Home » ಮಂಡೆ ಬಿಸಿ ಮಾಡುವ ಮಂಡಿ ನೋವಿಗೆ ಮನೆಯಲ್ಲೇ ಮಾಡಿ ಹಲವು ಚಿಕಿತ್ಸೆ

ಮಂಡೆ ಬಿಸಿ ಮಾಡುವ ಮಂಡಿ ನೋವಿಗೆ ಮನೆಯಲ್ಲೇ ಮಾಡಿ ಹಲವು ಚಿಕಿತ್ಸೆ

by manager manager

ಇಂದು ನಾವು ಸೇವಿಸುವ ಆಹಾರದಲ್ಲಿಯ ಪೌಷ್ಟಿಕತೆ ಕೊರತೆಯ ಕಾರಣವೋ ನಮ್ಮ ಜೀವನ ಶೈಲಿಯಿಂದಲೋ ಗೊತ್ತಿಲ್ಲ. ಆದರೆ ವಯಸ್ಸಿನ ಬೇಧವಿಲ್ಲದೇ ಎಲ್ಲಾ ವಯೋಮಾನದವರಿಗೂ ಇಂದು ಮಂಡಿನೋವು(ಸಂಧಿಶೂಲೆ) ಸಮಸ್ಯೆ ಕಾಡುತ್ತಿದೆ. ಇನ್ನ ಹಿರಿಯರಲ್ಲಿ ಮತ್ತು ವಾತ ಪ್ರಕೃತಿ ಇದ್ದವರಲ್ಲಿ ಹೆಚ್ಚಾಗಿ ಈ ಸಮಸ್ಯೆ ಕಂಡುಬರುತ್ತಿದೆ.

ಮಂಡಿ ನೋವು ಸಮಸ್ಯೆಗೆ ಇಂಗ್ಲಿಷ್ ಮೆಡಿಷನ್ ನೀಡಿದರೂ ಸಂಪೂರ್ಣವಾಗಿ ಪರಿಹಾರ ಆಗುತ್ತದೇ ಎಂದೇನಿಲ್ಲ. ಆದ್ದರಿಂದ ಹಲವರು ಸ್ವಾಭಾವಿಕವಾಗಿ, ಆಯುರ್ವೇದಿಕ್ ಮೆಡಿಷನ್‌ಗಳು ಅಥವಾ ಮನೆಯಲ್ಲೇ ಮಾಡಬಹುದಾದ ಪರಿಹಾರಗಳ ಕಡೆ ಒಲವು ತೋರುತ್ತಿದ್ದಾರೆ.

ಮಂಡಿನೋವು ಸಮಸ್ಯೆಗೆ ಪರಿಹಾರ ಹುಡುಕುವ ಮುನ್ನ ಯಾರೇ ಆದರೂ ಮಂಡಿ ನೋವಿಗೆ ಅಥವಾ ಸಂಧಿ ವಾತಕ್ಕೆ ಮುಖ್ಯ ಕಾರಣ ಏನು ಎಂದು ತಿಳಿಯುವುದು ಸೂಕ್ತ.

ಮಂಡಿ ನೋವು ಅಥವಾ ಸಂಧಿ ವಾತಕ್ಕೆ ಕಾರಣವೇನು?

– ಮುಖ್ಯವಾಗಿ ಮಲಬದ್ಧತೆ ಸಮಸ್ಯೆ ಕಾರಣ

– ಅತಿಯಾದ ರಕ್ತದೊತ್ತಡದಿಂದ ಮಂಡಿನೋವು ಬರಬಹುದು.

– ಸಕ್ಕರೆ ಕಾಯಿಲೆ ಸಮಸ್ಯೆ

– ಮೂಳೆಗಳಲ್ಲಿ ಕ್ಯಾಲ್ಸಿಯಂ ಕಡಿಮೆ ಇರುವುದು

– ಅತಿಯಾದ ದೇಹದತೂಕ

– ಮೂಳೆಗಳ ಜಾಯಿಂಟ್‌ಗಳಲ್ಲಿ ಮಾಂಸ ಖಂಡಗಳಲ್ಲಿ ಬಾವು ಬರುವುದರಿಂದ

– ಮಾಂಸ ಖಂಡಗಳು ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುವುದರಿಂದ,

– ಥೈರಾಯಿಡ್ ಗ್ರಂಥಿಯ ಕಾರ್ಯಗಳ ಏರಿಳಿತದಿಂದ

– ಇನ್ನೂ ಕೆಲವೊಮ್ಮೆ ಬಾಹ್ಯ ಕಾರಣಗಳಾದ ಬೀಳುವುದರಿಂದ, ಅಥಾತವಾಗುವದರಿಂದ ಮತ್ತು ಇತ್ಯಾದಿ ಹಲವು ಕಾರಣಗಳು

ಮಂಡಿ ನೋವಿಗೆ ಮನೆಯಲ್ಲೇ ಪರಿಹಾರ ಇದೆಯೇ?

