Home » ಹೊಟ್ಟೆ ಗ್ಯಾಸ್‌ ಸಮಸ್ಯೆ ಹೋಗಲಾಡಿಸುವುದು ಹೇಗೆ? ಶಾಶ್ವತ ಪರಿಹಾರವೇನು?

ಹೊಟ್ಟೆ ಗ್ಯಾಸ್‌ ಸಮಸ್ಯೆ ಹೋಗಲಾಡಿಸುವುದು ಹೇಗೆ? ಶಾಶ್ವತ ಪರಿಹಾರವೇನು?

by manager manager

ಗ್ಯಾಸ್ಟ್ರಿಕ್ ಸಮಸ್ಯೆಯಿಂದ ವ್ಯಕ್ತಿಯು ಇತರೆ ಹಲವು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾನೆ. ಕರುಳಿನಲ್ಲಿ ಇರುವ ಅಹಿತಕರ ಅನಿಲವು ಅಂದರೆ ಗ್ಯಾಸ್ ದೇಹಕ್ಕೆ ಹಾನಿಕಾರಕ. ಇದು ತೀಕ್ಷ್ಮವಾದ ನೋವು, ಕಡಿತ, ಹೊಟ್ಟೆ ಊತ, ಬಿಗಿತ ಮತ್ತು ಹೊಟ್ಟೆ ಉಬ್ಬುವುದು ಹೀಗೆ ಹಲವು ಸಮಸ್ಯೆಗಳನ್ನು ಗ್ಯಾಸ್ಟ್ಟಿಕ್ ತಂದೊಡ್ಡುತ್ತದೆ.

ಗ್ಯಾಸ್ಟ್ರಿಕ್ ಇರುವ ವ್ಯಕ್ತಿಗಳು ಪ್ರತಿದಿನ 13-21 ಬಾರಿ ಹೊಟ್ಟೆಯ ಗ್ಯಾಸ್ ಅನ್ನು ಬಿಡುಗಡೆ ಮಾಡುತ್ತಾರೆ. ಒಂದು ವೇಳೆ ಗ್ಯಾಸ್ ರಿಲೀಸ್ ಆಗದೇ ಬ್ಲಾಕ್‌ ಆದಲ್ಲಿ ಅದು ಅತಿಸಾರ(ಭೇದಿ) ಮತ್ತು ಮಲಬದ್ದತೆಗೆ ಕಾರಣವಾಗುತ್ತದೆ.

ಗ್ಯಾಸ್ ಸಮಸ್ಯೆಗೆ ಸೂಕ್ತ ಕಾರಣವನ್ನು ತಿಳಿದು ಸದಾ ಅದರಿಂದ ದೂರ ಉಳಿಯಲು ಪ್ರಯತ್ನಿಸಬೇಕು.

ಯಾವುದೇ ಆರೋಗ್ಯ ಸಮಸ್ಯೆಗೆ ವೈದ್ಯರಲ್ಲಿ ತೋರಿಸಿದಾಗಲು ಇತರೆ ಮೆಡಿಸನ್ ಮತ್ತು ಮಾತ್ರೆಗಳ ಜೊತೆ ಮಿಸ್‌ ಮಾಡದೇ ಗ್ಯಾಸ್‌ ಮಾತ್ರೆ ಕೊಡಲಾಗುತ್ತದೆ ಏಕೆ? ನೀವೆ ಒಮ್ಮೆ ಯೋಚಿಸಿ..

ಅತಿವೇಗವಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಹೋಗಲಾಡಿಸುವುದು ಹೇಗೆ? ಎಂಬುದನ್ನು ಈ ಕೆಳಗಿನ ಸಲಹೆಗಳನ್ನು ಓದಿ ತಿಳಿಯಿರಿ.. ಹಲವು ಮನೆ ಮದ್ದುಗಳು, ಆಹಾರಗಳು ಗ್ಯಾಸ್ ಸಮಸ್ಯೆ ದೂರ ಮಾಡುವುದಲ್ಲದೇ ಗ್ಯಾಸ್ ಉಂಟಾಗದಂತೆ ತಡೆಯುತ್ತವೆ. ಅವುಗಳನ್ನು ಇಲ್ಲಿ ತಿಳಿಸಲಾಗಿದೆ.

