Home » ಈ ವರ್ಷ ಪಿಯುಸಿ ಪಾಸ್‌ ಆದವರಿಗೆ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ..!

ಈ ವರ್ಷ ಪಿಯುಸಿ ಪಾಸ್‌ ಆದವರಿಗೆ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ..!

by manager manager

ಅಂತೂ ಇಂತೂ ಪಿಯುಸಿ ಮುಗೀತು ಮುಗಿದ ಮೇಲೆ ಯಾವ ಕೋರ್ಸ್ಗೆ ಸೇರೋದು ಅಂತ ತಲೆಗೆ ಹುಳ ಬಿಟ್ಕೊಂಡು ಇರುವ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಇಲ್ಲೊಂದು ಸಣ್ಣ ಸಲಹೆಗಳಿದೆ ನಿಮ್ಮ ಮಕ್ಕಳ ಇಷ್ಟದಂತೆ ಅವರು ಯಾವುದರಲ್ಲಿ ಆಸಕ್ತಿ ಹೊಂದಿದ್ದಾರೋ ಅದರಲ್ಲಿ ಮುಂದುವರೆಯುವಂತೆ ಸ್ವತಂತ್ರವನ್ನು ಕೊಟ್ಟು ಅವರ ಸಾಧನೆಯ ಹಾದಿಯನ್ನು ಸುಗಮಗೊಳಿಸಿ. ಕೆಲವರು ದೀರ್ಘಕಾಲದ ಗುರಿಯನ್ನು ಹಾಕಿಕೊಂಡಿರಬಹುದು. ಇನ್ನು ಕೆಲವರು ಉದ್ಯೋಗ ಬೇಗ ದೊರಕಿಸಿಕೊಡುವಂತಹ ಕೋರ್ಸ್ಗಳನ್ನು ಆಯ್ಕೆ ಮಾಡಲು ಬಯಸಬಹುದು. ಈ ರೀತಿ ಉದ್ಯೋಗ ಆಧರಿತ ಕೋರ್ಸ್ ಮಾಡಲು ಬಯಸುವವರಿಗೆ ಇಲ್ಲಿ ಸ್ವಲ್ಪ ಮಾಹಿತಿ ಇದೆ.

• ಇಂಜಿನಿಯರಿಂಗ್ ಮಾಡಲು ಬಯಸುವ ವಿದ್ಯಾರ್ಥಿಗಳು ಡಿಪ್ಲೊಮ ಇನ್ ಇಂಜಿನಿಯರಿಂಗ್ ಮಾಡಬಹುದು. ಇದು ಪೂರ್ಣಾವಧಿ ಇಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕಾಗಿ ಇರುವ ಪ್ರವೇಶ ಪರೀಕ್ಷೆಯ ಒತ್ತಡವನ್ನು ಇಲ್ಲವಾಗಿಸುತ್ತದೆ. ಉತ್ತಮ ಅಂಕ ಪಡೆದರೆ ಎರಡನೇ ವರ್ಷದ ಪೂರ್ಣಾವಧಿ ಇಂಜಿನಿಯರಿಂಗ್ ಕೋರ್ಸ್ಗೆ ನೇರವಾಗಿ ಪ್ರವೇಶಿಸಲು ಸಾಧ್ಯವಾಗುತ್ತದೆ.

• ಬಿಎಸ್‌ಸಿ ಇನ್ ಕಂಪ್ಯೂಟರ್ ಸೈನ್ಸ್ ಇನ್‌ಫಾರ್ಮೇಶನ್ ಟೆಕ್ನಾಲಜಿ ಕೋರ್ಸ್, ಕಂಪ್ಯೂಟರ್ ಇಂಜಿನಿಯರಿಂಗ್ ಪ್ರೋಗ್ರಾಮಿಂಗ್‌ಗೆ ಪರ್ಯಾಯ ಕೋರ್ಸ್. ಸಾಫ್ಟ್ವೇರ್ ಡೆವಲಪ್‌ಮೆಂಟ್‌ನಲ್ಲಿ ಆಸಕ್ತಿ ಇರುವವರು ಇದನ್ನು ಮಾಡಬಹುದು. ಕಂಪ್ಯೂಟರ್ ನೆಟ್‌ವರ್ಕ್, ಇನ್‌ಫಾರ್ಮೇಶನ್ ಸಿಸ್ಟಂನ ಕುರಿತಂತೆ ವಿದ್ಯಾರ್ಥಿಗಳಿಗೆ ಇದರಲ್ಲಿ ತರಬೇತಿ ನೀಡಲಾಗುತ್ತದೆ.