ಖಂಡಿತ ಇದೆ. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೇ ದೊರೆಯುವ ಹಾಗೂ ಸುತ್ತ ಮುತ್ತಲ ಪರಿಸರದಲ್ಲಿ ಸಿಗುವ ಔಷಧಯುಕ್ತ ಗಿಡಮೂಲಿಕೆಗಳಿಂದ ಮಂಡಿ ನೋವಿಗೆ ಚಿಕಿತ್ಸೆ ನೀಡಬಹುದು.

ಮಂಡಿ ನೋವಿಗೆ ಶುಂಠಿ ಲೇಪ ಪರಿಹಾರ

300 ಗ್ರಾಂ ಒಣ ಶುಂಠಿಯನ್ನು ಚೆನ್ನಾಗಿ ಜಜ್ಜಿ ಪುಡಿ ಮಾಡಿ. ನಂತರ ಅದಕ್ಕೆ ಬಿಸಿ ನೀರು ಅಥವಾ ಆಕಳ ತುಪ್ಪ ಅಥವಾ ಮಹಾನಾರಾಯಣ ತೈಲ ಮಿಶ್ರಣ ಮಾಡಿ ಅದನ್ನು ಮೆದುವಾಗಿಸಿ ನಂತರ ಮೊಣಕಾಲು ಸಂಧಿಗೆ ಚೆನ್ನಾಗಿ ದಪ್ಪವಾಗಿ ಹಚ್ಚಿ. ಶುಂಠಿ ಲೇಪ ಬಿಸಿಯಾಗಿರಬೇಕು.

ಲೇಪನವಾದ ಶುಂಠಿ ಲೇಪ 30 ನಿಮಿಷಗಳ ಕಾಲ ಹಾಗೆ ಇರಬೇಕು. ನಂತರ ಅದನ್ನು ತೊಳೆಯಬಹುದು.

ಶುಂಠಿ ಲೇಪನವನ್ನು ಹೀಗೆ 15-20 ದಿನಗಳ ವರೆಗೆ ಮಾಡಬೇಕು.

ಮಂಡಿ ನೋವಿಗೆ ರಾಸ್ನಾದಿ ಲೇಪ ಪರಿಹಾರ

300 ಗ್ರಾಂ ರಸ್ನಾ ಬಳ್ಳಿಯ ಬೇರನ್ನು ಚೆನ್ನಾಗಿ ಜಜ್ಜಿ ಪುಡಿ ಮಾಡಿ. ನಂತರ ಅದಕ್ಕೆ ಬಿಸಿ ನೀರು ಅಥವಾ ಆಕಳ ತುಪ್ಪ ಅಥವಾ ಮಹಾನಾರಾಯಣ ತೈಲ ಮಿಶ್ರಣ ಮಾಡಿ ಅದನ್ನು ಮೆದುವಾಗಿಸಿ ನಂತರ ಮೊಣಕಾಲು ಸಂಧಿಗೆ ಚೆನ್ನಾಗಿ ದಪ್ಪವಾಗಿ ಹಚ್ಚಿ. ಇದು ಬಿಸಿಯಾಗಿರಬೇಕು. 30 ನಿಮಿಷಗಳ ಕಾಲ ಹಾಗೆ ಇರಬೇಕು. ನಂತರ ಅದನ್ನು ತೊಳೆಯಬಹುದು. ಹೀಗೆ 15-20 ದಿನಗಳ ವರೆಗೆ ಮಾಡಬೇಕು.

ಅಗಸಿ ಲೇಪನ

350 ಗ್ರಾಂ ಅಗಸಿಯನ್ನು ಪೌಡರ್ ಮಾಡಿ, ಎಳ್ಳೆಣ್ಣೆಯ ಜೊತೆಗೆ ಮಿಶ್ರಣ ಮಾಡಿ. ನಂತರ ಇದನ್ನು ಬಿಸಿ ಮಾಡಿ. ಬಟ್ಟೆಯಲ್ಲಿ ಹಾಕಿ ನಂತರ ಸಂದಿಗೆ ಕಟ್ಟಬೇಕು. ಇದನ್ನು 30 ನಿಮಿಷಗಳವರೆಗೂ ಹಾಗೇ ಬಿಡಬೇಕು. ಈ ರೀತಿ ಇದನ್ನು 15-20 ದಿನಗಳವರೆಗು ಮಾಡಬೇಕು.