ಗ್ಯಾಸ್ ಹೋಗಲು ಬಿಡಿ

ಕೆಲವರು ಗ್ಯಾಸ್ ಬಂದಾಗ ಕೆಟ್ಟ ವಾಸನೆ ಮತ್ತು ಸೌಂಡ್ ಬರುವುದೆನೋ ಎಂದು ಮುಜುಗರದಿಂದ ತಡೆದುಕೊಳ್ಳುತ್ತಾರೆ. ಇದರಿಂದ ಹೊಟ್ಟೆ ಉಬ್ಬುವುದು, ಅಸ್ವಸ್ಥತೆ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ತಡೆಯುವುದರ ಬದಲು ಅದನ್ನು ಹಾಗೆ ಬಿಡುವುದರಿಂದ ಗ್ಯಾಸ್ ಸಮಸ್ಯೆ ಹೆಚ್ಚಾಗುವುದರಿಂದ ತಪ್ಪಿಸಿಕೊಳ್ಳಬಹುದು. ಮುಜುಗರ ಕಾಡುವವರು ಜನರ ಗುಂಪಿನಲ್ಲಿ ಇದ್ದಲ್ಲಿ ಸ್ವಲ್ಪ ದೂರ ಹೋಗಿ ಗ್ಯಾಸ್ ಬಿಟ್ಟು ಬನ್ನಿ.

ನಿಧಾನವಾಗಿ ತಿನ್ನಿರಿ

ಆಹಾರ ತಿನ್ನುವಾಗ ಒಂದೇ ಸಮನೆ ಹೆಚ್ಚು ಹೆಚ್ಚು ತಿನ್ನಬೇಡಿ. ಸ್ವಲ್ಪ ಪ್ರಮಾಣದಲ್ಲಿ ನಿಧಾನವಾಗಿ ಅಗಿದು ತಿನ್ನುವುದರಿಂದ ಜೀರ್ಣಕ್ರಿಯೆ ವೇಗವಾಗಿ ಗ್ಯಾಸ್ ಕಂಟ್ರೋಲ್ ಮಾಡಲು ಸಹಾಯಕ.

ಚೂಯಿಂಗ್ ಗಮ್ ತಿನ್ನುವುದನ್ನು ನಿಯಂತ್ರಿಸಿ

ಹೆಚ್ಚು ಚೂಯಿಂಗ್ ಗಮ್ ತಿನ್ನುವವರು ಗಾಳಿಯನ್ನು ಹೆಚ್ಚು ಒಳ ತೆಗೆದುಕೊಳ್ಳುತ್ತಾರೆ. ಇದರಿಂದ ಕರಳು ಅಹಿತಕರ ಗಾಳಿ ತೆಗೆದುಕೊಳ್ಳುತ್ತದೆ. ಗ್ಯಾಸ್ ನೋವು ಹೆಚ್ಚಾಗುತ್ತದೆ. ಸಕ್ಕರೆ ಅಂಶ ಇಲ್ಲದ ಗಮ್‌ ಸಹ ಕೃತಕ ಸಿಹಿಯನ್ನು ಹೊಂದಿರುತ್ತದೆ. ಇದು ಹೊಟ್ಟೆ ಉಬ್ಬಲು ಮತ್ತು ಗ್ಯಾಸ್‌ಗೆ ಕಾರಣವಾಗುತ್ತದೆ.

