Home » UPSC ಪರೀಕ್ಷೆ ತಯಾರಿಗಾಗಿಯೇ ಈ ಟಾಪ್ 5 ಮೊಬೈಲ್ ಆಪ್‌ಗಳು

UPSC ಪರೀಕ್ಷೆ ತಯಾರಿಗಾಗಿಯೇ ಈ ಟಾಪ್ 5 ಮೊಬೈಲ್ ಆಪ್‌ಗಳು

by manager manager

Mobile apps for upsc IAS preparation in kannada

Mobile apps for upsc IAS preparation

ಕೇಂದ್ರ ಮತ್ತು ರಾಜ್ಯದ ನಾಗರೀಕ ಸೇವೆಗಳಲ್ಲಿ ಉದ್ಯೋಗ ಗಿಟ್ಟಿಸುವುದು ಸುಲಭದ ಮಾತಲ್ಲ. ಈ ಉದ್ಯೋಗಗಳ ಆಕಾಂಕ್ಷಿಗಳು ಯುಪಿಎಸ್‌ಸಿ ಆಗಲಿ, ಕೆಪಿಎಸ್‌ಸಿ ಪರೀಕ್ಷೆಗಳನ್ನು ಪಾಸ್ ಮಾಡಲು ಎಷ್ಟು ಸರ್ಕಸ್ ಮಾಡುತ್ತಾರೆ ಎಂಬುದು ಪಾಸ್ ಮಾಡಿದವರಿಗೆ ಮತ್ತು ಸಿದ್ಧತೆ ನಡೆಸುತ್ತಿರುವವರಿಗೆ ಗೊತ್ತಿರುವ ಸಂಗತಿ.

ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಪರೀಕ್ಷೆಗಳನ್ನು ನಾಲ್ಕು, ಐದನೇ ಬಾರಿಗೆ ಪಾಸ್‌ ಮಾಡಿದವರೂ ಸಹ ಇದ್ದಾರೆ.

ಬಹುಸಂಖ್ಯಾತ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಸರಿಯಾದ ಮಾರ್ಗದರ್ಶನ ಮೊದಲೇ ದೊರೆಯದೇ ಮೊದಲ ಬಾರಿಗೆ ಪರೀಕ್ಷೆ ಪಾಸ್ ಮಾಡಲು ಆಗದಿರುವುದಕ್ಕೆ ಒಂದು ಕಾರಣ. ಆದರೆ ಇಂದು ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್ ಬಂದ ಮೇಲೆ, ಅಂಗೈಯಲ್ಲೇ ಎಲ್ಲಾ ಸೌಲಭ್ಯಗಳನ್ನು ಪಡೆಯುವಷ್ಟು ತಂತ್ರಜ್ಞಾನ ಮುಂದುವರೆದಿದೆ. ಆದರೆ ಅದರ ಸದುಪಯೋಗ ಪಡೆಯುವುದು ಅವರವರಿಗೆ ಬಿಟ್ಟಿದು.

UPSC ಪರೀಕ್ಷೆ ಸಿದ್ಧತೆಗಾಗಿಯೇ ಅಭಿವೃದ್ಧಿಪಡಿಸಿದ ಹಲವು ಅತ್ಯುತ್ತಮ ಮೊಬೈಲ್ ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇಂದು ಲಭ್ಯ. ಈ ಆಪ್‌ಗಳನ್ನೇ ಕೋಚಿಂಗ್ ಸೆಂಟರ್‌ಗಳಲ್ಲೂ ಮಾರ್ಗದರ್ಶಕರು ಸಜೆಸ್ಟ್‌ ಮಾಡುತ್ತಾರೆ. ಅಂತಹ ಟಾಪ್ 5 ಆಪ್‌ಗಳನ್ನು ಇಂದಿನ ಲೇಖನದಲ್ಲಿ ನಿಮಗೆ ಪರಿಚಯಿಸುತ್ತಿದ್ದೇವೆ. ಅವುಗಳು ಈ ಕೆಳಗಿನಂತಿವೆ.

