Home » BIG BOSS ನಲ್ಲಿ ವಿಜ್ಞಾನವು ಇಲ್ಲಾ ವಿನೋದವು ಇಲ್ಲಾ; ಅದರ ಬದಲು ಇಂತಹದೊಂದು ರಿಯಾಲಿಟಿ ಶೋ ಮಾಡಿ..

BIG BOSS ನಲ್ಲಿ ವಿಜ್ಞಾನವು ಇಲ್ಲಾ ವಿನೋದವು ಇಲ್ಲಾ; ಅದರ ಬದಲು ಇಂತಹದೊಂದು ರಿಯಾಲಿಟಿ ಶೋ ಮಾಡಿ..

by manager manager

ಕಿರುತೆರೆಯಲ್ಲಿ ಬಾರಿ ವಿಶೇಷ ಮತ್ತು ಮನ್ನಣೆ ಗಿಟ್ಟಿಸಿರುವ ಬಹುದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ‘ಬಿಗ್ ಬಾಸ್(Big Boss)’. ಈ ರಿಯಾಲಿಟಿ ಶೋ ಬಹುತೇಕ ಎಲ್ಲಾ ಬಾಷೆಗಳನ್ನು ಆವರಿಸುತ್ತಿದೆ. ಈ ವರೆಗೂ ಬಿಗ್ ಬಾಸ್(Big Boss) ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ, ಪ್ರೇಕ್ಷಕರು ಆ ಕ್ಷೇತ್ರದವರನ್ನು ಆಯ್ಕೆ ಮಾಡಿಲ್ಲ, ಈ ಕ್ಷೇತ್ರದವರನ್ನು ಆಯ್ಕೆ ಮಾಡಿಲ್ಲ, ಕೇವಲ ಸೆಲೆಬ್ರಿಟಿಗಳನ್ನೇ ಮಾತ್ರ ಈ ರಿಯಾಲಿಟಿ ಶೋಗೆ ಆಯ್ಕೆ ಮಾಡಲಾಗುತ್ತದೆ ಎಂದು ದೂರುತ್ತಿದ್ದರು. ಆದರೆ ಈಗ ಪ್ರಖ್ಯಾತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್‌(WhatsApp) ನಲ್ಲಿ ಬೇರೆಯದೇ ರೀತಿಯಾದ ಮನವಿ ಕೇಳಿ ಬರುತ್ತಿದ್ದು, ಈ ಮೆಸೇಜ್ ವಾಟ್ಸಾಪ್‌ನಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.

ಗಮನಾರ್ಹ ಅಂಶವೆಂದರೆ ವಾಟ್ಸಾಪ್(WhatsApp) ನಲ್ಲಿ ವೈರಲ್ ಆಗಿರುವ ಈ ಮೆಸೇಜ್‌ನಲ್ಲಿ ಬಿಗ್‌ ಬಾಸ್(Big Boss) ರಿಯಾಲಿಟಿ ಶೋ ಬಗ್ಗೆ ಬೇಸರ ವ್ಯಕ್ತಪಡಿಸಿ, ಅದರ ಬದಲಾಗಿ ಹೊಸ ಐಡಿಯಾ ಒಂದನ್ನು ಸಹ ನೀಡಲಾಗಿದೆ. ಆ ಐಡಿಯಾ ಯಾವುದು? ಬಿಗ್‌ ಬಾಸ್ ಕುರಿತು ಏನೆಲ್ಲಾ ಹೇಳಲಾಗಿದೆ? ವಾಟ್ಸಾಪ್‌ನಲ್ಲಿ ವೈರಲ್ ಆಗಿರುವ ಆ ಮೆಸೇಜ್ ಆದ್ರು ಯಾವುದು? ಎಂಬುದನ್ನು ಈ ಕೆಳಗೆ ನೋಡಿ.

ವಾಟ್ಸಾಪ್ ನಲ್ಲಿ ವೈರಲ್ ಆಗಿರುವ ಮೆಸೇಜ್ ಈ ಕೆಳಗಿನಂತಿದೆ..

“BIG BOSS

20 ಜನ ಒಂದು ಮನೆಯಲ್ಲಿ.90 ದಿನಗಳ ಸಾಹಸ,..

ಕ್ಯಾಮರಾಗಳ ಚಿತ್ರೀಕರಣ ಪ್ರತಿದಿನ ಒಂದೂವರೆ ತಾಸು ಪ್ರಸಾರ.

