Home » 14 ತಿಂಗಳ ಬಳಿಕ ಬೆಂಗಳೂರು ವಿ.ವಿಗೆ ಕುಲಪತಿ ನೇಮಕ: ಕೆ.ಆರ್.ವೇಣುಗೋಪಾಲ್‌ ನೂತನ ಕುಲಪತಿ

14 ತಿಂಗಳ ಬಳಿಕ ಬೆಂಗಳೂರು ವಿ.ವಿಗೆ ಕುಲಪತಿ ನೇಮಕ: ಕೆ.ಆರ್.ವೇಣುಗೋಪಾಲ್‌ ನೂತನ ಕುಲಪತಿ

by manager manager

ಬೆಂಗಳೂರು: 14 ತಿಂಗಳ ಬಳಿಕ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಶಾಶ್ವತ ಕುಲಪತಿಗಳನ್ನು ನೇಮಿಸಲಾಗಿದೆ. ಕೆ.ಆರ್.ವೇಣುಗೋಪಾಲ್‌ ಅವರನ್ನು ರಾಜ್ಯಪಾಲ ವಜುಬಾಯಿವಾಲ ಕುಲಪತಿಗಳಾಗಿ ನೇಮಕ ಮಾಡಿದ್ದಾರೆ.

2017 ಫೆಬ್ರುವರಿ 6ರಂದು ಬಿ.ತಿಮ್ಮೇಗೌಡ ಅವರ ನಿವೃತ್ತರಾದ ನಂತರ ತೆರವಾಗಿದ್ದ ಸ್ಥಾನಕ್ಕೆ ಈಗ ಪೂರ್ಣಪ್ರಮಾಣದ ಕುಲಪತಿಗಳನ್ನು ರಾಜ್ಯಪಾಲರು ಮಂಗಳವಾರ ನೇಮಕ ಮಾಡಿದ್ದಾರೆ. ಇವರ ಕುಲಪತಿ ಅವಧಿ ಇಲ್ಲಿಂದ 4 ವರ್ಷಗಳವರೆಗೆ ಇರುತ್ತದೆ. ಇದೇ ಮಾರ್ಚ್‌ನಲ್ಲಿ ಐದನೇ ಹಂಗಾಮಿ ಕುಲಪತಿಯಾಗಿ ಗಣಿತ ವಿಭಾಗದ ಡೀನ್‌ ಶಿವಕುಮಾರ್‌ ಅವರು ಅಧಿಕಾರ ಸ್ವೀಕರಿಸಿದ್ದರು. ಜುಲೈ 7ಕ್ಕೆ ಅವರ ಅವಧಿ ಪೂರ್ಣಗೊಳ್ಳುತ್ತಿತ್ತು.

ಯಾವುದೇ ವಿವಿಯ ಕುಲಪತಿ ಹುದ್ದೆಯಲ್ಲಿ ಇರುವವರು ನಿವೃತ್ತರಾದಾಗ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ ಪ್ರಕಾರ ಪೂರ್ಣಾವಧಿ ಕುಲಪತಿ ನೇಮಕವಾಗುವವರೆಗೆ ವಿಶ್ವವಿದ್ಯಾಲಯದ ಹಿರಿಯ ಡೀನ್ ಹಂಗಾಮಿ ಕುಲಪತಿಯಾಗಿ ನೇಮಕವಾಗುತ್ತಾರೆ.

ಇನ್ನು ಬೆಂಗಳೂರು ವಿವಿಗೆ ಕುಲಪತಿ ಹೆಸರು ಶಿಫಾರಸು ಮಾಡಲು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್‌.ಆರ್‌. ನಿರಂಜನ ಅಧ್ಯಕ್ಷತೆಯಲ್ಲಿ ಶೋಧನಾ ಸಮಿತಿ ರಚಿಸಲಾಗಿತ್ತು. ಪ್ರೊ.ಆರ್‌.ಸಿ. ಕುಹಾದ್, ಡಾ.ಎಸ್‌.ಇಂದುಮತಿ ಹಾಗೂ ಡಾ. ರಮಾನಂದ ಶೆಟ್ಟಿ ಅವರು ಈ ಸಮಿತಿಯಲ್ಲಿದ್ದರು.

Bangalore university gets new vice chancellor after 14 months. Former UVCE principal Venugopal KR has been appointed vice-chancellor of Bangalore University. Governor vajubhai vala appointed KR Venugopal has vice-chancellor.

You may also like