Home » ಮೈಸೂರಿಗಿಲ್ಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ‘ಯೋಗ’

ಮೈಸೂರಿಗಿಲ್ಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ‘ಯೋಗ’

by manager manager

ಮೈಸೂರು: ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ದಾಖಲೆ ನಿರ್ಮಿಸುವ ನಿರೀಕ್ಷೆಯಲ್ಲಿದ್ದ ಮೈಸೂರಿಗೆ ನಿರಾಸೆಯಾಗಿದೆ. ೪ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಡೆಹರಾಡೂನ್’ನಲ್ಲಿ ಆಯೋಜಿಸಲು ಕೇಂದ್ರದ ಆಯುಶ್ ಸಚಿವಾಲಯ ನಿರ್ಧರಿಸಿದೆ. ಹೀಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಲಿರುವ ಕಾರ್ಯಕ್ರಮದಲ್ಲಿ ಒಂದು ಲಕ್ಷ ಜನರನ್ನು ಸೇರಿಸಿ ಯೋಗ ಪ್ರದರ್ಶಿಸಿ ದಾಖಲೆ ನಿರ್ಮಿಸುವ ಹಂಬಲದಲ್ಲಿದ್ದ ಯೋಗ ನಗರಿ ಮೈಸೂರಿಗೆ ತೀವ್ರ ನಿರಾಸೆಯಾಗಿದೆ.

ಈ ಮೊದಲು ಜೂನ್‌ 21 ರಂದು ನಡೆಯಲಿರುವ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಯೋಜನೆಗೆ ಮೈಸೂರು, ಹೈದರಾಬಾದ್‌, ಜೈಪುರ, ಅಹಮದಾಬಾದ್‌, ಡೆಹರಾಡೂನ್ ಸೇರಿದಂತೆ ಇನ್ನಿತರ ನಗರಗಳ ಹೆಸರು ಪಟ್ಟಿಯಲ್ಲಿತ್ತು. ಇವುಗಳ ಪೈಕಿ ಉತ್ತರಾಖಂಡ್’ನ ರಾಜಧಾನಿ ಡೆಹರಾಡೂನ್’ನಲ್ಲಿ ಅಂತಾರಾಷ್ಟ್ರೀಯ ಯೋಗ ಕಾರ್ಯಕ್ರಮ ಆಯೋಜಿಸಲು ಆಯುಶ್ ಸಚಿವಾಲಯ ನಿರ್ಧರಿಸಿದೆ. ಸಚಿವಾಲಯದ ನಿರ್ಧಾರದ ಹಿನ್ನಲೆ ಅಧಿಕಾರಿಗಳೆಲ್ಲ ಶನಿವಾರ ಡೆಹರಾಡೂನ್’ಗೆ ತೆರಳಿ ಪರಿಶೀಲನೆ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಈ ಹಿಂದೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಮೈಸೂರು ಆಯುಷ್ ಸಚಿವಾಲಯದ ಫೇವರಿಟ್ ಆಗಿತ್ತು. ಇದರ ಬೆನ್ನಲ್ಲೆ ಇತ್ತೀಚೆಗೆ ಕೇಂದ್ರದ ಆಯುಷ್ ಸಚಿವಾಲಯದ ಅಧಿಕಾರಿಗಳ ತಂಡ ಮೈಸೂರಿಗೆ ಭೇಟಿ ನೀಡಿ ಯೋಗ ಕಾರ್ಯಕ್ರಮ ಆಯೋಜನೆ ಮಾಡುವ ಸ್ಥಳ ಪರಿಶೀಲನೆ ನಡೆಸಿತ್ತು. ಹಾಗಾಗಿ ಈ ಬಾರಿ ಮೈಸೂರಿನಲ್ಲೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ನಮ್ಮದಾಗಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಪ್ರಧಾನಿ ಕಾರ್ಯಕ್ರಮ ಆಯೋಜನೆಗೆ ಬೇಕಾದ ಕೆಲವೊಂದು ಅಗತ್ಯತೆಗಳನ್ನು ಪೂರೈಸುವುದು ಮೈಸೂರಿನಲ್ಲಿ ಕಷ್ಟ ಎಂಬ ಕಾರಣಕ್ಕೆ ಆಯುಷ್ ಸಚಿವಾಲಯ ಡೆಹರಾಡೂನ್’ಲ್ಲಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಿದೆ.

ಮೈಸೂರಿನ ಯೋಗ ದಾಖಲೆ: ಕಳೆದ ಬಾರಿ ಯೋಗದ ತವರೂರು ಮೈಸೂರಿನಲ್ಲಿ ಜಿಲ್ಲಾಡಳಿತ ನೇತೃತ್ವದಲ್ಲಿ ಯೋಗಾಸಕ್ತರನ್ನು ಒಂದೆಡೆ ಸೇರಿಸಿ ಒಂದೇ ವೇದಿಕೆಯಲ್ಲಿ ಬೃಹತ್‌ ಯೋಗ ಪ್ರದರ್ಶಿಸಲು ತೀರ್ಮಾನಿಸಲಾಗಿತ್ತು. ಇದರ ಫಲವಾಗಿ ನಿರೀಕ್ಷೆಗೂ ಮೀರಿ 55 ಸಾವಿರ ಮಂದಿ ಯೋಗ ಪ್ರದರ್ಶನ ಮಾಡಿದರು. ಇದು ಗಿನ್ನೆಸ್ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲಾಯಿತು. ಈ ಹಿನ್ನಲೆಯಲ್ಲಿ ಮೈಸೂರು ನಗರವನ್ನು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಆಯೋಜನೆಗೆ ಪರಿಗಣಿಸಲಾಗಿತ್ತು. ಆದರೆ ಕಡೇ ಕ್ಷಣದಲ್ಲಿ ಆಯುಷ್ ಇಲಾಖೆ ಡೆಹರಾಡೂನ್ ಆಯ್ಕೆ ಮಾಡಿದ್ದು ಯೋಗಾಸಕ್ತರ ಬೇಸರ ಮುಡಿಸಿದೆ.

Mysuru miss the chance of hosting international yoga day. The Ayush Ministry of the Center has decided to organize the 4th International Yoga Day in Dehradun.

You may also like