ಯುಪಿಎಸ್‌ಸಿ ಆಕಾಂಕ್ಷಿಗಳಿಗಾಗಿ ಟಾಪ್ 5 ಆಪ್ಲಿಕೇಶನ್‌ಗಳು

1 ಕ್ಲಿಯರ್ ಐಎಎಸ್(ClearIAS)

ನಾವು ತಿಳಿಸುವ ಆಪ್‌ಗಳಲ್ಲೇ ಮೋಸ್ಟ್ ಟಾಪ್‌ ಅಪ್ಲಿಕೇಶನ್ ಇದು. ಐಎಎಸ್‌ ಆಕಾಂಕ್ಷಿಗಳು ಕ್ಲಿಯರ್ ಐಎಎಸ್(ClearIAS) ಅಪ್ಲಿಕೇಶನ್‌ ಅನ್ನು ತಮ್ಮ ಸ್ಮಾರ್ಟ್‌ಫೋನ್‌ ನಲ್ಲಿ ಡೌನ್‌ಲೋಡ್ ಮಾಡಿಕೊಂಡು ತಮ್ಮ ಸಿದ್ಧತೆಯನ್ನು ಮೊಬೈಲ್‌ನಲ್ಲಿಯೂ ವಿಸ್ತರಿಸಬಹುದು.

ಕ್ಲಿಯರ್ ಐಎಎಸ್(ClearIAS) ಆಪ್ ಯುಪಿಎಸ್‌ಸಿ ತರಬೇತಿಗೆ ಬೇಕಾದ ಸಂಪೂರ್ಣ ಸಿದ್ಧತೆಯ ಪ್ಯಾಕೇಜ್‌ ಅನ್ನೇ ಹೊಂದಿದೆ. ಸ್ಟಡಿ ಮೆಟೀರಿಯಲ್ಸ್, ಸಲಹೆಗಳು, ಮಾರ್ಗದರ್ಶನ, ಕಡಿಮೆ ದರದಲ್ಲಿ ಶಿಪಾರಸು ಮಾಡಿದ ಪುಸ್ತಕಗಳು, ಆನ್‌ಲೈನ್ ನ್ಯೂಸ್ ಪೇಪರ್ಸ್ ಸೌಲಭ್ಯ, ಅಣಕು ಪರೀಕ್ಷೇಗಳು, ಪ್ರಶ್ನೆ ಪತ್ರಿಕೆಗಳು, ಐಎಎಸ್‌ ಟಾಪರ್‌ಗಳಿಂದ ಉತ್ತಮ ಸಲಹೆಗಳು ಈ ಎಲ್ಲಾ ಸೌಲಭ್ಯಗಳು ಒಂದೇ ಆಪ್‌ನಲ್ಲಿ ದೊರೆಯಲಿವೆ.

2 ಐಎಎಸ್ ಬಾಬಾ(IASbaba)

IIT/IIM ಪದವೀಧರರು ಅಭಿವೃದ್ಧಿ ಪಡಿಸಿದ ಆಪ್‌ ಇದು. ಅತಿವೇಗದಲ್ಲಿ ಹೆಚ್ಚು ಬಳಕೆದಾರರನ್ನು ಹೊಂದುತ್ತಿರುವ ಯುಪಿಎಸ್‌ಸಿ ಸಿದ್ಧತೆಯ ಅಪ್ಲಿಕೇಶನ್ ಇದು.

ಹಲವು ಉಚಿತ ಸೇವೆಗಳಾದ ಸುದ್ದಿ ವಿಶ್ಲೇಷಣೆ, ಪ್ರಚಲಿತ ವಿದ್ಯಮಾನಗಳ ಮ್ಯಾಗಜಿನ್, ಜನಪ್ರಿಯ ಪತ್ರಿಕೆಗಳ ಸಂಪಾದಕೀಯ, AIR/RSTV/PIB ಚರ್ಚೆಗಳು, ಮಾಸಿಕ ಯೋಜನಾ, ಸ್ಫೂರ್ತಿದಾಯಕ ಲೇಖನಗಳು ಮತ್ತು ಇತರೆ ಹಲವು ಸೌಲಭ್ಯಗಳು ಲಭ್ಯ.

3 ಸಿವಿಲ್ ಡೈಲಿ(CivilDaily)

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಉತ್ತಮವಾದ ಆಪ್ ಆಗಿದ್ದು, ಯುಪಿಎಸ್‌ಸಿ ಟಾಪರ್‌ಗಳು ಇದನ್ನು ಸಜೆಸ್ಟ್ ಮಾಡುತ್ತಾರೆ.