ಸ್ಟ್ರಾ ಬಳಸಬೇಡಿ

ಎಳನೀರು, ಇತರೆ ಕೂಲ್ ಡ್ರಿಂಕ್ಸ್‌ ಕುಡಿಯುವಾಗ ಸ್ಟ್ರಾ ಬಳಸುವುದನ್ನು ನಿಲ್ಲಿಸಿ. ಸ್ಟ್ರಾ ಬಳಸುವವರು ಗಾಳಿಯನ್ನು ಎಳೆದುಕೊಳ್ಳುತ್ತಾರೆ. ಅಲ್ಲದೇ ನೇರವಾಗಿ ಬಾಟಲ್‌ ಮೂಲಕ ಕುಡಿಯುವವರು ಸಹ ಅದೇ ಸಮಸ್ಯೆಗೆ ಗುರಿಯಾಗುತ್ತಾರೆ. ಇದು ಬಾಟಲ್ ವಿನ್ಯಾಸದ ಮೇಲೆ ಆಧಾರವಾಗಿರುತ್ತದೆ. ಆದ್ದರಿಂದ ಲೋಟ ಬಳಸಿ ಕುಡಿಯುವುದು ಸೂಕ್ತ.

ಧೂಮಪಾನ ನಿಷೇಧಿಸಿ

ಬಿ.ಡಿ ಸಿಗರೇಟ್, ಎಲೆಕ್ಟ್ರಾನಿಕ್ ಸಿಗರೇಟ್ ಯಾವುದೇ ಬಳಸಿದರು ಧೂಮಪಾನ ಜೀರ್ಣಕ್ರಿಯೆಯ ಮೇಲೆ ದುಷ್ಫರಿಣಾಮ ಬೀರುತ್ತದೆ. ಅಲ್ಲದೇ ಹಲವು ತೊಂದರೆಗಳಿಗೆ ಕಾರಣವಾಗುತ್ತದೆ.

ನಾನ್‌-ಕಾರ್ಬೋನೇಟೆಡ್ ಡ್ರಿಂಕ್ಸ್‌ ಆಯ್ಕೆ ಮಾಡಿ

ಕಾಬ್ರೋನೇಟೆಡ್ ಡ್ರಿಂಕ್ಸ್ ಗಳಾದ ಸ್ಪಾರ್ಕ್‌ಲಿಂಗ್ (ಪ್ಲಾಸ್ಟಿಕ್‌ ಬಾಟಲ್‌ಗಳಲ್ಲಿ ಶೇಖರಿಸಿದ ಡ್ರಿಂಕ್ಸ್‌ಗಳು) ಮತ್ತು ಸೋಡಾ, ಹೊಟ್ಟೆಗೆ ಹೆಚ್ಚು ಗ್ಯಾಸ್ ಹೋಗಲು ಕಾರಣವಾಗುತ್ತವೆ. ಇದು ಹೊಟ್ಟೆ ಉಬ್ಬಲು ಮತ್ತು ನೋವು ಉಂಟಾಗಲು ಕಾರಣವಾಗುತ್ತವೆ.

ಸಮಸ್ಯೆ ಉಂಟಾಗುವ ಆಹಾರ ತ್ಯಜಿಸಿ

ವಯಕ್ತಿಕವಾಗಿ ನಿಮಗೆ ಹೊಟ್ಟೆಯಲ್ಲಿ ಗ್ಯಾಸ್ ಉಂಟುಮಾಡುವ, ಹೊಟ್ಟೆ ಉಬ್ಬುವಂತೆ ಮಾಡುವ ಆಹಾರ, ಪಾನೀಯಗಳನ್ನು ತ್ಯಜಿಸಿ.

