Home » ಪ್ರಾಣಾಯಾಮದ ಮಹತ್ವ ಮತ್ತು ಪ್ರಯೋಜಗಳ ಬಗ್ಗೆ ನಿಮಗೆಷ್ಟು ಗೊತ್ತು?..

ಪ್ರಾಣಾಯಾಮದ ಮಹತ್ವ ಮತ್ತು ಪ್ರಯೋಜಗಳ ಬಗ್ಗೆ ನಿಮಗೆಷ್ಟು ಗೊತ್ತು?..

by manager manager

ಪ್ರಾಣಾಯಾಮದ ಮಹತ್ವ

– ಉಸಿರು ಸರಿಯಾದ ಮಾರ್ಗದಲ್ಲಿ ಚಲಿಸದಿದ್ದಾಗ, ಮನಸ್ಸು ಚಂಚಲವಾಗಿರುತ್ತದೆ. ಉಸಿರು ಸರಿಯಾದ ಮಾರ್ಗದಲ್ಲಿ ಚಲಿಸಿದಾಗ, ಮನಸ್ಸು ಸ್ಥಿರವಾಗಿರುತ್ತದೆ- ಹಠಯೋಗ ಪ್ರದೀಪಿಕೆ( ಇದು ಪ್ರಾಣಾಯಾಮದಿಂದ ಸಾಧ್ಯ)

ನಮ್ಮ ಉಳಿದೆಲ್ಲ ಅಂಗಗಳಿಗಿಂತ ಮಿದುಳಿಗೆ ಆಕ್ಸಿಜನ್‌ನ ಅವಶ್ಯಕತೆ ಹೆಚ್ಚು. ಆಕ್ಸಿಜನ್ ಕೊರತೆ ಉಂಟಾದರೆ ಮಿದುಳಿನ ಕೆಲಸ ನಿಧಾನವಾಗಿ ಅದರಿಂದ ಮಾನಸಿಕ ಜಡತ್ವ, ಋಣಾತ್ಮಕ ಯೋಚನೆಗಳು, ಖಿನ್ನತೆ ಹಾಗೂ ಶ್ರವಣ ಮತ್ತು ದೃಷ್ಟಿ ದೋಷನಗಳೂ ಉಂಟಾಗಬಹುದು.

ಪ್ರಾಣಾಯಾಮ ಮಾಡುವುದರಿಂದ ಆಗುವ ಪ್ರಯೋಜನಗಳು

– ನಿಯಂತ್ರಿತ ಉಸಿರಾಟ ದೇಹವನ್ನು ಸ್ಥಿರವಾಗಿ ಹಾಗೂ ಆರೋಗ್ಯವಾಗಿಡುತ್ತದೆ.

– ಆಯಸ್ಸನ್ನು ಹೆಚ್ಚಿಸುತ್ತದೆ.

– ಯಕೃತ್ತು, ಜಠರ, ಕರುಳು ಹಾಗೂ ಜೀರ್ಣಾಂಗ ಕ್ರಿಯೆಗಳನ್ನು ಸುಸ್ಥಿತಿಯಲ್ಲಿಡುತ್ತದೆ. ಹಾಗೂ ಹಸಿವನ್ನು ಹೆಚ್ಚಿಸುತ್ತದೆ.

– ನರಮಂಡಲವನ್ನು ಬಲಪಡಿಸಿ, ಮನಸ್ಸನ್ನು ಶಾಂಗೊಳಿಸಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಋಣಾತ್ಮಕ ಆಲೋಚನೆಗಳನ್ನು ನಿರ್ಮೂಲ ಮಾಡುತ್ತದೆ.

– ಚಯಾಪಚಯ ಕ್ರಿಯೆಯ ವೇಗವನ್ನು ಹತೋಟಿಯಲ್ಲಿಡುತ್ತದೆ.

– ಉಸಿರಾಟದ ಹಾಗೂ ಹೃದಯದ ಬಡಿತದ ಸ್ಥಿತಿಯನ್ನು ಸಮತೋಲನವನ್ನು ಕಾಪಾಡುತ್ತದೆ.

– ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಹಾಗೂ ದೇಹದ ಉಷ್ಣವನ್ನು ಕಾಪಾಡುತ್ತದೆ.

– ಮನಸ್ಸಿಗೆ ವಿಶ್ರಾಂತಿ ನೀಡಿ ಒತ್ತಡ ಹಾಗೂ ದುಗಡಗಳನ್ನು ಕಡಿಮೆ ಮಾಡುತ್ತದೆ.

– ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಮಾನಸಿಕ ತೊಂದರೆಗಳನ್ನು ನಿವಾರಿಸುತ್ತದೆ.