ದಿನನಿತ್ಯದ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸರಳ ರೀತಿಯಲ್ಲಿ ಅರ್ಥವಾಗುವಂತೆ ನೀಡುವ ಉತ್ತಮ ಶ್ರೇಣಿಯ ಅಪ್ಲಿಕೇಶನ್ ಸಿವಿಲ್ ಡೈಲಿ(CivilDaily).

ಸಿವಿಲ್ ಡೈಲಿ(CivilDaily) ಪ್ರಚಲಿತ ಘಟನೆಗಳು, ಪತ್ರಿಕೆಗಳ ಸಂಪಾದಕೀಯ ಸಾರಾಂಶ, ಸ್ಟಡಿ ಪ್ಲಾನ್ಸ್, ನೋಟ್ಸ್, ಸರ್ಕಾರಿ ಯೋಜನೆಗಳು, NCERT ಪುಸ್ತಕಗಳು ಮತ್ತು ಅವುಗಳನ್ನು ಡೌನ್‌ಲೋಡ್ ಮಾಡಲು ಅವಕಾಶ, ಕ್ಷೇತ್ರವಾರು ಅಭಿವೃದ್ಧಿ ಮತ್ತು ಸುದ್ದಿ, ಕೋರ್ಸ್‌ಗಳು, ರಿವೀಷನ್ ಮೆಟೀರಿಯಲ್ಸ್ ಲಭ್ಯ.

4 ವಿಷನ್ ಐಎಸ್(Vision IAS)

UPSC ಆಕಾಂಕ್ಷಿಗಳಿಗೆ ಇರುವ ಪ್ರಖ್ಯಾತ ಸಂಸ್ಥೆ ವಿಷನ್ ಐಎಎಸ್. ಸವಿಸ್ತಾರವಾದ ತರಬೇತಿ ಸಿದ್ಧತೆಯ ಮಾಹಿತಿಯನ್ನು, ವಿಷಯಗಳನ್ನು ವಿಷನ್ ಐಎಎಸ್ ಒಳಗೊಂಡಿದೆ.

ಮೇಲಿನ ಎಲ್ಲಾ ಆಪ್‌ಗಳಲ್ಲಿ ಸಿಗುವ ಸೌಲಭ್ಯಕ್ಕಿಂತ ಸ್ವಲ್ಪ ಹೆಚ್ಚಿನ ಮಟ್ಟದ ಸೌಲಭ್ಯ ಐಎಎಸ್ ತರಬೇತಿ ಸಿದ್ಧತೆಗೆ ದೊರೆಯುತ್ತದೆ. ಇನ್ನೊಂದು ವಿಶೇಷತೆ ಎಂದರೆ ಈ ಆಪ್‌ನಲ್ಲಿ ಮಾಹಿತಿ ಇಂಗ್ಲೀಷ್ ಮತ್ತು ಹಿಂದಿ ಎರಡರಲ್ಲೂ ದೊರೆಯಲಿವೆ.

ಐಎಎಸ್ ಆಕಾಂಕ್ಷಿಗಳಿಗೆ ವಿಡಿಯೋ ಉಪನ್ಯಾಷ ಮತ್ತುಲೈವ್ ಕ್ಲಾಸ್ ಹಾಗೂ ಸೆಷನ್‌ಗಳು ಲಭ್ಯ.

5 ಅನ್‌ಆಕಾಡೆಮಿ(Unacademy)

ಸಂಪೂರ್ಣ ಕಲಿಕಾ ಆಪ್ ಇದು. ಭಾರತದ ಅತೀ ವಿಸ್ತಾರವಾದ ಆನ್‌ಲೈನ್ ಕಲಿಕೆಯ ವೇದಿಕೆ ಅನ್‌ಆಕಾಡೆಮಿ(Unacademy). ಕಾರಣ ಈ ಆಪ್‌ನಲ್ಲಿ ಪ್ರತಿಯೊಂದು ಸೌಲಭ್ಯಗಳು ವಿಡಿಯೋದಲ್ಲಿಯೇ ದೊರೆಯುತ್ತದೆ.

ಈ ಮೇಲಿನ ಆಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಾಗಿನ್ ಆಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

Smartphone apps for UPSC Civil examination preparation are here. These top most 5 mobile apps can fulfill your needed matirials for UPSC IAS exams.

You may also like