Home » ಬೇವಿನಲ್ಲಿದೆ ಔಷಧ ಗುಣಗಳ ಆಗರ: ಗ್ರಾಮೀಣ ಜನರು ಮಿಸ್‌ ಮಾಡದೇ ತಿಳಿಯಿರಿ

ಬೇವಿನಲ್ಲಿದೆ ಔಷಧ ಗುಣಗಳ ಆಗರ: ಗ್ರಾಮೀಣ ಜನರು ಮಿಸ್‌ ಮಾಡದೇ ತಿಳಿಯಿರಿ

by manager manager

ಗ್ರಾಮೀಣ ಜನರು.. ಅದರಲ್ಲೂ ದಿನನಿತ್ಯ ಬೇವನ್ನು ಪೋಷಿಸುವ ರೈತರಿಗೂ ಭಾಗಶಃ ಈ ಬೇವಿನ ಔಷಧ ಗುಣಗಳ ಬಗ್ಗೆ ತಿಳಿದಿರಲು ಸಾಧ್ಯವಿಲ್ಲ. ಹೌದು.. ಬೇವು(ಕಹಿ ಬೇವು) ಹಲವು ರೋಗಗಳ ಪ್ರತಿರೋಧಕವಾಗಿ ಕೆಲಸ ಮಾಡಬಲ್ಲದು. ಬೇವು ನೋವು ನಿವಾರಕ. ದೇಹಕ್ಕೆ ಹಾನಿ ಉಂಟುಮಾಡಬಲ್ಲ ಯಾವುದೇ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಮೊಟಕುಗೊಳಿಸುತ್ತದೆ. ಇಷ್ಟು ಮಾತ್ರವಲ್ಲದೇ ಔಷಧ ಗುಣಗಳ ಆಗರ ಈ ಬೇವು ಎನ್ನಬಹುದು.

ಬೇವು ಹಲವು ಅನಾರೋಗ್ಯಗಳನ್ನು ನಿವಾರಿಸುವ ಔಷಧ ಎಂಬುದನ್ನು ಭಾರತೀಯರು ಸಹಸ್ರಾರು ವರ್ಷಗಳ ಹಿಂದೆಯೇ ತಿಳಿದಿತ್ತು. ಇನ್ನೂ… ಆಧುನಿಕ ಜಗತ್ತು ಹಲವು ಸಂಶೋಧನೆಗಳಿಂದ ಕಹಿಬೇವಿನ ಔಷಧೀಯ ಗುಣಗಳನ್ನು ಪ್ರಾಯೋಗಿಕವಾಗಿ ತಿಳಿದುಕೊಂಡಿದೆ. ಇನ್ನೂ ಕಹಿಬೇವನ್ನು ಶ್ಯಾಂಪೂಗಳು, ಸೋಪ್‌ಗಳು, ಚರ್ಮದ ಕ್ರೀಮ್‌ಗಳಲ್ಲಿ ಬಳಸಲಾಗುತ್ತಿದೆ. ಬೇವು ಸೌಂದರ್ಯ ವರ್ಧಕವು ಹೌದು. ಅದು ಹೇಗೆ ಎಂಬುದನ್ನು ಸವಿವರವಾಗಿ ಕೆಳಗೆ ನೀಡಲಾಗಿದೆ.

ಬೇವಿನ ಔಷಧೀಯ ಗುಣಗಳು ಯಾವುವು? ಅದರ ಉಪಯೋಗಗಳು ಏನು? ಯಾವೆಲ್ಲಾ ರೋಗಗಳನ್ನು ಬೇವು ನಿವಾರಿಸಬಲ್ಲದು ಎಂಬುದನ್ನು ಈ ಕೆಳಗಿನಂತೆ ಓದಿ ತಿಳಿಯಿರಿ..

ಬೇವು ಬ್ಯಾಕ್ಟೀರಿಯಾ ವಿರೋಧಿ

ಕೆಲವು ಬ್ಯಾಕ್ಟೀರಿಯಾಗಳು ದೇಹಕ್ಕೆ ಹಾನಿಕಾರಕ. ಕಹಿ ಬೇವನ್ನು (ಬೇವಿನ ಎಲೆ) ಪೇಸ್ಟ್‌ ಮಾಡಿ ಮೈಗೆ ಹಚ್ಚಿದರೆ ಮತ್ತು ಅಲ್ಪ ಪ್ರಮಾಣದಲ್ಲಿ ಬೇವಿನ ಎಲೆಗಳನ್ನು ತಿಂದರೆ ಬ್ಯಾಕ್ಟೀರಿಯಾ ಸೋಂಕುಗಳಿಂದ ದೂರವಾಗಬಹುದು. ಹಾಗೂ ಮೈ ಹಚ್ಚಿದ ಬೇವಿನ ಎಲೆ ಪೇಸ್ಟ್‌ ಒಣಗಿದ ಮೇಲೆ ಸ್ನಾನ ಮಾಡಿದರೆ ಚರ್ಮ ಸ್ವಚ್ಛಗೊಳ್ಳುತ್ತದೆ ಮತ್ತು ಆರೋಗ್ಯ ಪೂರ್ಣವಾಗಿರುತ್ತದೆ.