– ಪ್ರಾಣಾಯಾಮದ ಜೊತೆಗೆ ಯೋಗದ ಆಸನಗಳು ಜೊತೆಗೂಡಿದಾಗ ಒಬ್ಬ ವ್ಯಕ್ತಿಯು ದೇಹ ಮತ್ತು ಮನಸ್ಸು ಪರಿಶುದ್ಧಗೊಂಡು ಆ ವ್ಯಕ್ತಿಯು ಶಿಸ್ತಿನ ಜೀವನ ಸಾಗಿಸಲು ಸಹಾಯಕ

ಪ್ರಾಣಾಯಾಮ ಮಾಡುವುದು ಹೇಗೆ?

ಪ್ರಾಣಾಯಾಮ ಮಾಡುವ ಮೊದಲು ಐದು ನಿಮಿಷ ಧ್ಯಾನ ಮಾಡಿದರೆ ಉತ್ತಮ. ಏಕಾಗ್ರತೆಯಿಂದ ಧ್ಯಾನ ಮಾಡುತ್ತ 4 ರಿಂದ 5 ಬಾರಿ ದೀರ್ಘ ಉಸಿರಾಟ ಮಾಡಬೇಕು. ನಂತರ ಪ್ರಾಣಾಯಾಮ ಆರಂಭಿಸುವುದು ಉತ್ತಮ ವಿಧಾನ.

ಪ್ರಾಣಾಯಾಮದಲ್ಲಿ ಹಲವು ವಿಧಾನಗಳು ಇವೆ. ಪ್ರಾಣಾಯಾಮದ ವಿಧಗಳು ಮತ್ತು ಅವುಗಳನ್ನು ಮಾಡುವುದು ಹೇಗೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಪ್ರಾಣಾಯಾಮದ ವಿಧಗಳು ಮತ್ತು ಪ್ರಾಣಾಯಾಮ ಮಾಡುವ ವಿಧಾನ

ಕಪಾಲ ಭಾತೀ ಪ್ರಾಣಾಯಾಮ:-

ಮೊದಲಿಗೆ ನೇರವಾಗಿ ಕುಳಿತುಕೊಳ್ಳಿ. ನಂತರ ದೀರ್ಘವಾಗಿ ಪ್ರಾಣವಾಯುವನ್ನು ಮೂಗಿನಲ್ಲಿ ಎಳೆದು ನಿಧಾನವಾಗಿ ಹೊರಬಿಡಿ. ಈ ಸಮಯದಲ್ಲಿ ಮನಸ್ಸನ್ನು ಏಕಾಗ್ರತೆಯಿಂದ ಇಟ್ಟುಕೊಳ್ಳಬೇಕು. ಅದು ಸರಳ ಸಾಧ್ಯವು ಹೌದು. ಈ ರೀತಿ ಕನಿಷ್ಟ 15-20 ಬಾರಿ ಮಾಡಿ. ಹಾಗೇ ನಿಮಗೆ ಸಾಧ್ಯವಾದಷ್ಟು ಸಮಯ ಉಸಿರನ್ನು ಬಿಗಿ ಹಿಡಿದು ಹಾಗೆ ಇರಬೇಕು. ಈ ರೀತಿ ಒಂದೆರಡು ಬಾರಿ ಮಾಡಿ.

ಈ ವಿಧಾನದ ಪ್ರಾಣಾಯಾಮದಿಂದ ಉಸಿರಾಟದ ತೊಂದರೆಗಳನ್ನು ನೀಗಿಸಬಹುದು. ಶೀತ, ನೆಗಡಿ, ಕೆಮ್ಮು ನಿವಾರಣೆ ಮಾಡಬಹುದು. ಶಾಶ್ವತ ಪರಿಹಾರವು ಸಾಧ್ಯ.

