Home » ಬೆಂಗಳೂರಿನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಸೇವೆ: ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ

ಬೆಂಗಳೂರಿನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಸೇವೆ: ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ

by manager manager

ಬೆಂಗಳೂರು ನಗರ ಹೃದಯ ಭಾಗದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಹುನಿರೀಕ್ಷಿತ ಸಬರ್ಬನ್ ರೈಲು ಸೇವೆ ಆರಂಭವಾಗಿದೆ. ಈ ಮಾರ್ಗದ ರೈಲುಗಳು ವಿಮಾನ ನಿಲ್ದಾಣದ ಬಳಿಯ ಮಿಲ್ಕ್‌ ಡೈರಿ (ಕೆಐಎಡಿ) ವರೆಗೆ ಪ್ರಯಾಣಿಕರನ್ನು ತಲುಪಿಸಲಿದೆ.  ಈ ರೈಲು ಸೇವೆ ಜನವರಿ 4, 2021 ರಿಂದ ಆರಂಭವಾಗಿದೆ. ಆದರೆ ಇದೇ ದಿನ ರೈಲು ತಡವಾಗಿ ನಿರ್ಗಮಿಸಿ, ತಡವಾಗಿ ವಿಮಾಣ ನಿಲ್ದಾಣದ ಬಳಿಯ ಸ್ಟೇಷನ್ ತಲುಪಿತು. ಆದ್ದರಿಂದ ಈ ಮೊದಲು ಬಿಡುಗಡೆ ಮಾಡಿದ್ದ ರೈಲು ಸಮಯದ ಬದಲಾಗಿ ಹೊಸ ಪರಿಷ್ಕೃತ ರೈಲು ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.  

ಬೆಂಗಳೂರಿನಿಂದ ಕೆಂಪೇಗೌಡ ವಿಮಾನ ನಿಲ್ದಾಣದ ವರೆಗೆ ದಿನನಿತ್ಯ ಒಟ್ಟು 10 ರೈಲುಗಳು ಸಂಚಾರ ನಡೆಸಲಿವೆ.  
ದೇವನಹಳ್ಳಿಯಿಂದ 3, ಕ್ರಾಂತಿವೀರ ಸಂಗೋಳಿ ರಾಯಣ್ಣ (ಕೆಎಸ್‌ಆರ್) ರೈಲು ನಿಲ್ದಾಣ ಮತ್ತು ಬಂಗಾರಪೇಟೆಯಿಂದ 2, ಯಲಹಂಕ(YLK), ಯಶವಂತಪುರ (YPR) ಹಾಗೂ ಬೆಂಗಳೂರು ಕಂಟೋನ್ಮೆಂಟ್ ನಿಂದ (BNC) ತಲಾ ಒಂದು ರೈಲು ಈ ಮಾರ್ಗದಲ್ಲಿ ಚಲಿಸಲಿದೆ.  ಪ್ರಯಾಣಿಕರ ಸಂಖ್ಯೆ ಮತ್ತು ಸ್ಪಂದನೆ ಪರಿಗಣಿಸಿ ಮುಂದಿನ ದಿನಗಳಲ್ಲಿ ರೈಲು ಹೆಚ್ಚಿಸುವ ಸಾಧ್ಯತೆಯು ಇದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.  

BANGALORE CITY TO KEMPEGOWDA INTERNATIONAL AIRPORT

KEMPEGOWDA INTERNATIONAL AIRPORT TO BANGALORE CITY

Note :
SBC – KSR Bangalore City Rly Stn
BNC – Bangalore Cantonment Rly Stn BNCE- Bangalore East Rly Stn
BYPL – Baiyyappanahalli Rly Stn
YPR – Yeshvantpura Rly Stn
YNK – Yelahanka Rly Stn OHL – Oevanahalli Rly Stn
BWT – Bangarpet Rly Stn

Timings etc are subject to changes by SWR at any time


ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಾವ ಅವಧಿಯಲ್ಲಿ ಹೆಚ್ಚು ವಿಮಾನಗಳು ಬಂದಿಳಿಯುತ್ತವೆ ಹಾಗೂ ಹಾರಾಟ ನಡೆಸಲಿವೆ ಎಂಬ ಆಧಾರದ ಮೇಲೆ ರೈಲ್ವೆ ಅಧಿಕಾರಿಗಳು ವೇಳಾಪಟ್ಟಿ ಸಿದ್ಧಪಡಿಸಿದ್ದಾರೆ. ಅಲ್ಲದೇ ಹೆಚ್ಚು ವಿಮಾನಗಳು ಸಂಚರಿಸುವ ಅವಧಿಗೂ ಮುಂಚೆ ರೈಲುಗಳು ಹಾಲ್‌ಸ್ಟೇಷನ್ ರೀಚ್ ಆಗುವಂತೆ ವ್ಯವಸ್ಥೆ ಮಾಡಲಾಗಿದೆ.  

ಪ್ರತಿದಿನ ಬೆಳಿಗ್ಗೆ 5, ಸಂಜೆ 5 ರೈಲುಗಳು ಸಂಚರಿಸಲಿವೆ. ಪ್ರಾರಂಭದಲ್ಲಿ ಎಲ್ಲ ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸಲಾಗುತ್ತದೆ.  
ಒಂದು ರೈಲು ಕ್ರಾಂತಿವೀರ ಸಂಗೊಳ್ಳಿರಾಯಣ್ಣ  (ಕೆಎಸ್‌ಆರ್) ನಗರ ರೈಲು ನಿಲ್ದಾಣದಿಂದ ಹಾಲ್‌ಸ್ಟೇಷನ್‌ಗೆ ರೀಚ್ ಆಗಲು 50 ನಿಮಿಷ ತೆಗೆದುಕೊಳ್ಳುತ್ತದೆ.  ವಾರದಲ್ಲಿ 6 ದಿನಗಳು ಬೆಂಗಳೂರು ನಗರ – ಹಾಲ್‌ಸ್ಟೇಷನ್‌ ನಡುವೆ ವಿಶೇಷವಾಗಿ ಮೂರು ಜೋಡಿ ಡೆಮು ರೈಲುಗಳು ಸಂಚರಿಸಲಿವೆ. (ಭಾನುವಾರ ಹೊರತುಪಡಿಸಿ). 
2 ಮೋಟಾರು ಕಾರು ಸೇರಿ ಒಟ್ಟು 8 ಬೋಗಿಗಳ ರೈಲುಗಳನ್ನು ಪರಿಚಯಿಸಲಾಗುತ್ತಿದೆ. ಇವು ಒಟ್ಟಾರೆ 2,402 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.  ರೈಲಿನ ಪ್ರತಿ ಬೋಗಿಯು 84 ಆಸನಗಳು ಸೇರಿ 325 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುತ್ತವೆ.  ಮೋಟಾರು ಕಾರು ಸಾಮರ್ಥ್ಯ 55 ಆಸನಗಳು.