Home » ಭೂಕಂದಾಯ ಇಲಾಖೆಯಲ್ಲಿ ಸಲ್ಲಿಸಿದ ಅರ್ಜಿ ವಿವರ ಈಗ ಕುಳಿತಲ್ಲೇ ಲಭ್ಯ: ಚೆಕ್‌ ಮಾಡುವುದು ಹೇಗೆ ಗೊತ್ತೇ?

ಭೂಕಂದಾಯ ಇಲಾಖೆಯಲ್ಲಿ ಸಲ್ಲಿಸಿದ ಅರ್ಜಿ ವಿವರ ಈಗ ಕುಳಿತಲ್ಲೇ ಲಭ್ಯ: ಚೆಕ್‌ ಮಾಡುವುದು ಹೇಗೆ ಗೊತ್ತೇ?

by manager manager

ಇದು ಮೊಬೈಲ್ ಜಗತ್ತು. ಈಗ ಏನನ್ನೇ ತಿಳಿಯ ಬೇಕಾದರೂ ಪ್ರಪಂಚ ಸುತ್ತೊ ಅಗತ್ಯವಿಲ್ಲ. ಅಗ್ಗವಾಗಿ ಕುಳಿತಲ್ಲೇ ತಿಳಿಯಬಹುದು. ಅದಕ್ಕೆ ಸರ್ಕಾರಿ ಸೇವೆಗಳು ಹೊರತಾಗಿಲ್ಲ. ಅದರಲ್ಲೂ ಮುಖ್ಯವಾಗಿ ಕಂದಾಯ ಇಲಾಖೆ. ಕಂದಾಯ ‌ಇಲಾಖೆಗೆ‌ ಸಂಬಂಧಿಸಿದಂತೆ, ಖಾತೆ ಬದಲಾವಣೆ , ಸರ್ವೇ ದಾಖಲೆ , ಪಹಣಿ ಇತ್ಯಾದಿಗಳಿಗೆ‌ ತಾವು ಸಲ್ಲಿಸಿರುವ ಅರ್ಜಿಯ ಸ್ಥಿತಿ ಮತ್ತು ಇತರೆ‌ ಮಾಹಿತಿಯನ್ನ ನಾವು ಕುಳಿತಲ್ಲೇ ತಮ್ಮ ಮೊಬೈಲ್ ಮೂಲಕ ಕಂದಾಯ ಇಲಾಖೆ ಅಧಿಕೃತ ವೆಬ್‌ಸೈಟ್ನಲ್ಲಿ ಚೆಕ್ ಮಾಡಬಹುದು.

ಕರ್ನಾಟಕ ಸರ್ಕಾರ ಕಂದಾಯ ಇಲಾಖೆ ವೆಬ್ ಸೈಟ್ ಗೆ ಹೊಸ ಡಿಜಿಟಲ್ ಟೂಲ್ ಒಂದನ್ನ ಸೇರ್ಪಡೆ ಮಾಡಿದೆ. ಅದೆ ಮೋಜಿನಿ (Mojini). ಇಲ್ಲಿ ನಿಮಗೆ ಕಂದಾಯ ಇಲಾಖೆಯಲ್ಲಿ ನೀವು ಸಲ್ಲಿಸಿದ ಯಾವುದೇ ಅರ್ಜಿಯ ಸ್ಥಿತಿ ಹಾಗೂ ದಾಖಲಾತಿಯ ವಿವರವನ್ನು ಆನ್ಲೈನ್ ನಲ್ಲೇ ವೀಕ್ಷಿಸುವ ಮತ್ತು ಪರಿಶೀಲಿಸುವ ಅವಕಾಶವಿದೆ.

ರೈತರು ಅಥವಾ ಅರ್ಜಿದಾರರ ಮೊಬೈಲ್ ಸಂಖ್ಯೆ, ಸರ್ವೇ ಸಂಖ್ಯೆ ಅಥವಾ ಅರ್ಜಿ ಸಂಖ್ಯೆಯನ್ನು ಬಳಸಿಕೊಂಡು ದಾಖಲೆಗಳನ್ನು ಹುಡುಕಬಹುದು. ರೈತರು ತಮ್ಮ ಜಮೀನಿನ ಸಮೀಕ್ಷೆಗೆ ಅರ್ಜಿ ಸಲ್ಲಿಸಬಹುದು ಮತ್ತು ವೆಬ್‌ಸೈಟ್ ಮೂಲಕ ಶುಲ್ಕ ಪಾವತಿಸಬಹುದು.

