Home » ಕೃಷಿ ಸ್ನಾತಕೋತ್ತರ ಪದವೀಧರರು NET ಪರೀಕ್ಷೆ ತೆಗೆದುಕೊಳ್ಳಲು ನ.29 ಕೊನೆ ದಿನ

ಕೃಷಿ ಸ್ನಾತಕೋತ್ತರ ಪದವೀಧರರು NET ಪರೀಕ್ಷೆ ತೆಗೆದುಕೊಳ್ಳಲು ನ.29 ಕೊನೆ ದಿನ

by manager manager

November 29 is deadline for agricultural related post graduates to take up the NET exam

November 29 is deadline for agricultural related post graduates to take up the NET exam

ಕೃಷಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಷಕರಾಗಿ ಕಾರ್ಯ ನಿರ್ವಹಿಸಲು ಸುವರ್ಣಾವಕಾಶ ಒದಗಿಬಂದಿದೆ.

ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ (ASRB) ಡಿಸೆಂಬರ್ 27 ರಿಂದ 31 ರ ವರೆಗೆ ಎನ್‌ಇಟಿ ಪರೀಕ್ಷೆಯನ್ನು ದೇಶಾದ್ಯಂತ 34 ಕೇಂದ್ರಗಲ್ಲಿ ಆನ್‌ಲೈನ್ ಮೂಲಕ ನಡೆಸಲಿದೆ.

ದೇಶದಾದ್ಯಂತದ ಯಾವುದೇ ಕೃಷಿ ವಿಶ್ವವಿದ್ಯಾಲಯ ಗಳಲ್ಲಿ ಲೆಕ್ಚರರ್ ಮತ್ತು ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗೆ ಅರ್ಹತಾ ಪರೀಕ್ಷೆ ಇದಾಗಿದೆ. ಈ ಪರೀಕ್ಷೆಗಳಲ್ಲಿ ಪಾಸಾದವರಿಗೆ AASRU ಅರ್ಹತಾ ಪ್ರಮಾಣಪತ್ರ ನೀಡಲಿದೆ. ಆ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಪ್ರಮಾಣಪತ್ರ ನೆರವಾಗಲಿದೆ.

ಯಾರೆಲ್ಲಾ ಅರ್ಹರು?

NET ಪರೀಕ್ಷೆ ತೆಗೆದುಕೊಳ್ಳಲು ಕೃಷಿ, ಪಶು ಸಂಗೋಪನೆ, ಆಹಾರ ತಂತ್ರಜ್ಞಾನ, ಡೇರಿ ವಿಜ್ಞಾನ, ಪರಿಸರ ವಿಜ್ಞಾನ, ಮಣ್ಣು ವಿಜ್ಞಾನ, ಸಸ್ಯ ಶರೀರಶಾಸ್ತ್ರ ಪ್ರಾಣಿ ಜೀವ ರಸಾಯನ ಶಾಸ್ತ್ರ, ಮೀನುಗಾರಿಕೆ, ಗೃಹ ವಿಜ್ಞಾನ ಮತ್ತು ಇತರೆ ಕೃಷಿಗೆ ಸಂಬಂಧಿಸಿದ ಸ್ನಾತಕೋತ್ತರ ಪದವಿ ಪಡೆದವರು ಅರ್ಹರು. ಇತರೆ ಯಾವ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು ಎಂದು ತಿಳಿಯಲು ವೆಬ್‌ಸೈಟ್ ಚೆಕ್‌ ಮಾಡಿ.

ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ ನಿಗದಿಪಡಿಸಿಲ್ಲ.

ಅರ್ಜಿ ಶುಲ್ಕ ಮ್ತು ಪಾವತಿಸುವ ವಿಧಾನ: ST/SC, ಅಂಗವಿಕಲ ಹಾಗೂ ಮಹಿಳಾ ಅಭ್ಯರ್ಥಿಗಳು 250 ರೂ, OBC ಅಭ್ಯರ್ಥಿಗಳು 500 ರೂ, ಸಾಮಾನ್ಯ ವರ್ಗದ ಅಭ್ಯರ್ಥಿಗಳು 1000 ರೂ ಗಳನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್‌ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು.

-ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ನವೆಂಬರ್ 29, 2018

– ಕರ್ನಾಟಕ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ : ಬೆಂಗಳೂರು ಹಾಗೂ ಧಾರವಾಡ

– ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ ವೆಬ್‌ಸೈಟ್ ವಿಳಾಸ :www.asrb.org.in ಅಥವಾ www.icar.org.in

November 29 is deadline for agricultural related post graduates to take up the NET exam. Read more about the here..

You may also like