Home » ವೃತ್ತಿ ಶಿಕ್ಷಣ ಪಡೆದ ಯುವಕ-ಯುವತಿಯರ ಉನ್ನತಿಗಾಗಿ ‘ಉನ್ನತಿ’ ಯೋಜನೆ: ಸೌಲಭ್ಯ ಪಡೆಯುವುದು ಹೇಗೆ?

ವೃತ್ತಿ ಶಿಕ್ಷಣ ಪಡೆದ ಯುವಕ-ಯುವತಿಯರ ಉನ್ನತಿಗಾಗಿ ‘ಉನ್ನತಿ’ ಯೋಜನೆ: ಸೌಲಭ್ಯ ಪಡೆಯುವುದು ಹೇಗೆ?

by manager manager

Unnati a incentive scheme for SC ST Navodyami

Unnati a promotion incentive scheme for SC, ST Navodyami.

ಡಾ|| ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಗಳಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಿರುದ್ಯೋಗಿ ಯುವಜನತೆಗೆ ಅವರ ಆಸಕ್ತ ಕ್ಷೇತ್ರಗಳಲ್ಲಿ ಉದ್ಯಮಶೀಲರನ್ನಾಗಿಸಲು ‘ಉನ್ನತಿ’ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ.

ಈ ಯೋಜನೆ ಅಡಿಯಲ್ಲಿ ತಾಂತ್ರಿಕ ಮತ್ತು ಸೇವಾ ಕ್ಷೇತ್ರಗಳಲ್ಲಿ ವೃತ್ತಿ ಶಿಕ್ಷಣ ಪಡೆದಿರುವವರು ಹೊಸ ಉದ್ಯಮ ಆರಂಭಿಸಲು ಆಸಕ್ತಿ ಹೊಂದಿದ್ದಲ್ಲಿ ಅಂತಹ ನಿರುದ್ಯೋಗಿ ಯುವಕ-ಯುವತಿಯರಿಗೆ ‘ಉನ್ನತಿ’ಯೋಜನೆ ಅಡಿಯಲ್ಲಿ ಪ್ರೋತ್ಸಾಹ ನೀಡಲು ‘ಉನ್ನತಿ’ ಸನ್ನದ್ಧವಾಗಿದ್ದು, ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

‘ಉನ್ನತಿ’ ಯೋಜನೆಯ ಪ್ರಮುಖ ಅಂಶಗಳು

– ರೂ.50 ಲಕ್ಷದವರೆಗಿನ ಬೀಜಧನ ಪ್ರೋತ್ಸಾಹ

– ಮಾರ್ಗದರ್ಶನ ಹಾಗೂ ತರಬೇತಿಯ ನೆರವು

– ಸಾಹಸ ಉದ್ಯಮ ಬಂಡವಾಳಕ್ಕೆ ಸಂಪರ್ಕ ಸಾಧಿಸಲು ಅವಕಾಶ

– ಪ್ರತಿಷ್ಠಿತ ಇನ್ಕ್ಯೂಬೇಟರ್‌ಗಳಲ್ಲಿ ನೆರವು

‘ಉನ್ನತಿ’ ಯೋಜನೆ ಅಡಿಯಲ್ಲಿ ಪ್ರೋತ್ಸಾಹ ಧನ ಪಡೆಯಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10-12-2018

‘ಉನ್ನತಿ’ ಯೋಜನೆಯ ಪ್ರೋತ್ಸಾಹ ಧನ ಪಡೆಯಲು ಯಾರು ಅರ್ಹರು?

– ಕರ್ನಾಟಕ ಸರ್ಕಾರದ ತಾಂತ್ರಿಕ ಐ.ಟಿ-ಬಿ.ಟಿ ಇಲಾಖೆ ಸಹಯೋಗದಲ್ಲಿ ವೃತ್ತಿ ಆಧಾರಿತ ಪ್ರತಿಭಾವಂತ ಪಧವೀದರರಿಗೆ ನೀಡುವ ಪ್ರೋತ್ಸಾಹಧನ ಯೋಜನೆ ಇದಾಗಿದೆ.

– ಈ ಯೋಜನೆಯನ್ನು ತಾಂತ್ರಿಕ ಕ್ಷೇತ್ರಗಳಲ್ಲಿ ವೃತ್ತಿ ಶಿಕ್ಷಣ ಪದವಿ, ಸ್ನಾತಕೋತ್ತರ ಪದವಿ ಪಡೆದು ಸ್ವಂತ ಉದ್ಯಮ ಆರಂಭಿಸುವವರಿಗೆ ಪ್ರಾರಂಭಿಕ ಆರ್ಥಿಕ ಪ್ರೋತ್ಸಾಹಧನವನ್ನು ಈ ಯೋಜನೆಯಡಿ ನೀಡಲಾಗುತ್ತದೆ.

– ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕಡ ಸೇರಿದ ಅಭ್ಯರ್ಥಿಯಾಗದ್ದು, ಹೊಸ ಉದ್ಯಮಿ ಆಗಿರಬೇಕು

– ಉದ್ಯಮಕ್ಕೆ ಸಂಬಂಧ ಪಟ್ಟಂತೆ ಗಣನೀಯವಾದ ಹಕ್ಕು ಮತ್ತು ಪಾಲುದಾರಿಕೆ ಹೊಂದಿರಬೇಕು

– ಸಾಮಾಜಿಕವಾಗಿ ಪ್ರಭಾವ ಬೀರಬಲ್ಲ ನವೋದ್ಯಮವಾಗಿರಬೇಕು

ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳು

– ಆಧಾರ್ ಕಾರ್ಡ್ ನಂಬರ್

– ಉದ್ಯಮ ಕಂಪನಿಯ ಹೆಸರು

– ರಿಜಿಸ್ಟರ್ ಮಾಡಿದ ದಿನಾಂಕ

– ಕಂಪನಿ ವೆಬ್‌ಸೈಟ್ URL

– ಕಂಪನಿ ರಿಜಿಸ್ಟರ್ ಮಾಡಿಸಿರುವ ವಿಳಾಸ

– ಕಂಪನಿಯ ವಿವರ ಮತ್ತು ಇತರೆ ಮಾಹಿತಿ

ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ

ಅರ್ಹತೆ ಕುರಿತು ಇನ್ನಷ್ಟು ಮಾಹಿತಿ ತಿಳಿಯಲು ಕ್ಲಿಕ್ ಮಾಡಿ

Unnati Scheme for Career Based Talented SC-ST Navodyami in collaboration with the IT-BT Department of Karnataka Government. Read more here..

You may also like