ಬಹುಬೇಗ ಗ್ಯಾಸ್ ಉಂಟುಮಾಡುವ ಆಹಾರಗಳೆಂದರೆ

– ಕೃತಕ ಸಿಹಿಕಾರಕಗಳನ್ನು ಒಳಗೊಂಡ ಆಹಾರಗಳು

– ಗೆಡ್ಡೆ ಕೋಸು, ಹೂಕೋಸು ತರಕಾರಿಗಳು

– ಡೈರಿ ಉತ್ಪನ್ನಗಳು

– ಫೈಬರ್ ಪಾನೀಯಗಳು ಮತ್ತು ಅದರ ಪೂರಕಗಳು

– ಹೆಚ್ಚು ಪ್ರೈ ಮಾಡಿದ ಆಹಾರಗಳು

– ಹೆಚ್ಚು ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇವನೆ

– ಹೆಚ್ಚು ಕೊಬ್ಬಿನ ಆಹಾರಗಳು

– ಬೀಜಗಳು ಮತ್ತು ಮಸೂರಗಳನ್ನು ಒಳಗೊಂಡ ಗುಂಪಿನ ಆಹಾರ

– ಒಣದ್ರಾಕ್ಷಿ ಮತ್ತು ಜ್ಯೂಸ್

– ಮಸಾಲೆಯುಕ್ತ ಆಹಾರಗಳು

ಈ ಆಹಾರ ಪದಾರ್ಥಗಳು ಹಲವು ಆರೋಗ್ಯ ಉಪಯೋಗಗಳನ್ನು ಹೊಂದಿವೆ. ಆದರೆ ಇವುಗಳಲ್ಲಿ ಯಾವುವು ನಿಮಗೆ ಗ್ಯಾಸ್ ಅನ್ನು ಹೆಚ್ಚು ಉತ್ಪತ್ತಿ ಮಾಡುತ್ತವೆ ಎನಿಸುತ್ತದೋ ಅಂತಹ ಆಹಾರ ಪದಾರ್ಥಗಳ ಸೇವನೆಯಲ್ಲಿ ನಿಯಂತ್ರಣ ಹೊಂದಬೇಕು.

ಟೀ ಸೇವನೆ

ಕೆಲವು ಹರ್ಬಲ್ ಟೀ ಜೀರ್ಣಕ್ರಿಯೆ ಮತ್ತು ಗ್ಯಾಸ್ ಕಡಿಮೆ ಮಾಡಲು ಸಹಾಯಕಾರಿ. ಅದರಲ್ಲಿ ಹೆಚ್ಚು ಪರಿಣಾಮಕಾರಿಯಾದ ಟೀ ಗಳೆಂದರೆ

– ಆನಿಸ್(ಮರಾಠಿ ಮೊಗ್ಗು)

– ಕ್ಯಾಮೊಮೈಲ್

– ಶುಂಠಿ

– ಪುದೀನಾ

ಆನಿಸ್(ಮರಾಠಿ ಮೊಗ್ಗು) ಟೀ ಸೇವನೆಯಿಂದ ಗ್ಯಾಸ್ ಜೊತೆಗೆ ಅತಿಸಾರ ಕಾಣಿಸಿಕೊಂಡಲ್ಲಿ ನಿಯಂತ್ರಿಸಬೇಕು. ಕೇವಲ ಗ್ಯಾಸ್ ಮಾತ್ರ ಬಿಡುಗಡೆ ಆದಲ್ಲಿ ಸಹಾಯಕ.

ಸೋಂಪು ಕಾಳುಗಳು

ಸೋಂಪು ಕಾಳುಗಳು ಬ್ಲಾಕ್‌ ಆದ ಗ್ಯಾಸ್ ಬಿಡುಗಡೆಗೆ ಸಹಾಯಕಾರಿ. ಒಂದು ಚಮಚ ಸೋಂಪು ಕಾಳುಗಳನ್ನು ಸೇವನೆ ಮಾಡುವುದು ಗ್ಯಾಸ್ ಬಿಡುಗಡೆಗೆ ಪಾಪ್ಯುಲರ್ ಮನೆಮದ್ದು.

ಈ ಮನೆಮದ್ದನ್ನು ಗರ್ಭಿಣಿ ಹೆಂಗಸರು ಮತ್ತು ಹಾಲುಣಿಸುವ ಹೆಂಗಸರು ಸೇವನೆ ಮಾಡಬಾರದು.

You may also like