ಎಕ್ಕೆ ಎಲೆ ಚಿಕಿತ್ಸೆ

ಒಂದು ಎಕ್ಕೆ ಎಲೆಗೆ ಎಳ್ಳೆಣ್ಣೆ ಹಾಕಿ ಬಿಸಿ ಮಾಡಿ. ನಂತರ ಅದರಲ್ಲಿ 30 ಗ್ರಾಂ ಸೈಂದ್ರವ ಲವಣ ಪೌಡರ್ ಹಾಕಿ. ನಂತರ ಅದರ ಮೇಲೆ ಮತ್ತೊಂದು ಬಿಸಿಯಾದ ಎಲೆಯನ್ನು ಹಾಕಿ ಬಟ್ಟೆಯಲ್ಲಿ ಹಾಕಿ ಅದನ್ನು ಮಂಡಿ ಸಂಧಿಗೆ ಬಂಧನ ಮಾಡಬೇಕು. 20 ನಿಮಿಷಗಳವರೆಗೂ ಹಾಗೇ ಬಿಡಬೇಕು. ಈ ರೀತಿ ಇದನ್ನು 15-20 ದಿನಗಳವರೆಗೆ ಮಾಡಬೇಕು.

ಸೂಚನೆ: ಎಕ್ಕೆ ಎಲೆ ಅತಿಕ್ಷಾರ(ಉರಿಯುಂಟು ಮಾಡುವ ಗುಣ) ಉಂಟು ಮಾಡುವುದರಿಂದ ಅತಿ ಸೂಕ್ಷ್ಮವಾಗಿ ಉಪಯೋಗಿಸಬೇಕು. ಇದನ್ನು Skin Allergy ಹಾಗು ಸೂಕ್ಷ್ಮಚರ್ಮ ಇರುವವರು ಉಪಯೋಗಿಸಬಹುದು.

ಬೆಳ್ಳುಳ್ಳಿಯಿಂದ ಮಂಡಿ ನೋವಿಗೆ ಚಿಕಿತ್ಸೆ

200 ಗ್ರಾಂ ಬೆಳ್ಳುಳ್ಳಿಯನ್ನು ಜಜ್ಜಿ ಪೇಸ್ಟ್ ಮಾಡಿ ಎಳ್ಳೆಣ್ಣೆಯಲ್ಲಿ ಮಿಶ್ರಣ ಮಾಡಿ ಬಿಸಿ ಮಾಡಿ ಲೇಪನ ಮಾಡಬೇಕು. ಅದನ್ನೇ ಬಟ್ಟೆಯಲ್ಲಿ ಕಟ್ಟಿ ನೋವು ಇದ್ದಲ್ಲಿ ಕಾವು ಕೊಡಬೇಕು. ಈ ರೀತಿ ಇದನ್ನು 15-20 ದಿನಗಳವರೆಗೆ ಮಾಡಬೇಕು. ಬೆಳ್ಳುಳ್ಳಿ ಆಂಡಿಬೆಟಿಕ್‌ ಗುಣವನ್ನು ಹೊಂದಿದೆ.

ಮೇಲಿನ ವಿಧಾನಗಳಲ್ಲಿಯೇ ಈರುಳ್ಳಿ ಸಿಪ್ಪೆ ಜೊತೆಗೆ ಎಳ್ಳೆಣ್ಣೆಯ ಮಿಶ್ರಣ, ಇಟ್ಟೆಗೆಪುಡಿ ಜೊತೆಗೆ ಉಪ್ಪು, ಹರಿದ್ರಾ ಪೌಡರನ್ನು ಬಿಸಿ ಎಳ್ಳೆಣ್ಣೆಯಲ್ಲಿ ಮಿಶ್ರಣ ಮಾಡಿ, ಹುಣಸೆ ಎಲೆಯನ್ನು ಪೇಸ್ಟ್ ಮಾಡಿ ಬಿಸಿ ಮಾಡಿ ಬಟ್ಟೆಯಲ್ಲಿ ಕಟ್ಟಿ ಮಂಡಿ ನೋವಿಗೆ ಶಾಖ ಕೊಡುವ ಮತ್ತು ಲೇಪನ ಮಾಡುವ, ಸಂದಿಗೆ ಕಟ್ಟುವ ಮೂಲಕ ನೋವಿನ ಪರಿಹಾರ ಮಾಡಿಕೊಳ್ಳಬಹುದು.

ಮಂಡಿ ನೋವು, ಕೀಲು ನೋವಿಗೆ ಮನೆಯಲ್ಲೇ ಮಾಡಿ ಈ ಸರಳ ಪರಿಹಾರಗಳು

You may also like