Home » 36 ಸಾವಿರದ ಐಫೋನ್ 7 ಖರೀದಿ ಈಗ ರೂ.3440ಕ್ಕೆ: ಹೊಸ ಮೆಟ್ರೊ ಗ್ರಾಹಕರಾದವರಿಗೆ ಮಾತ್ರ..

36 ಸಾವಿರದ ಐಫೋನ್ 7 ಖರೀದಿ ಈಗ ರೂ.3440ಕ್ಕೆ: ಹೊಸ ಮೆಟ್ರೊ ಗ್ರಾಹಕರಾದವರಿಗೆ ಮಾತ್ರ..

by manager manager

2016 ರಲ್ಲಿ ಮಾರುಕಟ್ಟೆಗೆ ಕಾಲಿಟ್ಟ ಆಪಲ್ ಐಫೋನ್ 7 ಇಂದಿಗೂ ಸಹ ಆಪಲ್‌ ಪ್ರಿಯರಿಗೆ ಹಾಟೆಸ್ಟ್ ಡಿವೈಸ್‌. ನೀರು ನಿರೋಧಕ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವುದರಲ್ಲಿ ಇದು ಒಂದು. ವಿಶೇಷ ಎಂದರೆ ಐಫೋನ್‌ 7 ಇಂದಿಗೂ ಸಹ ಸುದ್ದಿಯಲ್ಲಿದ್ದು, ಶೀಘ್ರದಲ್ಲೇ ಬಿಡುಗಡೆ ಆಗಲಿರುವ ಐಓಎಸ್ 13 ಅನ್ನು ಸಪೋರ್ಟ್‌ ಮಾಡಲಿದೆ.

ಆಪಲ್‌ ಐಫೋನ್‌ 7 ಮ್ಯಾಟ್‌ ಬ್ಲಾಕ್‌, 32GB ಮೆಮೊರಿ ಸಾಮರ್ಥ್ಯ ಇರುವ ಡಿವೈಸ್‌ ಅನ್ನು ಖರೀದಿಸಬೇಕು ಎಂದುಕೊಂಡು ಇನ್ನೂ ಖರೀದಿಸದೇ ಇರುವವರಿಗೆ ಈಗೊಂದು ಅತ್ಯುತ್ತಮ ಬಿಗ್‌ ಆಫರ್ ಇದೆ.

ಮೆಟ್ರೋ ಆನ್‌ಲೈನ್‌ ಶಾಪಿಂಗ್ ವೆಬ್‌ಸೈಟ್, ಆಪಲ್‌ ಐಫೋನ್‌ 7 ದೊಂದಿಗೆ ಹೊಸ ಪ್ರೊಮೋಷನ್ ಲಾಂಚ್‌ ಮಾಡುತ್ತಿದ್ದು, 32GB ಮೆಮೊರಿಯ ಐಫೋನ್ 7 ಅನ್ನು ಕೇವಲ ರೂ.3440 ಕ್ಕೆ ನೀಡುತ್ತಿದೆ. ಅಂದಹಾಗೆ ಆಪಲ್‌ ಐಫೋನ್‌ 7 ಅಸಲಿ ಬೆಲೆ ಸುಮಾರು ರೂ. 36೦೦೦ ಕ್ಕೂ ಅಧಿಕ.

ಹೌದು ಮೆಟ್ರೊ ಗೆ ಹೊಸ ಗ್ರಾಹಕರಾಗುವವರಿಗೆ ಆಪಲ್‌ ಐಫೋನ್‌7 ಅನ್ನು ರೂ.3440 ಕ್ಕೆ ಖರೀದಿಸಬಹುದಾದ ಅವಕಾಶವನ್ನು ಮೆಟ್ರೊ ನೀಡುತ್ತಿದೆ. ಈ ಬೆಲೆ ಯಾವುದೇ ಆಕ್ಟಿವೇಶನ್‌ ಅಥವಾ ಟ್ಯಾಕ್ಸ್ ಅನ್ನು ಒಳಗೊಂಡಿರುವುದಿಲ್ಲ, ಇತರೆ ವೆಚ್ಚವನ್ನು ಬರಿಸಬೇಕು ಎಂದು ಮೆಟ್ರೊ ಹೇಳಿದೆ.

32GB ಮೆಮೊರಿ ಐಫೋನ್‌7 ಅನ್ನು ರೂ.3440 ಕ್ಕೆ ನೀಡುವ ಮುನ್ನ, ಖರೀದಿದಾರರು ಹೊಸ ಗ್ರಾಹಕರೇ ಎಂದು ಮೊದಲು ಪರಿಶೀಲಿಸಿ ನಂತರ ನೀಡುತ್ತದೆ. ಅಲ್ಲದೇ 90 ದಿನಗಳ ಒಳಗೆ ಸಹ ಮೆಟ್ರೊ ಗ್ರಾಹಕರಾಗಿದ್ದರು, ಅಂತಹವರು ಈ ಬಿಗ್‌ ಆಫರ್‌ ಗೆ ಅನರ್ಹರು ಎಂದಿದೆ.

ಐಫೋನ್‌ 7 ಫೀಚರ್‌ಗಳು

– ಹ್ಯಾಪ್ಟಿಕ್ ಹೋಮ್‌ ಬಟನ್

– ಅತ್ಯಾಧುನಿಕ ನೀರು ನಿರೋಧಕ ಫೀಚರ್ ಹೊಂದಿದೆ.

– ಐಫೋನ್ 6ಎಸ್‌ನ ಕೆಲವು ಲಕ್ಷಣಗಳನ್ನು ಹೊಂದಿದೆ.

– ಸ್ಟೀರಿಯೋ ಧ್ವನಿ ಹೊಂದಿದೆ.

– ಅಭಿವೃದ್ಧಿ ಪಡಿಸಿದ ದೀರ್ಘಕಾಲ ಬಾಳಿಕೆ ಬ್ಯಾಟರಿ

– ಅಪ್‌ಗ್ರೇಡ್‌ ಮಾಡಿದ ಎ10 ಫ್ಯೂಶನ್ ಪ್ರೊಸೆಸರ್

– ಡ್ಯುಯಲ್ ಲೆನ್ಸ್ ಕ್ಯಾಮೆರಾ(ಐಫೋನ್ 7 ಪ್ಲಸ್)

You may also like