ಧೌತಿ ಪ್ರಾಣಾಯಾಮ :-

ಸರಳವಾಗಿ ಮಾಡಬಹುದಾದ ಮತ್ತು ಪರಿಣಾಮಕಾರಿಯಾದ ಪ್ರಾಣಾಯಾಮವಿದು. ಪ್ರಾಣಾಯಾಮದ ಆಸನದಲ್ಲಿ ಕುಳಿತು ಎರಡು ಕೈಗಳನ್ನು ನೆಲದಲ್ಲಿ ಊರಿ ದೀರ್ಘ ಉಸಿರು ತೆಗೆದು ನಂತರ ಬಾಯಿಯ ಮೂಲಕ ಬಲವಾಗಿ ಹೊರಹಾಕಬೇಕು. ಹೀಗೆ ಉಸಿರು ಹೊರಹಾಕುವಾಗ ತಲೆಯನ್ನು ರಭಸದಲ್ಲಿ ಅದಕ್ಕೆ ತಕ್ಕಂತೆ ಬಾಗಿಸಬೇಕು ಹಾಗೆ ಗಂಟಲೊಳಗಿಂದ ರಭಸವಾಗಿ ಉಸಿರನ್ನು ಹೊರಹಾಕಿ. ಐದಾರು ಬಾರಿ ಈ ಪ್ರಕ್ರಿಯೆ ಮಾಡುತ್ತಿದ್ದರೆ ಗಂಟಲು ಸಂಬಂಧಿ ಸಮಸ್ಯೆಗಳು ನಮಗೆ ಅರಿವಿಲ್ಲದೇ ನಿವಾರಣೆ ಆಗುತ್ತದೆ.

ಶೀತಲೀ ಪ್ರಾಣಾಯಾಮ

ಕೆಲವರಿಗೆ ಪ್ರಾಣಾಯಾಮ ಮಾಡಿದಾಗ ಅಧಿಕ ಸೆಕೆ ಅನುಭವ ಆಗುತ್ತದೆ. ಆಗ ಶೀತಲೀ ಪ್ರಾಣಾಯಾಮ ಮಾಡಿದರೆ ಬಿಸಿಯಾದ ದೇಹಕ್ಕೆ ತಂಪು ಹಿತವಾಗುವುದು. ಇದಕ್ಕಾಗಿ ನಾಲಗೆಯನ್ನು ತುಟಿಯಂಚಿನಲ್ಲಿ ಕೊಳವೆಯಂತೆ ಮಾಡಿ ಅದರ ಮೂಲಕ ಉಸಿರು ದೀರ್ಘವಾಗಿ ಒಳಕ್ಕೆಳೆದು ನಂತರ ಅದೇ ಉಸಿರನ್ನು ಮೂಗಿನ ಮೂಲಕ ನಿಧಾನವಾಗಿ ಬಿಡಬೇಕು. ಐದರಿಂದ ಆರು ಬಾರಿ ಹೀಗೆ ಮಾಡಿ. ಕಪಾಲಭಾತಿ ಮಾಡಿದಾಗ ದೇಹದ ಉಷ್ಣತೆ ಹೆಚ್ಚಾದರೆ, ಶೀತಲೀ ಪ್ರಾಣಾಯಾಮದಿಂದ ದೇಹವನ್ನು ತಂಪಾಗಿಸಬಹುದು. ಒಟ್ಟಾರೆ ಈ ಪ್ರಾಣಾಯಾಮದಿಂದ ದೇಹದ ಉಷ್ಣತೆಯ ಮಟ್ಟವನ್ನು ಕಾಪಾಡುವಲ್ಲಿ ಸಹಾಯಕ.

ಭ್ರಾಮರೀ ಪ್ರಾಣಾಯಾಮ:-

ಬೆನ್ನುಬಾಗದಂತೆ ನೇರವಾಗಿ ಕುಳಿತು ಎರಡು ಕೈಗಳ ತುದಿಯಿಂದ ಎರಡು ಕಣ್ಣನ್ನು ಮುಚ್ಚಿ ಹಿಡಿದು ಕೊಳ್ಳಬೇಕು. ಕೈ ಹೆಬ್ಬೆರಳಿಂದ ಕಿವಿಯನ್ನು ಬಲವಾಗಿ ಮುಚ್ಚಿಕೊಳ್ಳಬೇಕು. ಶ್ವಾಸ ಒಳಕ್ಕೆಳೆದು ಬಿಡುವಾಗ ಕಿವಿ ಮೇಲಿನ ಹೆಬ್ಬೆರಳನ್ನು ಬಿಗಿಗೊಳಿಸುತ್ತಾ ಮೂಗಿನಲ್ಲಿ ಭ್ರಮರದಂತೆ, ಅನುಸ್ವರದಲ್ಲಿ ಶಬ್ದವನ್ನುಂಟು ಮಾಡುತ್ತಾ ಉಸಿರಾಟ ಮಾಡಬೇಕು.ಈ ವಿಧಾನದಿಂದ ದೈಹಿಕ ಮಾನಸಿಕ ಒತ್ತಡಗಳೆಲ್ಲಾ ಕಡಿಮೆಯಾಗಿ ದೇಹಕ್ಕೆ ಆರಾಮವಾಗುತ್ತದೆ.

– ಪ್ರಾಣಾಯಾಮ ಮಾಡಿದರೆ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ.

You may also like