• ಕಾಮರ್ಸ್ ಮ್ಯಾನೇಜ್‌ಮೆಂಟ್ : ಬಿಎಸ್‌ಸಿ ಇನ್ ಅಪ್ಲೈಡ್ ಸ್ಟಾಟಿಸ್ಟಿಕ್ಸ್ ಆಂಡ್ ಅನಾಲಿಟಿಕ್ಸ್ ಕೋರ್ಸ್ ಇದರಲ್ಲಿ ಪ್ರಮುಖವಾಗಿ ಎಕನಾಮಿಕ್ಸ್, ಮ್ಯಾಥ್ಸ್, ಸ್ಟಾಸ್ಟಿಟಿಕ್ಸ್, ಕಂಪ್ಯೂಟರ್ ಸೌನ್ಸ್ ಮತ್ತು ಬಾಹ್ಯ ತರಬೇತಿಗಾಗಿ ಪ್ರಾಜೆಕ್ಟ್ಗಳಿಗೆ ಭೇಟಿ ನೀಡಿ ಖುದ್ದು ಮಾಹಿತಿ ಕಲಿಸಲಾಗುತ್ತದೆ. ಎಂಎಸ್ ಎಕ್ಸೆಲ್, ಆರ್‌ಸ್ಟುಡಿಯೋ, ಸಿ ಪ್ಲಸ್ ಪ್ಲಸ್, ಎಸ್‌ಕ್ಯೂಎಲ್, ಅರಾಕಲ್, ಸಿಲ್ಯಾಬ್, ಎಸ್‌ಪಿಎಸ್‌ಎಸ್ ಮತ್ತು ಎಸ್‌ಎಎಸ್ ವಿಷುವಲ್ ಅನಲೈಟಿಕ್ಸ್ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.

• ಬ್ಯಾಚುಲರ್ ಆಫ್ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್‌ನಲ್ಲಿ ಥಿಯೆರಿಟಿಕಲ್ ಮತ್ತು ಇಂಟರ್ನ್ಶಿಪ್ ಇರುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಉದ್ಯಮವನ್ನು ಹೇಗೆ ನಡೆಸಬಹುದು ಎಂಬುದನ್ನು ಕಲಿಸಲಾಗುತ್ತದೆ. ಈ ಕೋರ್ಸ್ನಲ್ಲಿ ಅಕೌಂಟಿಂಗ್, ಮಾರ್ಕೆಟಿಂಗ್, ಅನಲೈಟಿಕ್ಸ್, ಲಾಜಿಸ್ಟಿಕ್ಸ್ ಮತ್ತು ಕಾನೂನು ಶಿಕ್ಷಣ ನೀಡಲಾಗುತ್ತದೆ. ಇನ್ನು ಮ್ಯಾಚುಲರ್ ಆಫ್ ಕನ್‌ಸ್ಟ್ರಕ್ಷನ್ ಟೆಕ್ನಾಲಜಿ ಆಂಡ್ ಮ್ಯಾನೇಜ್‌ಮೆಂಟ್ ಕೋರ್ಸ್, ಸಿವಿಲ್ ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಮತ್ತು ಇತರ ಸಂಬಂಧಿತ ಇಂಜಿನಿಯರಿಂಗ್ ಪ್ರೋಗ್ರಾಂಗಳ ಸರಳ ರೂಪ. ಆರ್ಥಿಕತೆ, ಅಕೌಂಟಿಂಗ್, ಲಾಜಿಸ್ಟಿಕ್, ಇನ್‌ವೆಂಟರಿ ನಿರ್ವಹಣೆ ಸೇರಿದಂತೆ ಕಟ್ಟಡ ನಿರ್ಮಾಣ ಕ್ಷೇತ್ರದ ಹಲವಾರು ವಿಷಯಗಳ ಅಧ್ಯಯನ ಇದಾಗಿದೆ.

