂ ಈಜು ಸಹಾ ಶ್ವಾಸಕೋಶಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ ಹಾಗೂ ಇವು ಉಸಿರಾಟದ ತೊಂದರೆ ಇರುವ ವ್ಯಕ್ತಿಗಳಿಗೆ ಮಿಲನದ ಸಮಯದಲ್ಲಿ ಅಗತ್ಯವಾದ ತ್ರಾಣವನ್ನು ಒದಗಿಸುತ್ತದೆ. ಅಲ್ಲದೇ ಉಸಿರಾಟದ ತೊಂದರೆ ಇರುವ ವ್ಯಕ್ತಿಗಳು ಕೆಲವು ಆಹಾರಗಳನ್ನು ವರ್ಜಿಸಬೇಕಾಗುತ್ತದೆ. ತಜ್ಞರ ಪ್ರಕಾರ ದೇಹವನ್ನು ತಂಪುಗೊಳಿಸುವ ಯಾವುದೇ ಆಹಾರಗಳು ಅಸ್ತಮಾ ಹಾಗೂ ಶ್ವಾಸಸಂಬಂಧಿ ತೊಂದರೆಗಳಿರುವ ವ್ಯಕ್ತಿಗಳಿಗೆ ಸಲ್ಲದು. ಅನಾನಾಸು, ಐಸ್ ಕ್ರೀಂ, ಪೇರಳೆ, ಲೆಟ್ಯೂಸ್ ಮೊದಲಾದ ದೇಹವನ್ನು ತಣಿಸುವ ಆಹಾರಗಳು ಈ ವ್ಯಕ್ತಿಗಳಿಗೆ ಸೂಕ್ತವಲ್ಲ.

  • ಉಸಿರಾಟದ ತೊಂದರೆಗೆ ಕೆಲವು ಮನೆಮದ್ದುಗಳು ಯೋಗಾಭ್ಯಾಸ, ಈಜು, ಧ್ಯಾನ ಈ ಮೂರೂ ಉಸಿರಾಟದ ತೊಂದರೆ ಇರುವ ವ್ಯಕ್ತಿಗಳಿಗೆ ಅತ್ಯುತ್ತಮವಾದ ವ್ಯಾಯಾಮಗಳಾಗಿವೆ. ಇದರ ಹೊರತಾಗಿ ಯಾವಾಗ ಉಸಿರು ಕಷ್ಟಕರ ಎನಿಸತೊಡಗಿತೋ ಆಗ ಬಿಸಿನೀರನ್ನು ನಿಧಾನವಾಗಿ ಗುಟುಕರಿಸುವುದರಿಂದಲೂ ಕೊಂಚ ಉಪಶಮನ ದೊರಕಬಹುದು.

ಕೋವಿಡ್-19 ಲಸಿಕೆಯನ್ನು ಪಡೆಯುವುದು ಹೇಗೆ, ಇದು ಹೇಗೆ ಕೆಲಸ ಮಾಡುತ್ತದೆ ?