Home » ಶಿಕ್ಷಕರ ಅರ್ಹತಾ ಪರೀಕ್ಷೆಗೆ(TET) ಅರ್ಜಿ ಆಹ್ವಾನ: ಸಂಪೂರ್ಣ ಮಾಹಿತಿ ಇಲ್ಲಿದೆ

ಶಿಕ್ಷಕರ ಅರ್ಹತಾ ಪರೀಕ್ಷೆಗೆ(TET) ಅರ್ಜಿ ಆಹ್ವಾನ: ಸಂಪೂರ್ಣ ಮಾಹಿತಿ ಇಲ್ಲಿದೆ

by manager manager

Teacher Eligibility Test 2018 Notification KARTET 2018

Application has invited for the Teacher Eligibility Test 2018

ಕರ್ನಾಟಕ ಸರ್ಕಾರದ ‘ಸಾರ್ವಜನಿಕ ಶಿಕ್ಷಣ ಇಲಾಖೆ’ಯು ಶಿಕ್ಷಕರ ಅರ್ಹತಾ ಪರೀಕ್ಷೆ(TET) ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಪ್ರಕಟಣೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಅರ್ಜಿಗಳನ್ನು ಸಲ್ಲಿಸಲು ಆರಂಭಿಕ ದಿನಾಂಕ: 05-12-2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-12-2018

ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 24-12-2018

– ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು(TET) 03-02-2019(ಭಾನುವಾರ) ರಂದು ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

– TET ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ 23-01-2019 ರಿಂದ ಪ್ರವೇಶ ಪತ್ರ ಇಲಾಖಾ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

ಅರ್ಜಿ ಶುಲ್ಕ ಎಷ್ಟು?

-ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ : ಪತ್ರಿಕೆ-1 ಅಥವಾ ಪತ್ರಿಕೆ-2 ಮಾತ್ರ ಆಗಿದ್ದಲ್ಲಿ ರೂ 700. ಎರಡೂ ಪತ್ರಿಕೆಗಳಾಗಿದ್ದಲ್ಲಿ ರೂ.1000.

-ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ : ಪತ್ರಿಕೆ-1 ಅಥವಾ ಪತ್ರಿಕೆ-2 ಮಾತ್ರ ಆಗಿದ್ದಲ್ಲಿ ರೂ 700. ಎರಡೂ ಪತ್ರಿಕೆಗಳಾಗಿದ್ದಲ್ಲಿ ರೂ.1000.

-ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ : ಪತ್ರಿಕೆ-1 ಅಥವಾ ಪತ್ರಿಕೆ-2 ಮಾತ್ರ ಆಗಿದ್ದಲ್ಲಿ ರೂ 350. ಎರಡೂ ಪತ್ರಿಕೆಗಳಾಗಿದ್ದಲ್ಲಿ ರೂ.500.

– ವಿಶೇಷ ಅಗತ್ಯವುಳ್ಳ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ ವಿನಾಯಿತಿ ಇರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ www.schooleducation.kar.nic.in ಗೆ ಭೇಟಿ ನೀಡಿ ದಿನಾಂಕ 05-12-2018 ರಿಂದ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳಿಗೆ ಸೂಚನೆಗಳು

– ಆನ್‌ಲೈನ್‌ ಅರ್ಜಿಯನ್ನು ಕೇಳಿದ ಎಲ್ಲಾ ಮಾಹಿತಿಯನ್ನು ನೀಡಿ ಸಲ್ಲಿಸಬೇಕು.

– ಭಾವಚಿತ್ರ ಮತ್ತು ಸಹಿಯನ್ನು ಜಿಪಿಇಜಿ ಫಾರ್ಮ್ಯಾಟ್ ನಲ್ಲಿ ಅಪ್‌ಲೋಡ್ ಮಾಡಬೇಕು.

– ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಹಾಗೂ ಪೂರ್ಣವಿವರಗಳನನ್ನೊಳಗೊಂಡ ಅರ್ಜಿ ಸಲ್ಲಿಸಿದ ಮತ್ತು ಸಂಪೂರ್ಣ ವಿಳಾಸವುಳ್ಳ ಕಂಪ್ಯೂಟರ್ ಜನರೇಟೆಡ್ ಪ್ರತಿಯ ಪ್ರಿಂಟ್‌ ಔಟ್ ತೆಗೆದುಕೊಳ್ಳಬೇಕು.

ಪರೀಕ್ಷಾ ವೇಳಾಪಟ್ಟಿ ಈ ಕೆಳಗಿನಂತಿದೆ.

Teacher Eligibility Test 2018 Notification KARTET 2018 time table

ಶಿಕ್ಷಕರ ಅರ್ಹತಾ ಪರೀಕ್ಷೆ – 2018 ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಪ್ರಕಟಣೆ ನೋಡಲು ಕ್ಲಿಕ್ ಮಾಡಿ

Tecacher Eligibility Test 2018

KARTET – 2018 ಇಂಗ್ಲೀಷ್ ಪ್ರಕಟಣೆಗಾಗಿ ಕ್ಲಿಕ್ ಮಾಡಿ

Application has invited for the Teacher Eligibility Test 2018. Eligible candidates can apply for the KARTET 2018. Read more here..

You may also like