• ಸೋಶಿಯಲ್ ಸೈನ್ಸ್ ಮತ್ತು ಹ್ಯುಮ್ಯಾನಿಟಿ ಕ್ಟೇತ್ರದಲ್ಲಿ ಹಲವಾರು ಕೋರ್ಸ್ಗಳಿವೆ. ಅವುಗಳ ಪೈಕಿ ಬ್ಯಾಚುಲರ್ ಆಫ್ ಸ್‌ಕ್ರೀನ್ ರೈಟಿಂಗ್, ಮ್ಯಾಚುಲರ್ ಆಫ್ ಆರ್ಟ್ಸ್ (ವಿಶುವಲ್ ಆರ್ಟ್ಸ್ ಮತ್ತು ಫೋಟೋಗ್ರಫಿ), ಬ್ಯಾಚುಲರ್ ಆಫ್ ಕಲಿನರಿ ಆರ್ಟ್ಸ್, ನ್ಯೂ ಏಜ್ ಫಿಲ್ಮ್ ಪ್ರೊಡಕ್ಷನ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಮೊದಲಾದ ಕೋರ್ಸ್ಗಳಿವೆ. ಅಪ್ಲೈಡ್ ಹೆಲ್ತ್ ಸೈನ್ಸ್ :- ಮೆಡಿಕಲ್ ಅಥವಾ ಡೆಂಟಲ್‌ನಲ್ಲಿ ಅವಕಾಶ ಸಿಗದವರು ಈ ಕೋರ್ಸ್ ಮಾಡಿ ಉದ್ಯೋಗ ಭವಿಷ್ಯ ಕಟ್ಟಿಕೊಳ್ಳಬಹುದು. ಮುಖ್ಯವಾಗಿ ಬ್ಯಾಚುಲರ್ ಆಫ್ ಫಿಸಿಯೋಥೆರಪಿ ವಿದ್ಯಾರ್ಥಿಗಳಿಗೆ ಪ್ಯಾರಾ ಮೆಡಿಕಲ್ ಪ್ರಾಕ್ಟೀಸ್ ಅರ್ಹತೆಯನ್ನು ಒದಗಿಸುತ್ತದೆ. ಇವರು ವ್ಯಾಯಾಮ ಮತ್ತು ಥೆರಪಿಗಳ ಮೂಲಕ ದೈಹಿಕ ನೋವನ್ನು ಗುಣಪಡಿಸುತ್ತಾರೆ. ಇದರಲ್ಲಿ ಫಿಸಿಯೋಲಜಿ ಮತ್ತು ಮೆಡಿಕಲ್ ಸೈನ್ಸ್ ಕೂಡ ಇರುತ್ತದೆ.

• ಬ್ಯಾಚುಲರ್ ಆಫ್ ಅಕ್ಯುಪೇಶನಲ್ ಥೆರಪಿಯನ್ನು ಕೂಡ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು. ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ನರವ್ಯೂಹದ ಸಮಸ್ಯೆಯಿಂದ ಬಳಲುವ ರೋಗಿಗಳನ್ನು ಇವರು ಶುಶ್ರೂಷೆ ಮಾಡಬೇಕಾಗುತ್ತದೆ. ಫಂಕ್ಷನಲ್ ಟ್ರೈನಿಂಗ್, ಅಸಿಸ್ಟಿವ್ ಏಡ್ ಆಂಡ್ ಇಕ್ಯೂಪ್‌ಮೆಂಟ್, ಆರ್ಗೋನಾಮಿಕ್, ಟ್ರೈನಿಂಗ್ ಆಂಡ್ ಅಡಾಪ್ಶನ್ ಮೊದಲಾದ ನಾನಾ ವಿಧದ ಚಿಕಿತ್ಸಕ ಪದ್ಧತಿಗಳನ್ನು ಇದರಲ್ಲಿ ಕಲಿಸಲಾಗುತ್ತದೆ.