ಭೂ ಸಮೀಕ್ಷೆಗೆ ಅರ್ಜಿ ಸಲ್ಲಿಸುವುದರ ಹೊರತಾಗಿ, ನಾಗರಿಕರು ಇತರ ಹಲವಾರು ಸೇವೆಗಳನ್ನು ಇಲ್ಲಿ ಪಡೆಯಬಹುದು, ಉದಾಹರಣೆಗೆ ಜಮೀನುಗಳ ಸಮೀಕ್ಷೆಗಾಗಿ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸುವುದು, ಹಂಚಿಕೆ ಸ್ಥಿತಿ, ವಿವಿಧ ರೇಖಾಚಿತ್ರಗಳನ್ನು ವೀಕ್ಷಿಸಲು — 11E ಸ್ಕೆಚ್, ಭೂ ಪರಿವರ್ತನೆ ಮತ್ತು ಫೋಡಿ. ಗ್ರಾಮದ ಕಂದಾಯ ನಕ್ಷೆಗಳನ್ನು ನೋಡಬಹುದು ಮತ್ತು ನಕಲು ಮಾಡಬಹುದು ಹಾಗೆ ಮೋಜಿನಿಯಲ್ಲಿ ವಿವಾದ ವರದಿಗಳ ಪ್ರತಿಗಳನ್ನು , ಭೂಮಾಪನ ಇಲಾಖೆಯ ಸುತ್ತೋಲೆಗಳು, ಪೂರ್ವ ಮ್ಯುಟೇಶನ್ ಸ್ಕೆಚ್, ಭೂ ಪರಿವರ್ತನೆಯ ರೇಖಾಚಿತ್ರ, ಹದ್ದುಬಸ್ತು ಮತ್ತು ತತ್ಕಲ್ ಪೋಡಿಗಳು ಸಿಗುತ್ತವೆ. ಟಿಪ್ಪಣಿ, ಪಕ್ಕಾ ಪುಸ್ತಕ ಮತ್ತು ಅಟ್ಲಾಸ್‌ನಂತಹ ಆನ್‌ಲೈನ್ ಸಮೀಕ್ಷೆ ದಾಖಲೆಗಳಿಗಾಗಿ ನಾಗರಿಕರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಸಲ್ಲಿಸಿದ ಆರ್ಜಿಯ ವಿವರ ತಿಳಿಯೋದು ಹೇಗೆ?
ಹಂತ 01 – ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ವೆಬ್‌ಸೈಟ್‌ https://bhoomojini.karnataka.gov.in/ ಗೆ ಭೇಟಿ ನೀಡಿ.
ಹಂತ 02- ತೆರೆದ ಪುಟದಲ್ಲಿ ಮೋಜಿನಿ ವರದಿಗಳನ್ನು ವೀಕ್ಷಿಸಿ’ ಟೂಲ್ ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿ.
ಹಂತ 03 – ಟೂಲ್ ಪೇಜ್ ಓಪನ್ ಅದ ತಕ್ಷಣ ನಿಮಗೆ ಕಾಣಸಿಗುವ ಮೊದಲ ಆಯ್ಕೆಯೇ ಅರ್ಜಿ ಸ್ಥಿತಿ. ಅದರ ಮೇಲೆ ಕ್ಲಿಕ್ ಮಾಡಿ
ಹಂತ 04 – ಆಲ್ಲಿ ನಿಮಗೆ ಮೊದಲಿಗೆ ಮೂರು ಆಯ್ಕೆಗಳು ಕಾಣಿಸುತ್ತವೆ.
1-ಅರ್ಜಿಯ ಸಂಖ್ಯೆ
2- ಆರ್ಜಿ ಸಲ್ಲಿಸಿದ ವೇಳೆಯಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆ
3- ಸರ್ವೇ ನಂಬರ್
ಈ ಮೇಲಿನ ಮೂರು ಅಯ್ಕೆಗಳಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದಾದರೂ ಒಂದನ್ನು ಅಯ್ಕೆ ಮಾಡಿ ವಿವರ ಪಡೆಯಬಹುದು.

ಗಮನಿಸಿ ನೀವು ಅರ್ಜಿ ಸಲ್ಲಿಸಿದ ದಾಖಲಾತಿಯ ಸ್ಥಿತಿ ತಿಳಿಯಲು ಸರ್ವೇ ನಂಬರ್ ಆಯ್ಕೆಯನ್ನು ಬಳಸುವುದಾದರೆ ನೀವು ಅರ್ಜಿ ಸಲ್ಲಿಸಿದ ಭೂಮಿಯ ಈ ಕೆಳಗಿನ ವಿವರಗಳನ್ನು ನಮೂದಿಸಬೇಕು

  • ಜಿಲ್ಲೆ ಅಯ್ಕೆ ಮಾಡಿ
    -ತಾಲೂಕಿನ ಅಯ್ಕೆ ಮಾಡಿ
    -ಹೋಬಳಿಯ ಅಯ್ಕೆ ಮಾಡಿ
    -ಗ್ರಾಮವನ್ನು ಅಯ್ಕೆ ಮಾಡಿ
    -ಸರ್ವೇ ನಂಬರ್ ಅಯ್ಕೆ ಮಾಡಿ
  • ಸರ್ವೇ ನಂಬರ್ ಆಯ್ಕೆ ಮಾಡಿ
    -ಹಿಸ್ಸಾ ನಂಬರ್ ಅಯ್ಕೆ ಮಾಡಿ

ಹಂತ 05 – ಕೊನೆಯಲ್ಲಿ Get status ಮೇಲೆ ಕ್ಲಿಕ್ ಮಾಡಿ.
ನೆನಪಿಡಿ ಮೇಲೆ ನೀಡಿದ ಎಲ್ಲಾ ವಿವರಗಳನ್ನು ತಪ್ಪಿಲ್ಲದೆ ನಮೂದಿಸಿದರೆ ಮಾತ್ರ ನಿಮ್ಮ ಅರ್ಜಿ ವಿವರ ಪಡೆಯಬಹುದಾಗಿದೆ. ಸದ್ಯ ಈ ವೆಬ್ ಪೋರ್ಟಲ್ ಹೆಚ್ಚಾಗಿ ಭೂ ಸಮೀಕ್ಷೆ ವಿವರಗಳ ಬಗ್ಗೆ ಮಾಹಿತಿಯನ್ನು ತಾಲೂಕು ಕಚೇರಿ ಸುತ್ತದಂತೆ ಇದ್ದಲ್ಲಿಯೇ ಪಡೆಯಲು ಹೆಚ್ಚು ಉಪಯುಕ್ತವಾಗುತ್ತಿವೆ.