Home » ಮೈಸೂರಿಗೆ ಸ್ವಚ್ಛ ಮಧ್ಯಮ ನಗರ ಪ್ರಶಸ್ತಿ ಪ್ರದಾನ

ಮೈಸೂರಿಗೆ ಸ್ವಚ್ಛ ಮಧ್ಯಮ ನಗರ ಪ್ರಶಸ್ತಿ ಪ್ರದಾನ

by manager manager

ಇಂದೋರ್: ಸ್ವಚ್ಛ ಮಧ್ಯಮ ನಗರಗಳ ಪಟ್ಟಿಯಲ್ಲಿ ನಂ.1 ಸ್ವಚ್ಛನಗರಿ ಸ್ಥಾನ ಪಡೆದುಕೊಂಡ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಮಧ್ಯಮ ನಗರ ಪ್ರಶಸ್ತಿ ಪ್ರದಾನ ಮಾಡಿದರು.

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಶಸ್ತಿ ಪ್ರದಾನ ಮಾಡಿದರು. ಮೇಯರ್‌ ಭಾಗ್ಯವತಿ, ಪಾಲಿಕೆ ಮಾಜಿ ಆಯುಕ್ತರಾದ ಜಿ.ಜಗದೀಶ್‌ ಹಾಗೂ ಕೆ.ಎಚ್‌. ಜಗದೀಶ್‌ ಅವರು ಸಮಾರಂಭದಲ್ಲಿ ಪಾಲ್ಗೊಂಡು ಪ್ರಶಸ್ತಿ ಸ್ವೀಕರಿಸಿದರು.

Mysuru received Cleanest Medium City Award

‘ಸ್ವಚ್ಛ ಸರ್ವೇಕ್ಷ ಣ್‌ 2018’ ಶೀರ್ಷಿಕೆ ಅಡಿಯಲ್ಲಿ ಈ ವರ್ಷ ಸಮೀಕ್ಷೆ ನಡೆಸಲಾಗಿತ್ತು. ಅರಮನೆಗಳ ನಗರಿ ಮೈಸೂರು 3-10 ಲಕ್ಷ ದೊಳಗಿನ ಜನಸಂಖ್ಯೆಯ ಮಧ್ಯಮ ನಗರಗಳ ವಿಭಾಗದಲ್ಲಿ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು.

ಇನ್ನು ಸಮಗ್ರ ಸ್ವಚ್ಚತೆಯಲ್ಲಿ ಇಂದೋರ್ ಮೊದಲ ಸ್ಥಾನವನ್ನು ಪಡೆದಿದ್ದರೆ, ರಾಜ್ಯವಾರು ಪಟ್ಟಿಯಲ್ಲಿ ಜಾರ್ಖಂಡ್ ಅಗ್ರಸ್ಥಾನ ಪಡೆದಿದೆ. ಮಧ್ಯಪ್ರದೇಶದ ಇಂದೋರ್ ಸತತ ಎರಡನೆಯ ಬಾರಿಗೆ ಅಗ್ರಸ್ತಾನವನ್ನು ಕಾಯ್ದುಕೊಂಡಿದೆ. ಅಲ್ಲದೆ ಕ್ರಮವಾಗಿ ಭೂಪಾಲ್, ಚಂದಿಗಡ ಮತ್ತು ನವದೆಹಲಿ ಎರಡು ಮೂರು ಮತ್ತು ನಾಲ್ಕನೆಯ ಸ್ಥಾನವನ್ನು ಪಡೆದುಕೊಂಡಿದೆ. ಈ ಸಮಗ್ರ ವಿಭಾಗದಲ್ಲಿಯೂ ಕೂಡ ಮೈಸೂರು ನಗರ 8 ನೇ ಸ್ಥಾನವನ್ನು ಪಡೆದುಕೊಂಡಿದೆ.

Mysuru received Cleanest Medium City Award. Prime Minister Narendra Modi presented the award at a ceremony held in Indore, MadhyaPradesh. The efforts of the District Administration, Mysuru City Corporation and the citizens paid off as the heritage city.

You may also like