Home » ವಿಡಿಯೋ: ನೋಡಬನ್ನಿ ಒಮ್ಮೆ ಏಕ ಶಿಲಾ ವಿಗ್ರಹ ಭೂ ವರಹಾನಾಥ ಸ್ವಾಮಿಯ

ವಿಡಿಯೋ: ನೋಡಬನ್ನಿ ಒಮ್ಮೆ ಏಕ ಶಿಲಾ ವಿಗ್ರಹ ಭೂ ವರಹಾನಾಥ ಸ್ವಾಮಿಯ

by manager manager

ಭೂ ವರಹಾನಾಥ ಸ್ವಾಮಿ ದೇವಾಲಯ: ಮಂಡ್ಯ ಜಿಲ್ಲೆ, ಕೆ.ಆರ್‌.ಪೇಟೆ ತಾಲೂಕು, ಬೂಕನಕೆರೆ ಹೋಬಳಿಯ ಕಲ್ಲಹಳ್ಳಿ ಗ್ರಾಮದಲ್ಲಿ ಇರುವ ಏಕ ಶಿಲೆಯ ಬೃಹತ್ ವಿಗ್ರಹ. ಉಗ್ರ ನರಸಿಂಹನ ಅವತಾರ ವರಹಾನಾಥ ವಿಗ್ರಹ ಇದಾಗಿದೆ. ಈ ದೇವಾಲಯ ಹಲವು ಕಾರಣಗಳಿಂದ ಆಕರ್ಷಿತವಾಗಿದ್ದು, ಭಕ್ತರ ಬೇಡಿಕೆಗಳನ್ನು ಈಡೇರಿಸುವ ದೇವರು ಎಂದೇ ಪ್ರಸಿದ್ಧಿಯಾಗಿದೆ. ಕೇವಲ ಪ್ರವಾಸದ ಗುಂಗಿನಲ್ಲಿ ಅಲ್ಲದೇ ದೇವರನ್ನು ನೋಡಲು ಇಲ್ಲಿ ಹೆಚ್ಚು ಜನರು ಬರುತ್ತಾರೆ. ದೇವಾಲಯವು ಕಾವೇರಿ ನದಿ ಮುಖಜ ಭೂಮಿಯಲ್ಲೇ ಇರುವುದರಿಂದ, ಕಾವೇರಿ ನದಿ 124 ಅಡಿ ತುಂಬುತ್ತಿರುವ ಸಮಯದಲ್ಲಿ ಇಲ್ಲಿಗೆ ಬಂದರೆ ನೋಡಲು ಎರಡು ಕಣ್ಣು ಸಾಲುವುದಿಲ್ಲ. ಆ ದೇವಾಲಯದ ವಿಡಿಯೋ, ದೇವರ ಬಗ್ಗೆ ಜನರು ಏಣು ಹೇಳುತ್ತಾರೆ ಎಂಬುದನ್ನು ಈ ವಿಡಿಯೋ ದಲ್ಲಿ ನೋಡಿರಿ.

ಪ್ರತಿದಿನ ಈ ದೇವಾಲಯದಲ್ಲಿ ಬೆಳಿಗ್ಗೆ ದೇವರ ಪೂಜೆ ಆದ ನಂತರ 10 ಗಂಟೆಯಿಂದ ರಾತ್ರಿ 7-30 ಗಂಟೆ ವರೆಗೆ ಪ್ರಸಾದ ನೀಡಲಾಗುತ್ತದೆ. ಪ್ರತಿದಿನ ಪ್ರಸಾದ ವಿತರಣೆಗಾಗಿ ಹಲವು ದಾನಿಗಳು ಪ್ರಸಾದ ತಯಾರಿಸಲು ಬೇಕಾದ ಎಲ್ಲಾ ರೀತಿಯ ಆಹಾರ ಸಾಮಾಗ್ರಿಗಳನ್ನು ದಾನ ನೀಡುತ್ತಾರೆ.

Bhu Varaha Swamy temple near Mysore timings – 10am to 8pm.

You may also like