ಅದನ್ನು ನೋಡಲು ಲಕ್ಷಾಂತರ ಜನ ಮತ್ತು ಅವರ ಅಮೂಲ್ಯವಾದ ಸಮಯ ಎಲ್ಲಾ ಹಾಳು.

ಇದರಲ್ಲಿ. ವಿಜ್ಞಾನವೂ ಇಲ್ಲಾ! ವಿನೋದವೂ ಇಲ್ಲಾ!

ಪ್ರಜೆಗಳಿಗೆ ಇದರಿಂದ. ಯಾವುದೇ ಪ್ರಯೋಜನ ಇಲ್ಲಾ..

ಇಂತಹ ಆಟದ ಬದಲಿಗೆ!

ದೇಶವ್ಯಾಪಿ 100 ಮಂದಿ ಯುವ ನಿರುದ್ಯೋಗಿಗಳು ಉದಾ.ಇಂಜೀನಿಯರ್ ಉನ್ನತ ಪದವಿದರರು

ಮತ್ತು ವಿಜ್ಞಾನಿಗಳು ಇತರ ಕ್ಷೇತ್ರದಿಂದ ಆಯ್ಕೆಮಾಡಿ

ಒಂದು ಸ್ಥಳದಲ್ಲಿ 100 ದಿನದ ಸಮಯದಲ್ಲಿ ಇಲ್ಲಿಯವರಗೂ ಯಾರೂ ಕಂಡುಹಿಡಿಯದ

ಹೊಸ ವಸ್ತು ಉತ್ಪನ್ನ ಆವಿಷ್ಕರಸಿ ಎಂದು ಸ್ಪರ್ದೆ ಏರ್ಪಡಿಸುವುದು.

ಹಾಗೆ 20 ಮಂದಿ ರೈತರನ್ನು ಆಯ್ಕೆ ಮಾಡಿ ಪ್ರತಿಯೊಬ್ಬರಿಗೆ 1 ಎಕರೇ ಭೂಮಿ ಕೊಟ್ಟು.

ಬೆಳೆ ಬೆಳೆಯುವದಕ್ಕೆ ಎಲ್ಲಾ ಸಹಕಾರ ನಿಡಬೇಕು. ಹೊಸ ಬೆಳೆ ಹೊಸ ಪದ್ದತಿ ಹೊಸ ಉತ್ಪನ್ನ

ಸ್ಫರ್ದೆ ಏರ್ಪಡಿಸಿ.

ಪ್ರಪಂಚ ಗೌರವ ಪಡುವ. ಇಂಜಿನಿಯರ್,ಪದವಿಧರ,ವಿಜ್ಞಾನಿಗಳು,ರೈತರು.

ಬೆಳಕಿಗೆ ಬರುತ್ತಾರೆ.

ದೇಶದ ಚರಿತ್ರೆ ಇತಿಹಾಸ ಬದಲಾಯಿಸುತ್ತಾರೆ…

ಈ ಅಭಿಪ್ರಾಯ ಸರಿ ಇದ್ದರೆ ಎಲ್ಲಾರಿಗೂ ಷೇರ್ ಮಾಡಿ..,”

ಕೃಪೆ: ವಾಟ್ಸಾಪ್

ಈ ಮೆಸೇಜ್ ಅನ್ನು ಮೂಲತಃ ಯಾರು ರಚಿಸಿದ್ದಾರೆ, ಈ ಅಲೋಚನೆ ಯಾರದ್ದು ಎಂಬ ಮಾಹಿತಿ ಲಭ್ಯವಿಲ್ಲ. ಆದರೆ ವಾಟ್ಸಾಪ್ ನಲ್ಲಿ ವೈರಲ್ ಆಗಿದ್ದು, ವೈಯಕ್ತಿಕವಾಗಿ ಎಲ್ಲರ ವಾಟ್ಸಾಪ್ ನಲ್ಲಿ ಬಹುತೇಕ ಹರಿದಾಡಿದೆ. ಈ ಮೇಲಿನ ಮೆಸೇಜ್ ಓದಿದವರು ಕಾಮೆಂಟ್ ಅನ್ನು ಕನ್ನಡ ಅಡ್ವೈಸರ್ ನ ಕಾಮೆಂಟ್ ಬಾಕ್ಸ್‌ ನಲ್ಲಿ ನೀಡಬಹುದು.

‘There is no science and game in Big Boss; instead of show such a good reality show like this..’ These type of a message was going viral in WhatsApp. Check this full message in this article.

ಚಿತ್ರ ಕೃಪೆ: ದಿ ಪಯೋನೀರ್

You may also like