Home » ಪ್ರಮುಖ ಪ್ರಚಲಿತ ವಿದ್ಯಮಾನಗಳು: ಮಾರ್ಚ್ 20 & 21

ಪ್ರಮುಖ ಪ್ರಚಲಿತ ವಿದ್ಯಮಾನಗಳು: ಮಾರ್ಚ್ 20 & 21

by manager manager
March 20 and 21 Current affairs in Kannada for competitive exams

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ದಿನನಿತ್ಯ ಪತ್ರಿಕೆಗಳು ಹಾಗೂ ಇತರೆ ನಿಯತಕಾಲಿಕೆಗಳನ್ನು ಓದುತ್ತೀರಿ. ಇಂದಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಾಳೆ ಪ್ರಶ್ನೆಗಳನ್ನು ನಾಲ್ಕು ಆಯ್ಕೆಗಳನ್ನು ಕೊಟ್ಟು ಕೇಳಿದರೆ ಭಾಗಶಃ ಶೇ.90 ರಷ್ಟು ಸರಿ ಉತ್ತರಗಳನ್ನು ನೀಡಬಹುದು. ಆದರೆ ಆಯ್ಕೆಗಳನ್ನು ನೀಡದೆ ಕೇವಲ ಪ್ರಶ್ನೆಗಳನ್ನು ಕೇಳಿದರೆ? ಎಷ್ಟು ಉತ್ತರ ಸರಿ ಹೇಳುತ್ತೀರಿ? ನಿಮಗೆ ನೀವೆ ಪರೀಕ್ಷಿಸಿಕೊಳ್ಳಿ..

ನಿಮ್ಮ ಕನ್ನಡ ಅಡ್ವೈಜರ್ ದಿನನಿತ್ಯ 10 ಪ್ರಶ್ನೆಗಳನ್ನು ಬಹು ಆಯ್ಕೆ ಉತ್ತರಗಳನ್ನು ನೀಡದೆ ಮೊದಲು ಕೇವಲ ಪ್ರಶ್ನೆಗಳನ್ನು ನೀಡಿ, ನಂತರ ಪುಟದ ಕೆಳಭಾಗದಲ್ಲಿ ಉತ್ತರಗಳನ್ನು ನೀಡಲಿದೆ. ಉತ್ತರಗಳನ್ನು ನೋಡುವ ಮೊದಲು ನಿಮ್ಮ ಜ್ಞಾನದ ಮಟ್ಟವನ್ನು ನೀವೆ ಮೊದಲು ಪರೀಕ್ಷಿಸಿಕೊಳ್ಳಿ. ನಂತರ ಉತ್ತರಗಳನ್ನು ನೋಡಿಕೊಳ್ಳಿರಿ..

1. ಇಂಡೋನೆಷ್ಯಾಗೆ ಭೇಟಿ ನೀಡಿದ ಮೊಟ್ಟ ಮೊದಲ ಕೋಸ್ಟ್ ಗಾರ್ಡ್ ಹಡಗು ಯಾವುದು?

2. ಬಾಹ್ಯಾಕಾಶ ತಂತ್ರಜ್ಞಾನ ಘಟಕಕ್ಕಾಗಿ ಇಸ್ರೊದೊಂದಿಗೆ ಯಾವ ಐಐಟಿ ಕೈಜೋಡಿಸಿದೆ?

3. ‘ನಮಸ್ತೆ ಥೈಲ್ಯಾಂಡ್ ಉತ್ಸವ-2019’ ಮೂರನೇ ಆವೃತ್ತಿ ಭಾರತದ ಯಾವ ನಗರದಲ್ಲಿ ನಡೆಯಿತು?

4. ಲೇಡೀಸ್ ಯೋರೋಪಿಯನ್ ಟೂರ್ ಗೆದ್ದ ಅತೀ ಕಿರಿಯ ಭಾರತೀಯ ಮಹಿಳೆ ಯಾರು?

5. ಗೋವಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಮೋದ್ ಸಾವಂತ್ ರವರು ಗೋವಾದ ಯಾವ ವಿಧಾನಸಭಾ ಕ್ಷೇತ್ರದವರು?

6. ‘The Great Disappointment: How Narendra Modi Squandered a Unique Opportunity to Transform the Indian Economy’ ಪುಸ್ತಕದ ಲೇಖಕರು ಯಾರು?

7. ಇಂಡಿಯನ್ ಸೂಪರ್ ಲೀಗ್ ಗೆದ್ದ ಟೀಮ್ ಯಾವುದು?

8. 2019 ವಿಧಾಮ್ ಕ್ಯಾಂಪ್ಬೆಲ್ ಪ್ರಶಸ್ತಿ ಗೆದ್ದ ಭಾರತೀಯ ಲೇಖಕ ಯಾರು?

9. ‘Sary Arka Antiterror 2019’ ಜಂಟಿ ಮಿಲಿಟರಿ ಕಾರ್ಯಾಚರಣೆ ಎಲ್ಲಿ ನಡೆಯಲಿದೆ?

10. ಯಾವ ರಾಜ್ಯ ಚುನಾವಣಾ ಇಲಾಖೆಯು ಡಿಜಿಟಲ್ ಚುನಾವಣಾ ಸಾಕ್ಷರತೆ ಉತ್ತೇಜನಕ್ಕಾಗಿ ‘i-help’ ಕಾರ್ಯಾಚರಣೆ ಆರಂಭಿಸಿದೆ?

ಈ ಮೇಲಿನ ಪ್ರಶ್ನೆಗಳಿಗೆ ಉತ್ತರಗಳು ಈ ಕೆಳಗಿನಂತಿವೆ

1. ಐಎನ್‌ಎಸ್ ವಿಜಿತ್

2.ಐಐಟಿ ರೂರ್ಕೀ

3. ನವದೆಹಲಿ

4. ದಿಕ್ಷಾ ದಗರ್

5. ಸಂಖೇಲಿಮ್

6. ಸಲ್ಮಾನ್ ಅನೇಸ್ ಸೋಜ್

7. ಬೆಂಗಳೂರು ಎಫ್‌ಸಿ

8. ರಘು ಕಾರ್ನಾಡ್

9. ಕಜಖಸ್ತಾನ್

10. ಅಸ್ಸಾಂ

Kannadaadvisor publishes relevant fact based on Current Affairs almost daily basis. This information helps you to keep a watch on current happenings and may be useful for General Awarness part of KAS, IAS, IBPS Banking, ssc-cgl, bank clerical and other similar examination. Here are the today current affairs quizzes.

You may also like