Home » PM-KISAN ಯೋಜನೆಯ ಹೊಸ ಅಪ್‌ಡೇಟ್: ಗ್ರಾಮ ಪಂಚಾಯ್ತಿಗಳಲ್ಲೇ ಅರ್ಜಿ ಸಲ್ಲಿಸಬಹುದು..

PM-KISAN ಯೋಜನೆಯ ಹೊಸ ಅಪ್‌ಡೇಟ್: ಗ್ರಾಮ ಪಂಚಾಯ್ತಿಗಳಲ್ಲೇ ಅರ್ಜಿ ಸಲ್ಲಿಸಬಹುದು..

by manager manager

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ರೈತ ಬಾಂಧವರಿಗೆ ಧನ ಸಹಾಯ ನೀಡಲು ಜಾರಿಗೊಳಿಸಿರುವ “ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆ” ಕುರಿತು ಹೊಸ ಅಪ್‌ಡೇಟ್‌ ಒಂದು ಬಂದಿದೆ. ಅದೇನಂದ್ರ ಈ ಮೊದಲು ಈ ಯೋಜನೆಯನ್ನು ಪಡೆಯಲು ರೈತರು ಸಕಲ ದಾಖಲೆಗಳೊಂದಿಗೆ ತಾಲ್ಲೂಕು ಅಥವಾ ಹೋಬಳಿ ಕೇಂದ್ರ ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬೇಕಿತ್ತು.( (pm kisan samman nidhi yojana)

ಆದರೆ ಈಗ ಲೇಟೆಸ್ಟ್‌ ಅಪ್‌ಡೇಟ್ ಪ್ರಕಾರ ರೈತರು “ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆ”ಯ ಧನ ಸಹಾಯ ಪಡೆಯಲು ತಮ್ಮ ತಮ್ಮ ಗ್ರಾಮ ಪಂಚಾಯ್ತಿ ಕೇಂದ್ರಗಳಿಗೆ ಹೋಗಿ ಖುದ್ದಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಯ ಫಲ ಪಡೆಯಲು ರೈತರಿಗೆ ಸುಲಭ ಮಾರ್ಗ ಒದಗಿಸುವ ಸಲುವಾಗಿ ಸರ್ಕಾರ ಈಗ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಒಂದೊಂದು ಅಧಿಕಾರಿಗಳನ್ನು ಈ ಸೇವೆಗೆ ಸಂಬಂಧಿಸಿದಂತೆ ನೇಮಿಸಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ತಿಳಿದಿದೆ.

ಗ್ರಾಮ ಪಂಚಾಯ್ತಿಗಳಲ್ಲಿ ಯಾರಿಗೆ ಅರ್ಜಿ ನೀಡಬೇಕು?

“ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆ” ಧನಸಹಾಯ ಪಡೆಯಲು ತಮ್ಮ ಹೋಬಳಿ ರೈತ ಸಂಪರ್ಕ ಕೇಂದ್ರವನ್ನು ಅಥವಾ ನಿಮ್ಮ ಗ್ರಾಮ ಪಂಚಾಯತ್ ಗಳನ್ನು ತಕ್ಷಣ ಸಂಪರ್ಕಿಸಿ ಸೌಲಭ್ಯವನ್ನು ಪಡೆದುಕೊಳ್ಳಲು ಸರ್ಕಾರದ ಆದೇಶ ಹೊರಡಿಸಲಾಗಿದೆ.

ಅಧಿಕೃತ ಮೂಲಗಳ ಪ್ರಕಾರ ಗ್ರಾಮ ಪಂಚಾಯ್ತಿಗಳಲ್ಲಿ ಡಾಟಾ ಎಂಟ್ರಿ ಆಪರೇಟರ್‌ಗಳಲ್ಲಿ ರೈತರು ಈ ಯೋಜನೆ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬೇಕಾಗಿದೆ.

ರೈತರಿಗೆ ಸೂಚನೆ

– ಗ್ರಾಮ ಪಂಚಾಯ್ತಿ ಪ್ರಕಟಿಸಿದ ಪಟ್ಟಿಯಲ್ಲಿ ರೈತರ ಹೆಸರು ಇದ್ದರೆ ಅನುಬಂಧ ಸಿ ಅರ್ಜಿಯಲ್ಲಿ “ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆ”ಗಾಗಿ ಸಲ್ಲಿಸಬೇಕು.

– ಗ್ರಾಮ ಪಂಚಾಯ್ತಿಯ ಪ್ರಕಟಿಸಿದ ಪಟ್ಟಿಯಲ್ಲಿ ರೈತರ ಹೆಸರು ಇಲ್ಲದಿದ್ದರೆ ಅನುಬಂದ ಡಿ ಅರ್ಜಿಯಲ್ಲಿ “ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆ”ಗಾಗಿ ಸಲ್ಲಿಸಬೇಕು.

ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ (PM-KISAN) ಧನ ಸಹಾಯ ಪಡೆಯಲು ರೈತರು ಅರ್ಜಿಯೊಂದಿಗೆ ಕಡ್ಡಾಯವಾಗಿ ಸಲ್ಲಿಸಬೇಕಾದ ದಾಖಲೆಗಳು ಈ ಕೆಳಗಿನಂತಿವೆ.

– ಅರ್ಜಿ ನಮೂನೆ

– ಆರ್ ಟಿ ಸಿ

– ಆಧಾರ್ ಕಾರ್ಡ್ ಜೆರಾಕ್ಸ್

– ಬ್ಯಾಂಕ್‌ ಪಾಸ್ ಬುಕ್ ಜೆರಾಕ್ಸ್

– ಇತ್ತೀಚಿನ ಪಾಸ್‌ಪೋರ್ಟ್‌ ಅಳತೆಯ ಎರಡು ಫೊಟೋಗಳು

– ಜಾತಿ ಪ್ರಮಾಣ ಪತ್ರ (ಪಂ.ಜಾತಿ ಮತ್ತು ಪ.ಪಂ ರೈತರುಗಳಿಗೆ ಮಾತ್ರ)

PM-KISAN ಯೋಜನೆಯ ರೂ.6000 ಪಡೆಯಲು ಅರ್ಜಿ ಸಲ್ಲಿಕೆ ಹೇಗೆ? ಬೇಕಾದ ದಾಖಲೆಗಳು ಏನು?

Here is how to apply for Pradhan Mantri kisan Samman nidhi yojana online information. Farmers can apply their application even in their Grama Panchayat.

You may also like