Home » ಬೆಂಗಳೂರು ಡಿಸಿಸಿ ಬ್ಯಾಂಕ್‌ ನೇಮಕಾತಿ 2023: 96 ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು ಡಿಸಿಸಿ ಬ್ಯಾಂಕ್‌ ನೇಮಕಾತಿ 2023: 96 ಹುದ್ದೆಗೆ ಅರ್ಜಿ ಆಹ್ವಾನ

by manager manager

ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತವು ವಿವಿಧ ಗ್ರೂಪ್‌ ಬಿ, ಗ್ರೂಪ್‌ ಸಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಕಿರಿಯ ಆಡಳಿತ ವರ್ಗ-1 ಶಾಖಾ ವ್ಯವಸ್ಥಾಪಕರು, ಹಿರಿಯ ಸಹಾಯಕರು, ಕಿರಿಯ ಸಹಾಯಕರು, ಶೀಘ್ರಲಿಪಿಗಾರರು, ಕಂಪ್ಯೂಟರ್ ಆಪರೇಟರ್, ಡ್ರೈವರ್, ಇತರೆ ಹುದ್ದೆಗಳಿವೆ. ಹೆಚ್ಚಿನ ಮಾಹಿತಿ ಕೆಳಗಿನಂತೆ ತಿಳಿದು ಅರ್ಜಿ ಹಾಕಿರಿ.

ಉದ್ಯೋಗ ಬ್ಯಾಂಕ್ ಹೆಸರು : ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ
ಹುದ್ದೆಗಳ ಸಂಖ್ಯೆ : 96
ಉದ್ಯೋಗ ಸ್ಥಳ : ಬೆಂಗಳೂರು
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 28-02-2023
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆ ದಿನಾಂಕ: 28-02-2023
ಅರ್ಜಿ ಶುಲ್ಕ ರೂ.1500.
ಎಸ್‌ಸಿ / ಎಸ್‌ಟಿ/ ಪ್ರವರ್ಗ-1/ ಅಂಗವಿಕಲ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.750.

ಪೋಸ್ಟ್‌ಗಳ ವಿವರ
ಕಿರಿಯ ಸಹಾಯಕರು (ಗ್ರೂಪ್ ಬಿ-2) : 43
ಕಿರಿಯ ಆಡಳಿತ ವರ್ಗ-1 ಶಾಖಾ ವ್ಯವಸ್ಥಾಪಕರು: 04
ಹಿರಿಯ ಸಹಾಯಕರು (ಗ್ರೂಪ್ ಬಿ-1) : 19
ಶೀಘ್ರಲಿಪಿಗಾರರು (ಗ್ರೂಪ್ ಬಿ-1): 01
ಕಂಪ್ಯೂಟರ್ ಆಪರೇಟರ್ (ಗ್ರೂಪ್ ಬಿ-2) : 2
ವಾಹನ ಚಾಲಕರು (ಗ್ರೂಪ್ ಸಿ) : 04
ನಾಲ್ಕನೇ ದರ್ಜೆ ನೌಕರರು (ಗ್ರೂಪ್ ಸಿ): 23

ಯಾವ ಹುದ್ದೆಗೆ ಎಷ್ಟು ಸಂಬಳ?
ಕಿರಿಯ ಸಹಾಯಕರು (ಗ್ರೂಪ್ ಬಿ-2) : Rs.30350-58250.
ಕಂಪ್ಯೂಟರ್ ಆಪರೇಟರ್ (ಗ್ರೂಪ್ ಬಿ-2) : Rs.30350-58250
ಕಿರಿಯ ಆಡಳಿತ ವರ್ಗ-1 ಶಾಖಾ ವ್ಯವಸ್ಥಾಪಕರು: Rs.40900-78200.
ಹಿರಿಯ ಸಹಾಯಕರು (ಗ್ರೂಪ್ ಬಿ-1) : Rs.37900-70850.
ಶೀಘ್ರಲಿಪಿಗಾರರು (ಗ್ರೂಪ್ ಬಿ-1): Rs.37900-70850.
ವಾಹನ ಚಾಲಕರು (ಗ್ರೂಪ್ ಸಿ) : Rs.27650-52650.
ನಾಲ್ಕನೇ ದರ್ಜೆ ನೌಕರರು (ಗ್ರೂಪ್ ಸಿ): Rs.23500-47650.

ವಿದ್ಯಾರ್ಹತೆ
ಕಿರಿಯ ಸಹಾಯಕರು (ಗ್ರೂಪ್ ಬಿ-2) : ಪಿಯುಸಿ
ಕಿರಿಯ ಆಡಳಿತ ವರ್ಗ-1 ಶಾಖಾ ವ್ಯವಸ್ಥಾಪಕರು: ಡಿಗ್ರಿ.
ಹಿರಿಯ ಸಹಾಯಕರು (ಗ್ರೂಪ್ ಬಿ-1) : ಡಿಗ್ರಿ.
ಶೀಘ್ರಲಿಪಿಗಾರರು (ಗ್ರೂಪ್ ಬಿ-1): ಪಿಯುಸಿ/ 3 ವರ್ಷಗಳ ಡಿಪ್ಲೊಮ ಇನ್ ಕಮರ್ಷಿಯಲ್ ಪ್ರಾಕ್ಟೀಸ್
ಕಂಪ್ಯೂಟರ್ ಆಪರೇಟರ್ (ಗ್ರೂಪ್ ಬಿ-2) : ಪಿಯುಸಿ/3 ವರ್ಷಗಳ ಡಿಪ್ಲೊಮ ಇನ್ ಕಮರ್ಷಿಯಲ್ ಪ್ರಾಕ್ಟೀಸ್‌
ವಾಹನ ಚಾಲಕರು (ಗ್ರೂಪ್ ಸಿ) : 10ನೇ ತರಗತಿ
ನಾಲ್ಕನೇ ದರ್ಜೆ ನೌಕರರು (ಗ್ರೂಪ್ ಸಿ): 10ನೇ ತರಗತಿ

ವಯಸ್ಸಿನ ಅರ್ಹತೆ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ.

ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ವೆಬ್‌ಸೈಟ್‌ : https://www.bengalurudccbank.com/en/#

Apply Online