Home » ಇನ್ನು ಮುಂದೆ ಪಾಸ್’ಪೋರ್ಟ್ ಪಡೆಯುವುದು ಇನ್ನೂ ಸುಲಭ: ಬಂದಿದೆ ಆ್ಯಪ್‌

ಇನ್ನು ಮುಂದೆ ಪಾಸ್’ಪೋರ್ಟ್ ಪಡೆಯುವುದು ಇನ್ನೂ ಸುಲಭ: ಬಂದಿದೆ ಆ್ಯಪ್‌

by manager manager

ನವದೆಹಲಿ: ಪಾಸ್ ಪೋರ್ಟ್(Passport) ಸೇವೆ ಪಡೆಯಲು ಇದ್ದ ಕಠಿಣ ಷರತ್ತುಗಳನ್ನು ಕೇಂದ್ರ ವಿದೇಶಾಂಗ ಸಚಿವಾಲಯ ಸಡಿಲಗೊಳಿಸಿದೆ. ಈ ಮೂಲಕ ಶೀಘ್ರವಾಗಿ ಎಲ್ಲರಿಗೂ ಈ ಸೇವೆ ಕೈ ಸೇರುವಂತ ಹೊಸ ಯೋಜನೆಗಳನ್ನು ರೂಪಿಸಿದೆ.

ಇತ್ತೀಚೆಗೆ ನಡೆದ ಆರನೇ ರಾಷ್ಟ್ರೀಯ ಪಾಸ್‌ಪೋರ್ಟ್‌ ಸೇವಾ ದಿವಸದಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪಾಸ್ ಪೋರ್ಟ್ ನಿಯಾಮಳಿಗಳಲ್ಲಿ ಹಲವು ತಿದ್ದುಪಡಿಗಳನ್ನು ಮಾಡಲಾಗಿದ್ದು, ಹಲವು ಕಠಿಣ ಷರತ್ತುಗಳನ್ನು ಸಡಿಲಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ವೇಳೆ ದೇಶದ ಯಾವುದೇ ಮೂಲೆಯಿಂದಾದರೂ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದಾದ ಹೊಸ ಎಂ ಪಾಸ್‌ಪೋರ್ಟ್‌ ಸೇವಾ(mPassport Seva) ಎಂಬ ಮೊಬೈಲ್‌ ಆ್ಯಪ್‌ ಅನ್ನು ಲೋಕಾರ್ಪಣೆ ಮಾಡಿದ್ದಾರೆ.

ಈ ಹೊಸ ಯೋಜನೆಯಿಂದ ದೇಶದ ನಾಗರಿಕರು ತಮ್ಮ ಮೂಲ ವಿಳಾಸದಿಂದ ದೇಶದ ಯಾವುದೇ ಭಾಗದಲ್ಲಿಯೂ ಕೂಡ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಈ ಬದಲಾವಣೆಯಿಂದ ಉದ್ಯೋಗಕ್ಕಾಗಿ ಬೇರೆ ಕಡೆ ವಾಸಿಸುವ ಜನರಿಗೆ ಅನುಕೂಲವಾಗಿದೆ. ತಮಗೆ ಬೇಕಾದ ಸೇವಾಕೇಂದ್ರವನ್ನು ಆಯ್ಕೆಮಾಡಿಕೊಳ್ಳುವ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.

Passport Seva App Released: getting passport is much easier

ನಾಗರಿಕರು ತಮ್ಮ ವ್ಯಾಪ್ತಿಯಲ್ಲೇ ಬರುವ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸುವ ಕ್ರಮ, ಪತಿ-ಪತ್ನಿಯರ ಕಡ್ಡಾಯ ವಿವಾಹ ನೋಂದಣಿ ಪತ್ರ ಲಗತ್ತು, ಜನ್ಮ ದಿನಾಂಕ ಪ್ರಮಾಣ ಪತ್ರ ಹಾಗೂ ವಿಚ್ಛೇದಿತ ದಂಪತಿಗಳ ಹೆಸರು ನಮೂದುಗೊಳಿಸುವ ಕಠಿಣ ಷರತ್ತುಗಳು ಬದಲಾವಣೆಯಾಗಿವೆ.

ಇನ್ನು ಮುಂದೆ ನಿಮ್ಮ ಮೊಬೈಲ್‌ ಫೋನ್‌ನಲ್ಲಿ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೆ, ಪಾಸ್‌ಪೋರ್ಟ್‌ ಸೇವೆ ಕುರಿತ ವ್ಯವಹಾರಗಳನ್ನು ನಿರ್ವಹಿಸಬಹುದು. ಈ ಆ್ಯಪ್‌ ಆ್ಯಂಡ್ರಾಯ್ಡ್‌ ಮತ್ತು ಐಒಎಸ್‌ಗಳಲ್ಲಿ ಲಭ್ಯವಿದೆ.

Government of India Released the Passport Seva App. External Affairs Minister Sushma Swaraj launches mPassport Seva App. now be much easier to Getting a passport.

You may also like