• ಇನ್ನು ಬಿಎಸ್ಸಿ ಇನ್ ಹಿಯರಿಂಗ್ ಆಂಡ್ ಲ್ಯಾಂಗ್ವೇಜ್, ಸ್ಪೀಚ್, ಪ್ಯಾಥೋಲಜಿ, ಆಡಿಯೋಲಜಿ ಆಂಡ್ ಥೆರಪಿ ಕೋರ್ಸ್ ಕೂಡ ಮಾಡಬಹುದು. ಇದರಲ್ಲಿ ವಿದ್ಯಾರ್ಥಿಗಳಿಗೆ ಮಾತು ಮತ್ತು ಶ್ರವಣ ದೋಷವಿರುವ ರೋಗಿಗಳ ಚಿಕಿತ್ಸೆಯನ್ನು ಕಲಿಸಲಾಗುತ್ತದೆ. ಇದಲ್ಲದೆ ಬ್ಯಾಚುಲರ್ ಆಫ್ ಆಯುರ್ವೇದಿಕ್ ಹೋಮಿಯೋಪಥಿ ಮೆಡಿಸಿಲ್ ಮಾಡಿದರೆ ಅಲೋಪತಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ಈ ಕ್ಷೇತ್ರದಲ್ಲಿ ಉತ್ತಮ ಉದ್ಯೋಗ ಪಡೆಯಬಹುದು.

ಪಿಯುಸಿ ಕಲಾ ವಿಭಾಗದಲ್ಲಿ ಓದಿದ ವಿದ್ಯಾರ್ಥಿಗಳು ಕಲಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಯಾವೆಲ್ಲಾ ಕ್ಷೇತ್ರದಲ್ಲಿ ವಿದ್ಯಾಭ್ಯಾಸವನ್ನು ಕೈಗೊಳ್ಳಬಹುದು ಎಂಬುದನ್ನು ನಾವಿಲ್ಲಿ ತಿಳಿಸಲಿದ್ದೇವೆ. ವಿದ್ಯಾರ್ಥಿಗಳು ಇಲ್ಲಿ ನೀಡಲಾಗಿರುವ ಕೋರ್ಸ್ಗಳ ಪಟ್ಟಿಯನ್ನು ನೋಡಿಕೊಂಡು ನಿಮ್ಮ ಇಷ್ಟದ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು.