ಕ್ಯಾನ್ಸರ್ ನಿರೋಧಕ

ದೇಹದಲ್ಲಿನ ಕ್ಯಾನ್ಸರ್ ಕಾರಕ ಕೋಶಗಳನ್ನು ಬೇವು ನಾಶ ಮಾಡುತ್ತದೆ. ದೇಹದಲ್ಲಿ ಅವ್ಯವಸ್ಥಿತ ಕ್ಯಾನ್ಸರ್ ಕಾರಕ ಕೋಶಗಳು ಇರುತ್ತದೆ. ಅವುಗಳು ದೇಹದ ಅಸಮತೋಲಕ ಪ್ರಕ್ರಿಯೆಗಳಿಂದ ಕೆಲವೊಮ್ಮೆ ವ್ಯವಸ್ಥಿತಗೊಂಡು ಕ್ಯಾನ್ಸರ್ ಉಂಟಾಗುತ್ತದೆ. ಈ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಆಗಾಗ ಬೇವಿನ ಎಲೆಗಳನ್ನು ಅಲ್ಪ ಪ್ರಮಾಣದಲ್ಲಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.

ಚರ್ಮಕ್ಕೆ ವಯಸ್ಸಾಗದಂತೆ ಬೇವು ತಡೆಯಬಲ್ಲದು

ಬೇವಿನ ಎಣ್ಣೆಯಲ್ಲಿ ಪೌಷ್ಟಿಕಾಂಶಗಳು ಹೇರಳವಾಗಿದ್ದು, ಚರ್ಮದ ಹಾರೈಕೆಯಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಬೇವಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳಿದ್ದು ವಾತಾವರಣದ ಕಲುಷಿತ ಗಾಳಿ ಧೂಳಿನ ಕಣಗಳಿಂದ ಚರ್ಮಕ್ಕೆ ಉಂಟಾಗುವ ಹಾನಿಯನ್ನು ತಡೆಯಬಲ್ಲದು. ಇದರಲ್ಲಿನ ಕಾರ್ಟಿನಾಯ್ಡ್‌ಗಳು ಚರ್ಮಕ್ಕೆ ವಯಸ್ಸಾಗದಂತೆ ರ್ಯಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ. ಚರ್ಮದ ಮೇಲೆ ಜಿಡ್ಡು ಜಿಡ್ಡು ಕಾಣುವುದನ್ನು ಬೇವಿನಲ್ಲಿನ ಫ್ಯಾಟಿ ಆಸಿಡ್‌ಗಳು ಹಾಗೂ ಇ ವಿಟಮಿನ್‌ಗಳು ತಡೆಯುತ್ತವೆ. ಬೇವಿನ ಎಣ್ಣೆಯನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮದ ತಾರುಣ್ಯ ಹೆಚ್ಚುತ್ತದೆ. ಸುಕ್ಕುಗಳನ್ನು ನಿವಾರಣೆ ಮಾಡುತ್ತದೆ.

ಚರ್ಮರೋಗ ನಿವಾರಕ ಬೇವು

ಚರ್ಮರೋಗ ಎಜಿಮಾದಿಂದ ಚರ್ಮ ಕೆರೆತ, ಉರಿ ಕಾಣಿಸಿಕೊಳ್ಳುವುದು. ಇದು ಹೆಚ್ಚಾದಂತೆ ಇತರೆ ಚರ್ಮ ರೋಗಗಳು ಉಲ್ಬಣವಾಗುತ್ತವೆ. ಇದಕ್ಕೆ ಉತ್ತಮ ಪರಿಹಾರ ಬೇವಿನ ಎಣ್ಣೆಯನ್ನು ಮಸಾಜ್ ಮಾಡುವುದು. ಬೇವಿನ ಎಣ್ಣೆಯಲ್ಲಿರುವ ಫ್ಯಾಟಿ ಆಸಿಡ್‌ಗಳು ಹಾಗೂ ಇ ವಿಟಮಿನ್ ಚರ್ಮದ ಹೊರ ಪದರವನ್ನು ಶೀಘ್ರವಾಗಿ ಪ್ರವೇಶಿಸಿ ಚರ್ಮ ಶುಷ್ಕಗೊಳ್ಳುವುದನ್ನು ತಡೆಯುತ್ತದೆ.

