Home » ತರಳಬಾಳು ವಿದ್ಯಾಸಂಸ್ಥೆಗಳ ನೇಮಕಾತಿ ಆಯ್ಕೆ ಪಟ್ಟಿ, ಸಂದರ್ಶನ ದಿನಾಂಕ ಚೆಕ್‌ ಮಾಡುವುದು ಹೇಗೆ?

ತರಳಬಾಳು ವಿದ್ಯಾಸಂಸ್ಥೆಗಳ ನೇಮಕಾತಿ ಆಯ್ಕೆ ಪಟ್ಟಿ, ಸಂದರ್ಶನ ದಿನಾಂಕ ಚೆಕ್‌ ಮಾಡುವುದು ಹೇಗೆ?

by manager manager

ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಸಿರಿಗೆರೆ ಯು ತಮ್ಮ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಅನುದಾನಿತ ಪ್ರೌಢಶಾಲೆಯಲ್ಲಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಆಯ್ಕೆ ಪಟ್ಟಿ, ಸಂದರ್ಶನ ದಿನಾಂಕ ಮತ್ತು ಇತರೆ ಮಾಹಿತಿಯನ್ನು ತಿಳಿಯುವುದು ಹೇಗೆ ಎಂಬುದನ್ನು ಈ ಕೆಳಗೆ ನಿಮ್ಮ ಕನ್ನಡ ಅಡ್ವೈಜರ್ ತಿಳಿಸಿದೆ.

– ಸಂದರ್ಶನದ ದಿನಾಂಕ ಮತ್ತು ಸ್ಥಳವನ್ನು ಆನ್‌ಲೈನ್‌ನಲ್ಲಿಯೇ ಪ್ರಕಟಿಸಲಾಗುವುದು

– ಸಂದರ್ಶನಕ್ಕೆ ಆಯ್ಕೆಯಾದವರ ಹೆಸರುಗಳನ್ನು ಮಾತ್ರ ಇಲಾಖೆಯ ವೆಬ್‌ಸೈಟ್‌ನ “Status” ಪೇಜ್‌ನಲ್ಲಿ ಪ್ರಕಟಿಸಲಾಗುವುದು.

ನೇಮಕಾತಿ ಆಯ್ಕೆ ಪಟ್ಟಿ, ಸಂದರ್ಶನ ದಿನಾಂಕ ಚೆಕ್‌ ಮಾಡಲು ನಾವು ಹೇಳಿನ ಮಾರ್ಗ ಅನುಸರಿಸಿ

– ಪ್ರತಿ ದಿನ ಒಮ್ಮೆಯಾದರೂ http://www.apply.taralabalu.in/ ಈ ಲಿಂಕ್ ಕ್ಲಿಕ್ ಮಾಡಿ ನೋಡಿ. ಓಪನ್ ಆಗುವ ವೆಬ್‌ಪೇಜ್‌ನಲ್ಲಿ ಹೊಸ ಅಪ್‌ಡೇಟ್‌ ಇದೆಯೇ ಎಂದು ಚೆಕ್‌ ಮಾಡಿರಿ. ಅಥವಾ

– ಓಪನ್ ಆದ ಪೇಜ್‌ ನಲ್ಲಿ New Applicant ಅಥವಾ Regd Applicant ಎಂಬ ಎರಡು ಆಯ್ಕೆಗಳಿರುತ್ತವೆ. ಅವುಗಳಲ್ಲಿ Regd Applicant ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

– ನಂತರ ಓಪನ್ ಆದ ಪೇಜ್‌ ನಲ್ಲಿ ಅಥವಾ http://www.apply.taralabalu.in/login.php ಈ ಲಿಂಕ್ ಕ್ಲಿಕ್ ಮಾಡಿ. ಅಲ್ಲಿ ಕೇಳಲಾದ ಮಾಹಿತಿ ನೀಡಿ.

– ಅರ್ಜಿ ಸಲ್ಲಿಸುವ ವೇಳೆ ನೀವು ಕ್ರಿಯೇಟ್ ಮಾಡಿಕೊಂಡಿರುವ User ID ಮತ್ತು ಪಾಸ್‌ವರ್ಡ್‌ ನೀಡಿ ಸೈನ್‌ ಇನ್‌ ಮೇಲೆ ಕ್ಲಿಕ್ ಮಾಡಿ. “Status” ಪೇಜ್‌ ತೆರೆಯುತ್ತದೆ. ಅಲ್ಲಿ ನಿಮ್ಮ ಅರ್ಜಿ ಸ್ಟೇಟಸ್ ಮತ್ತು ಇತರೆ ಮಾಹಿತಿ ಸಿಗಬಹುದು.

– ಸಂದರ್ಶನ ಪತ್ರವನ್ನು ಅಂತರ್ಜಾಲದಲ್ಲಿ ಪಡೆದುಕೊಳ್ಳಬೇಕು. ನೀವು ಹುದ್ದೆಗೆ ಆಯ್ಕೆ ಆಗಿದ್ದಲ್ಲಿ.

– ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ಪ್ರಿಂಟ್‌ ತೆಗೆದುಕೊಂಡ ಸಂದರ್ಶನ ಪತ್ರದ ಜೊತೆಗೆ ಅಗತ್ಯ ಮೂಲದಾಖಲೆಗಳೊಂದಿಗೆ ಸಂದರ್ಶನದ ಸ್ಥಳಕ್ಕೆ, ಸೂಚಿಸಿದ ಸಮಯಕ್ಕೆ ಹಾಜರಾಗುವುದು.

– ನೇಮಕಾತಿ ವಿಧಾನ, ವೇತನ ಶ್ರೇಣಿ, ಮೀಸಲಾತಿ, ವಯೋಮಿತಿ ಕುರಿತ ಇನ್ನೂ ಹೆಚ್ಚಿನ ಮಾಹಿತಿಗಳಿಗಾಗಿ ಸಂಸ್ಥೆಯ ವೆಬ್‌ಸೈಟ್‌ಗೆ ಭೇಟಿ ನೀಡಿರಿ. ವೆಬ್‌ ವಿಳಾಸವನ್ನು ಮೇಲೆ ನೀಡಲಾಗಿದೆ.

– ಇದಿಷ್ಟು ಮಾಹಿತಿ ಮಾತ್ರ ನಿಮ್ಮ ಕನ್ನಡ ಅಡ್ವೈಜರ್ ಗೆ ಲಭ್ಯವಾಗಿದೆ.

– Taralabalu Recruitment 2019 notification – Download

You may also like