 • ಬಿ.ಎ.- ಬ್ಯಾಚುಲರ್ ಆಫ್ ಆರ್ಟ್ಸ್- 3 ವರ್ಷ ಅವಧಿಯ ಕೋರ್ಸ್
 • ಬಿ.ಎಂ.ಎಸ್- ಬ್ಯಾಚುಲರ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ – 3 ವರ್ಷ ಅವಧಿಯ ಕೋರ್ಸ್
 • ಬಿ.ಎಫ್.ಎ- ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ – 3 ವರ್ಷ ಅವಧಿಯ ಕೋರ್ಸ್
 • ಬಿ.ಜೆ.ಎಂ- ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ- 2ರಿಂದ 3 ವರ್ಷ ಅವಧಿಯ ಕೋರ್ಸ್
 • ಬಿ.ಹೆಚ್.ಎಂ- ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ – 3 ವರ್ಷ ಅವಧಿಯ ಕೋರ್ಸ್
 • ಬಿ.ಬಿ.ಎ- ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ – 3 ವರ್ಷ ಅವಧಿಯ ಕೋರ್ಸ್
 • ಬಿ.ಇ.ಎಂ- ಬ್ಯಾಚುಲರ್ ಆಫ್ ಈವೆಂಟ್ ಮ್ಯಾನೇಜ್ಮೆಂಟ್- 3 ರಿಂದ 4 ವರ್ಷ ಅವಧಿಯ ಕೋರ್ಸ್
 • ಬಿ.ಎಫ್.ಡಿ- ಬ್ಯಾಚುಲರ್ ಆಫ್ ಫ್ಯಾಷನ್ ಡಿಸೈನಿಂಗ್ -4 ವರ್ಷ ಅವಧಿಯ ಕೋರ್ಸ್
 • ಬ್ಯಾಚುಲರ್ ಆಫ್ ಎಲಿಮೆಂಟರಿ ಎಜುಕೇಷನ್ – 4 ವರ್ಷ ಅವಧಿಯ ಕೋರ್ಸ್
 • ಬ್ಯಾಚುಲರ್ ಆಫ್ ಫಿಸಿಕಲ್ ಎಜುಕೇಷನ್ – 1 ವರ್ಷ ಅವಧಿಯ ಕೋರ್ಸ್
 • ಡಿಪ್ಲೋಮ ಇನ್ ಎಲಿಮೆಂಟರಿ ಎಜುಕೇಷನ್ -3 ವರ್ಷ ಅವಧಿಯ ಕೋರ್ಸ್
 • ಬಿ.ಎಸ್.ಡಬ್ಲ್ಯೂ- ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್ -3 ವರ್ಷ ಅವಧಿಯ ಕೋರ್ಸ್
 • ಅನಿಮೇಷನ್ ಮತ್ತು ಮಲ್ಟಿಮೀಡಿಯಾ ಕೋರ್ಸ್
 • ಬಿ.ಆರ್‌ಎಂ- ಬ್ಯಾಚುಲರ್ ಆಪ್ ರೀಟೇಲ್ ಮ್ಯಾನೇಜ್ಮೆಂಟ್ – 3 ವರ್ಷ ಅವಧಿಯ ಕೋರ್ಸ್
 • ಏವಿಯೇಷನ್ ಕೋರ್ಸ್ – 1 ರಿಂದ 3 ವರ್ಷ ಅವಧಿಯ ಕೋರ್ಸ್
 • ಬಿ.ಬಿ.ಎಸ್ – ಬ್ಯಾಚುಲರ್ ಆಫ್ ಬ್ಯಾಚುಲರ್ ಆಫ್ ಬ್ಯುಸಿನೆಸ್ ಸ್ಟಡೀಸ್- 3 ವರ್ಷ ಅವಧಿಯ ಕೋರ್ಸ್
 • ಇಂಟಿಗ್ರೇಟೆಡ್ ಲಾ ಕೋರ್ಸ್- ಬಿಎ+ಎಲ್‌ಎಲ್‌ಬಿ – 5 ವರ್ಷ ಅವಧಿಯ ಕೋರ್ಸ್
 • ಬಿ.ಟಿ.ಟಿ.ಎಂ – ಬ್ಯಾಚುಲರ್ ಆಪ್ ಟ್ರಾವೆಲ್ ಮತ್ತು ಟೂರಿಸಂ ಮ್ಯಾನೇಜ್ಮೆಂಟ್ ಕೋರ್ಸ್ – 3 ರಿಂದ 4 ವರ್ಷ ಅವಧಿಯ ಕೋರ್ಸ್
 • ಗ್ರಾಫಿಕ್ ಡಿಸೈನ್
 • ಟೀಚರ್ ಟ್ರೈನಿಂಗ್ ಕೋರ್ಸ್

ಕರ್ನಾಟಕ ಸಿವಿಲ್ ಸರ್ವಿಸ್‌ಗಳ ಪ್ರೋಬೆಷನರಿ ಅವಧಿ ನಿಯಮಗಳಿವು..

You may also like