Home » ಫ್ಯಾಷನ್ ಟೆಕ್ನಾಲಜಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ಫ್ಯಾಷನ್ ಟೆಕ್ನಾಲಜಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

by manager manager

ಕೇಂದ್ರ ಸರ್ಕಾರದ ಜವಳಿ ಸಚಿವಾಲಯದ ಅಧೀನದ ವ್ಯಾಪ್ತಿಯಲ್ಲಿರುವ ಸ್ವಾಯತ್ತ ಸಂಸ್ಥೆ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ(National Institute of Fashion Technology) ಯಲ್ಲಿ ಖಾಲಿ ಇರುವ ಸಹಾಯಕ ಪ್ರೊಫೆಸರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ.

ರಾಜ್ಯದ ಬೆಂಗಳೂರು ಸೇರಿದಂತೆ ಭಾರತದಾದ್ಯಂತ 16 ಫ್ಯಾಷನ್ ಟೆಕ್ನಾಲಜಿ ಶಿಕ್ಷಣ ನೀಡುವ ಕ್ಯಾಂಪಸ್ ಗಳಿದ್ದು, ಇವುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು 5 ವರ್ಷ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಸಂಖ್ಯೆ: 179

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 29/07/2019

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06/09/2019

ಮೀಸಲಾತಿವಾರು ಹುದ್ದೆಗಳ ಸಂಖ್ಯೆ

SC ಅಭ್ಯರ್ಥಿಗಳ ಸಂಖ್ಯೆ – 26

ST ಅಭ್ಯರ್ಥಿಗಳ ಸಂಖ್ಯೆ – 13

ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಸಂಖ್ಯೆ – 49

ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳ ಸಂಖ್ಯೆ – 17

ಸಾಮಾನ್ಯ ವರ್ಗದ ಅಭ್ಯರ್ಥಿಗಳ ಸಂಖ್ಯೆ – 74

ಆಯ್ಕೆ ಪ್ರಕ್ರಿಯೆ

– ಲಿಖಿತ ಪರೀಕ್ಷೆ, ಪ್ರೆಸೆಂಟೇಶನ್ ಮತ್ತು ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

– ಲಿಖಿತ ಪರೀಕ್ಷೆಯಲ್ಲಿ 2 ಹಂತಗಳಿದ್ದು, ಮೊದಲನೇ ಹಂತದಲ್ಲಿ ಜನರಲ್ ಎಬಿಲಿಟಿ, ಸಂವಹನ ಸಾಮರ್ಥ್ಯ, ಸಾಮಾನ್ಯ ಅರಿವು, ಅನಾಲಿಟಿಕಲ್ ಸಾಮರ್ಥ್ಯ, ರೀಸನಿಂಗ್ ಮತ್ತು ಡಾಟಾ ಇಂಟರ್‌ಪ್ರೆಟೇಷನ್ ಗೆ ಸಂಬಂಧಪಟ್ಟ ಪ್ರಶ್ನೆಗಳಿರುತ್ತವೆ.

– ಎರಡನೇ ಹಂತದಲ್ಲಿ ಜನರಲ್ ಆಪ್ಟಿಟ್ಯೂಡ್ ಗೆ ಸಂಬಂಧಪಟ್ಟಂತೆ ಉತ್ತರಗಳನ್ನು ನಿರೀಕ್ಷಿಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದವರು ಮುಂದಿನ ಹಂತದ ನೇಮಕ ಪ್ರಕ್ರಿಯೆಗಳಿಗೆ ಹಾಜರಾಗಬೇಕಾಗುತ್ತದೆ.

ಶೈಕ್ಷಣಿಕ ಅರ್ಹತೆ

– ಕನಿಷ್ಠ ಶೇ.55 ಅಂಕಗಳೊಂದಿಗಗೆ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

ಅರ್ಜಿ ಶುಲ್ಕ

– SC/ST ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ವರ್ಗದವರು ಅರ್ಜಿ ಶುಲ್ಕ ರೂ.1000 ಪಾವತಿಸಬೇಕು.

ವಯೋಮಿತಿ

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 40 ವರ್ಷ ಮೀರಿರಬಾರದು.

National Institute of Fashion Technology Assistant Professor recruitment notification 2019 – click here

To Apply online application for Fashion Technology Assistant Professor – click here

Official website of NIFT – click here

You may also like