Home » ಪ್ರಮುಖ ಪ್ರಚಲಿತ ವಿದ್ಯಮಾನಗಳು: ಮಾರ್ಚ್ 8

ಪ್ರಮುಖ ಪ್ರಚಲಿತ ವಿದ್ಯಮಾನಗಳು: ಮಾರ್ಚ್ 8

by manager manager

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ದಿನನಿತ್ಯ ಪತ್ರಿಕೆಗಳು ಹಾಗೂ ಇತರೆ ನಿಯತಕಾಲಿಕೆಗಳನ್ನು ಓದುತ್ತೀರಿ. ಇಂದಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಾಳೆ ಪ್ರಶ್ನೆಗಳನ್ನು ನಾಲ್ಕು ಆಯ್ಕೆಗಳನ್ನು ಕೊಟ್ಟು ಕೇಳಿದರೆ ಭಾಗಶಃ ಶೇ.90 ರಷ್ಟು ಸರಿ ಉತ್ತರಗಳನ್ನು ನೀಡಬಹುದು. ಆದರೆ ಆಯ್ಕೆಗಳನ್ನು ನೀಡದೆ ಕೇವಲ ಪ್ರಶ್ನೆಗಳನ್ನು ಕೇಳಿದರೆ? ಎಷ್ಟು ಉತ್ತರ ಸರಿ ಹೇಳುತ್ತೀರಿ? ನಿಮಗೆ ನೀವೆ ಪರೀಕ್ಷಿಸಿಕೊಳ್ಳಿ..

ನಿಮ್ಮ ಕನ್ನಡ ಅಡ್ವೈಜರ್ ದಿನನಿತ್ಯ 10 ಪ್ರಶ್ನೆಗಳನ್ನು ಬಹು ಆಯ್ಕೆ ಉತ್ತರಗಳನ್ನು ನೀಡದೆ, ಮೊದಲು ಕೇವಲ ಪ್ರಶ್ನೆಗಳನ್ನು ನೀಡಿ, ನಂತರ ಪುಟದ ಕೆಳಭಾಗದಲ್ಲಿ ಉತ್ತರಗಳನ್ನು ನೀಡಲಿದೆ. ಉತ್ತರಗಳನ್ನು ನೋಡುವ ಮೊದಲು ನಿಮ್ಮ ಜ್ಞಾನದ ಮಟ್ಟವನ್ನು ನೀವೆ ಮೊದಲು ಪರೀಕ್ಷಿಸಿಕೊಳ್ಳಿ. ನಂತರ ಉತ್ತರಗಳನ್ನು ನೋಡಿಕೊಳ್ಳಿರಿ..

1 ‘ದಿ ರೈಸ್ ನಾಲೆಡ್ಜ್‌ ಬ್ಯಾಂಕ್(The Rice Knowledge Bank)’ ಇತ್ತೀಚೆಗೆ ಸುದ್ದಿಯಲ್ಲಿತ್ತು. ಇದು ಯಾವ ರಾಜ್ಯದಲ್ಲಿ ಆರಂಭಗೊಂಡಿದೆ?

2 ತ್ರಿಪುರ ಸರ್ಕಾರದಿಂದ ‘ಅಟಲ್ ಬಿಹಾರಿ ವಾಜಪೇಯಿ ಎಲ್‌ಟಿಎ’ ಅನ್ನು ಮೊದಲ ಬಾರಿಗೆ ನೀಡಲಾಗಿದೆ?

3 3ಡಿ ಮುದ್ರಣ ಕೇಂದ್ರವನ್ನು ರಾಜ್ಯದಲ್ಲಿ ಸ್ಥಾಪಿಸಲು ಯಾವ ಐಟಿ ಕಂಪನಿಗಳು ಆಂಧ್ರ ಪ್ರದೇಶ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿವೆ?

4 ಆಹಾರ ಮತ್ತು ಕೃಷಿ ಸಂಸ್ಥೆ(Food and Agriculture Organisation) ಮುಖ್ಯಸ್ಥ ಸ್ಥಾನಕ್ಕೆ ಭಾರತದಿಂದ ಯಾರು ನಾಮನಿರ್ದೇಶನಗೊಂಡಿದ್ದಾರೆ?

5 PM-STIAC ಅಡಿಯಲ್ಲಿ ಎಷ್ಟು ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯಾಚರಣೆಗಳನ್ನು ಗುರುತಿಸಲಾಗಿದೆ?

6 ಮಕ್ಕಳಿಗೆ ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ಓದಲು ಶೈಕ್ಷಣಿಕ ಮಾರ್ಗದರ್ಶಿ ‘ಬೊಲೊ'(Bolo) ಆಪ್‌ ಆರಂಭಿಸಿದ ಟೆಕ್‌ ದೈತ್ಯ ಯಾವುದು?

7 ಛತ್ತೀಸ್‌ಗಢ ನಕ್ಸಲ್-ಪೀಡಿತ ಪ್ರದೇಶಗಳಲ್ಲಿ ಬುಡಕಟ್ಟು ಜನಾಂಗದ ವಿರುದ್ಧದ ಪ್ರಕರಣಗಳನ್ನು ಪರಿಶೀಲಿಸುವ ಸಮಿತಿಯ ಮುಖ್ಯಸ್ಥರು ಯಾರು?

8 ಬುಡಕಟ್ಟು ಜಿಲ್ಲೆಗಳಲ್ಲಿ ಪ್ರಾಚೀನ ಬುಡಕಟ್ಟು ಜನರ ಭಾಷೆ ‘ಗೋಂಡಿ'(Gondi) ಅನ್ನು ಬೋಧನೆ ಮಾಡಲು ನಿರ್ಧಿರಿಸಿರುವ ರಾಜ್ಯ ಸರ್ಕಾರ ಯಾವುದು?

9 ‘National Centre for Good Governance'(NCGG) ಕೇಂದ್ರ ಕಛೇರಿ ಯಾವುದು?

10 ‘ಅಲ್ ನಾಘ್ 2019’ ಭಾರತ ಮತ್ತು ಯಾವ ದೇಶದ ನಡುವಿನ ಜಂಟಿ ಕಾರ್ಯಾಚರಣೆ ಆಗಿದೆ.

ಮೇಲಿನ ಪ್ರಶ್ನೆಗಳಿಗೆ ಉತ್ತರಗಳು ಈ ಕೆಳಗಿನಂತಿವೆ

1 ಅಸ್ಸಾಂ

2 ತಂಗಾ ಡರ್ಲಾಂಗ್

3 Hewlett Packard

4 ರಮೇಶ್ ಚಂದ್

5 9

6 ಗೂಗಲ್ ಕಂಪನಿ

7 ಎ.ಕೆ.ಪಾಟ್ನಾಯಕ್

8 ಮಧ್ಯ ಪ್ರದೇಶ್

9 ನವ ದೆಹಲಿ

10 ಒಮನ್

Kannadaadvisor publishes relevant fact based on Current Affairs almost daily basis. This information helps you to keep a watch on current happenings and may be useful for General Awarness part of KAS, IAS, IBPS Banking, ssc-cgl, bank clerical and other similar examination. Here are the today current affairs quizzes.

You may also like