Home » ನಮ್ಮ ಮೆಟ್ರೋ 220 ಹುದ್ದೆಗಳ ಅರ್ಜಿಗೆ ದಿನಾಂಕ ವಿಸ್ತರಣೆ: ಮೇ.6 ಕೊನೆ

ನಮ್ಮ ಮೆಟ್ರೋ 220 ಹುದ್ದೆಗಳ ಅರ್ಜಿಗೆ ದಿನಾಂಕ ವಿಸ್ತರಣೆ: ಮೇ.6 ಕೊನೆ

by manager manager

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಹಭಾಗಿತ್ವದ ‘ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ’ ತನ್ನ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹಲವು ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ಕಳೆದ ಮಾರ್ಚ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಅರ್ಜಿ ಸಲ್ಲಿಕೆಯ ದಿನಾಂಕವು ಮುಗಿದಿತ್ತು. ಈಗ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಿದೆ.

ಹುದ್ದೆಗಳ ವಿವರ

ಗ್ರಾಜುಯೇಟ್ ಇಂಜಿನಿಯರ್ಸ್‌(ಸಿವಿಲ್) – 25

ಮ್ಯಾನೇಜರ್ (ಎಚ್‌ಆರ್) – 02

ಅಸಿಸ್ಟಂಟ್ ಮ್ಯಾನೇಜರ್ (ಎಚ್‌ಆರ್) – 04

ಕನ್ಸಲ್ಟಂಟ್ಸ್ – 02

ಇಂಜಿನಿಯರ್ಸ್‌ – 187

ಒಟ್ಟು ಹುದ್ದೆಗಳು: 220

ಅರ್ಜಿ ಸಲ್ಲಿಸಲು ವಿಸ್ತರಿಸಿದ ಕೊನೆ ದಿನಾಂಕ: 06-05-2019

ಶೈಕ್ಷಣಿಕ ಅರ್ಹತೆ

– ಇಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಇಂಜಿನಿಯರಿಂಗ್ ವಿದ್ಯಾಸಂಸ್ಥೆಗಳಿಂದ ಸಿವಿಲ್, ಸ್ಟ್ರಕ್ಚರಲ್, ರಾಕ್ ಮೆಕಾನಿಕ್, ಅರ್ಕಿಟೆಕ್ಚರ್ ವಿಭಾಗಗಳಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರಬೇಕು.

– ಮ್ಯಾನೇಜರ್/ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳಿಗೆ MBA ಪದವಿ

– ಕನ್ಸಲ್ಟಂಟ್ ಹುದ್ದೆಗಳಿಗೆ ಟ್ರಾನ್ಸ್‌ಪೋರ್ಟ್ ಪ್ಲಾನಿಂಗ್, ಟ್ರಾನ್ಸ್‌ಪೋರ್ಟ್ ಎಕನಾಮಿಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ

– ಪದವಿಯನ್ನು ಕನಿಷ್ಠ ಶೇ.60 ಅಂಕಗಳೊಂದಿಗೆ ಪಡೆದಿರಬೇಕು.

ವಯೋಮಿತಿ

– ಇಂಜಿನಿಯರ್ ಪದವಿ ಹುದ್ದೆಗಳಿಗೆ 35 ವರ್ಷ

– ಮ್ಯಾನೇಜರ್ ಪದವಿ ಹುದ್ದೆಗಳಿಗೆ 40 ವರ್ಷ

– ಇಂಜಿನಿಯರ್ ಹುದ್ದೆಗಳು ವಿವಿಧ ವಿಭಾಗಗಳಲ್ಲಿ ವಿಂಗಡಣೆ ಆಗಿದ್ದು, ವಿಭಾಗ ಹಾಗೂ ಇಂಜಿನಿಯರಿಂಗ್ ಹುದ್ದೆಗೆ ಅನುಗುಣವಾಗಿ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

ಸರ್ಕಾರದ ನಿಯಮಗಳಂತೆ ಅರ್ಹ ಅಭ್ಯರ್ಥಿಗಳಿಗೆ ಸೂಕ್ತ ಪ್ರಮಾಣದಲ್ಲಿ ವಯೋಸಡಿಲಿಕೆ ಕಲ್ಪಿಸಲಾಗಿದೆ.

ನೇಮಕಾತಿ ಪ್ರಕ್ರಿಯೆ ಹೇಗೆ?

– ಇಂಜಿನಿಯರಿಂಗ್ ಪದವಿ ಹುದ್ದೆಗಳನನ್ನು ಗೇಟ್-2019 ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ನೇಮಿಕ ಮಾಡಿಕೊಳ್ಳಲಾಗುತ್ತದೆ.

– ಇತರೆ ಹುದ್ದೆಗಳನ್ನು ಶೈಕ್ಷಣಿಕ ಅರ್ಹತೆ, ಸಾಧನೆ ಹಾಗೂ ಸೇವಾ ಅನುಭವದ ಆಧಾರದಲ್ಲಿ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?

ಅರ್ಹ ಅಭ್ಯರ್ಥಿಗಳು BMRCL ಅಧಿಕೃತ ವೆಬ್‌ಸೈಟ್‌ನಲ್ಲಿ ಕರಿಯರ್ ಆಯ್ಕೆ ಮೇಲೆ ಕ್ಲಿಕ್ ಮಾಡಿ ಅಲ್ಲಿ ಅಗತ್ಯ ಮಾಹಿತಿಗಳನ್ನು ನೀಡುವುದರ ಮೂಲಕ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ನಂತರ ಅದನ್ನು ಪ್ರಿಂಟ್ ತೆಗೆದುಕೊಂಡು ಅಂಚೆ ಮೂಲಕ ಈ ಕೆಳಗೆ ನೀಡಿರುವ ವಿಳಾಸಕ್ಕೆ ಕಳುಹಿಸಬೇಕು. ಸೂಚನೆ: ಅರ್ಜಿ ಸಲ್ಲಿಸುವ ಹುದ್ದೆಯ ಹೆಸರನ್ನು ನಮೂದಿಸಬೇಕು.

ಅರ್ಜಿ ಕಳುಹಿಸಬೇಕಾದ ವಿಳಾಸ: ಜನರಲ್ ಮ್ಯಾನೇಜರ್(HR), BMRCL, 3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆ.ಎಚ್.ರೋಡ್, ಶಾಂತಿನಗರ, ಬೆಂಗಳೂರು-560027

ಇತರೆ ಹೆಚ್ಚಿನ ಮಾಹಿತಿಗೆ : http://english.bmrc.co.in/Career

ಬೆಂಗಳೂರು ನಮ್ಮ ಮೆಟ್ರೋ ರೈಲ್ ನಿಗಮ ನಿಯಮಿತ ನೇಮಕಾತಿ 2019 ನೋಟಿಫಿಕೇಶನ್ ಗಾಗಿ – ಕ್ಲಿಕ್ ಮಾಡಿ

ಬೆಂಗಳೂರು ನಮ್ಮ ಮೆಟ್ರೋ ರೈಲ್ ನಿಗಮ ನಿಯಮಿತ ನೇಮಕಾತಿ 2019 ಅರ್ಜಿ ಸಲ್ಲಿಸಲು – ಕ್ಲಿಕ್ ಮಾಡಿ