ಮೊಡವೆಗೆ ದಿವ್ಯಷಧ

ಬೇವಿನ ಎಣ್ನೆ ಮೊಡವೆ ಪೀಡಿತ ಚರ್ಮಕ್ಕೆ ರಾಮಬಾಣ. ಬೇವಿನಲ್ಲಿನ ಆಸ್ಪಿರಿನ್ ಹೋಲುವ ಅಂಶ ಮೊಡವೆಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಿ ಮೊಡವೆ ಕಡಿಮೆ ಮಾಡುವುದರ ಜೊತೆಗೆ ಪುನಃ ಮೊಡವೆಗಳು ಏಳದಂತೆ ತಡೆಯುತ್ತದೆ.

ಹಲವು ಚರ್ಮರೋಗಗಳ ನಿವಾರಕ ಬೇವು

ಮುಖದಲ್ಲಿ ಉಂಟಾಗುವ ಕಪ್ಪು ಕಲೆಗಳನ್ನು(ಫಿಗ್ಮೆಂಟೇಶನ್) ಬೇವಿನ ಬೀಜದ ಎಣ್ಣೆ ನಿವಾರಿಸುತ್ತದೆ. ಬೇವಿನ ಬೀಜದ ಎಣ್ಣೆಯನ್ನು ನಿಯಮಿತವಾಗಿ ಉಪಯೋಗಿಸುವುದರಿಂದ ಶ್ವೇತವರ್ಣ ಹಾಗೂ ಚರ್ಮಕ್ಕೆ ತಾಜಾತನ ಬರುತ್ತದೆ. ಚರ್ಮಕ್ಕೆ ಬಣ್ಣ ನೀಡುವ ಮೆಲನಿನ್ ಅಂಶ ಹೆಚ್ಚು ಉತ್ಪಾದನೆ ಆದಾಗ ಕಪ್ಪು ಕಲೆಗಳು ಉತ್ಪತ್ತಿ ಆಗುತ್ತವೆ. ಈ ಮೆಲನಿನ್‌ ಅಂಶದ ಹೆಚ್ಚು ಉತ್ಪಾದನೆಗೆ ತಡೆಯೊಡ್ಡಿ ಕಪ್ಪು ಕಲೆಗಳು ಉಂಟಾಗದಂತೆ ಬೇವು ಬೀಜದ ಎಣ್ಣೆ ತಡೆಯುತ್ತದೆ.

ಚರ್ಮವನ್ನು ಸಾಮಾನ್ಯವಾಗಿ ಬಾಧಿಸುವ ಫಂಗಸ್ ಸೋಂಕುಗಳಾದ ಉಗುರು ಫಂಗಸ್, ರಿಂಗ್‌ವರ್ಮ್, ನಂಜು ಕೆರೆತಕ್ಕೆ ಬೇವಿನ ಎಲೆ ರಸ ಅತ್ಯಂತ ಶಕ್ತಿಸಾಲಿ ಮೆಡಿಸನ್. ಬೇವು 14 ಜಾತಿಯ ಫಂಗಸ್‌ಗೆ ಮಾರಕ ಎಂಬುದನ್ನು ಸಂಶೋಧನೆಗಳು ಪತ್ತೆ ಹಚ್ಚಿವೆ.

ಮುಖದಲ್ಲಿನ ಕಪ್ಪುಕಲೆಗಳನ್ನು ತೊಡೆದುಹಾಕುತ್ತದೆ

– ಬೇವಿನಲ್ಲಿ ಆಂಟಿಸೆಪ್ಟಿಕ್ ಗುಣಗಳಿದ್ದು, ಚರ್ಮಕ್ಕೆ ಸೋಂಕು ಉಂಟಾಗದಂತೆ ತಡೆಯುತ್ತದೆ.

– ಬೇವಿನ ಪೇಸ್ಟ್ ಮುಖಕ್ಕೆ ಹಚ್ಚುವುದು ಉತ್ತಮ ಮಾಸ್ಕ್‌ ಆಗಿದ್ದು, ಚರ್ಮದ ರಂಧ್ರಗಳಿಂದ ಕಲ್ಮಷ ತಗೆದು ರಂಧ್ರಗಳನ್ನು ಬಿಗಿಗೊಳಿಸುತ್ತದೆ.

– ವೈರಸ್ ಬೆಳವಣಿಗೆಯನ್ನು ತಡೆಯುತ್ತದೆ.

– ಫಂಗಸ್ ಬೆಳವಣಿಗೆಯನ್ನು ತಡೆಯುತ್ತದೆ.

– ಬೇವು ನೋವು ನಿವಾರಕ ಗುಣ ಹೊಂದಿದೆ.

– ಉರಿಯೂತ ಹಾಗು ಬಾವನ್ನು ಕಡಿಮೆ ಮಾಡುತ್ತದೆ.

– ಸೂಕ್ಷ್ಮ ಜೀವಿಗಳು ಬೆಳೆಯದಂತೆ ತಡೆಯುತ್ತದೆ.

You may also like