Home » KPTCL ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ 3646 ಹುದ್ದೆಗಳ ನೇಮಕ: ಅರ್ಜಿಗೆ ಏ.14 ಕೊನೆ ದಿನ

KPTCL ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ 3646 ಹುದ್ದೆಗಳ ನೇಮಕ: ಅರ್ಜಿಗೆ ಏ.14 ಕೊನೆ ದಿನ

by manager manager

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿನ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಬೆಸ್ಕಾಂ, ಸೆಸ್ಕಾಂ, ಹೆಸ್ಕಾಮ್, ಮೆಸ್ಕಾಂ, ಜೆಸ್ಕಾಮ್‌ನಲ್ಲಿ ಖಾಲಿ ಇರುವ ಒಟ್ಟು 3646 ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಈ ಕೆಳಗಿನಂತಿದೆ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 16/03/2019

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18/04/2019

ಅಂಚೆ ಕಛೇರಿಯಲ್ಲಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 22/04/2019

ಈಗಾಗಲೇ ವಿವಿಧ ಹುದ್ದೆಗಳಿಗೆ ಅರ್ಜಿಸಲ್ಲಿಸಿರುವವರಿಗೆ KPTCL ನೀಡಿರುವ ಹೊಸ ಸೂಚನೆ ತಿಳಿಯಲು – ಕ್ಲಿಕ್ ಮಾಡಿರಿ

ಆನ್‌ಲೈನ್ ಅರ್ಜಿ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ KPTCL ಹೊರಡಿಸಿರುವ ಮರುಪ್ರಕಟಣೆ ಬಗ್ಗೆ ತಿಳಿಯಲು – ಕ್ಲಿಕ್ ಮಾಡಿ

ಈ ಕೆಳಗೆ ನೀಡಲಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು – ಕ್ಲಿಕ್ ಮಾಡಿ

For kptcl recruitment 2019-20 notification – click here

ಹುದ್ದೆಗಳ ವಿವರ

ಸಹಾಯಕ ಕಾರ್ಯನಿರ್ವಾಹಕ ಎಂಜಿನೀಯರ್(ವಿದ್ಯುತ್) – 94

ಸಹಾಯಕ ಎಂಜಿನೀಯರ್(ವಿದ್ಯುತ್) – 505

ಸಹಾಯಕ ಎಂಜಿನೀಯರ್(ಸಿವಿಲ್) -28

ಕಿರಿಯ ಎಂಜಿನೀಯರ್(ವಿದ್ಯುತ) – 570

ಕಿರಿಯ ಎಂಜಿನೀಯರ್(ಸಿವಿಲ್) – 28

ಕಿರಿಯ ಆಪ್ತ ಸಹಾಯಕ – 63

ಕಿರಿಯ ಸಹಾಯಕ – 360

ಚಾಲಕ ದರ್ಜೆ -II – 126

ಕಿರಿಯ ಸ್ಟೇಷನ್ ಪರಿಚಾರಕ – 103

ಕಿರಿಯ ಪವರ್ ಮ್ಯಾನ್(ಕಿರಿಯ ಮಾರ್ಗದಳು) – 1769

ಆಯ್ಕೆ ವಿಧಾನ

ಈ ಮೇಲಿನ ವಿವಿಧ ಹುದ್ದೆಗಳಿಗೆ ಹುದ್ದೆಗಳಿಗನುಗುಣವಾಗಿ ಸಹನ ಶಕ್ತಿ ಪರೀಕ್ಷೆ , ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ವಿದ್ಯಾರ್ಹತೆ

– ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ : SSLC ಉತ್ತೀರ್ಣ

– AEE(Electrical), AE(Electrical/Civil), JE(Electrical/Civil), Junior Assistant, Junior Personal Assistant ಹುದ್ದೆಗಳ ವಿದ್ಯಾರ್ಹತೆಯ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ

– ಚಾಲಕ ಹುದ್ದೆಗಳಿಗೆ : SSLC ಉತ್ತೀರ್ಣ

ಅರ್ಜಿ ಶುಲ್ಕ ವಿವರ

ಕಿರಿಯ ಸ್ಟೇಷನ್ ಪರಿಚಾರಕ/ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ

-ಸಾಮಾನ್ಯ ಅರ್ಹತೆ ಮತ್ತು ಪ್ರವರ್ಗ 2ಎ 2ಬಿ 3ಎ 3ಬಿ ಮತ್ತು ಪ್ರವರ್ಗ-1(CAT-1)ಗೆ ಸೇರಿದ ಅಭ್ಯರ್ಥಿಗಳಿಗೆ 200/- ರೂ

-ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 100/- ರೂ

AEE(Electrical), AE(Electrical/Civil), JE(Electrical/Civil), Junior Assistant, Junior Personal Assistant ಹುದ್ದೆಗಳಿಗೆ

– ಸಾಮಾನ್ಯ ಅರ್ಹತೆ ಮತ್ತು ಪ್ರವರ್ಗ 2ಎ 2ಬಿ 3ಎ 3ಬಿ ಮತ್ತು ಪ್ರವರ್ಗ-1(CAT-1)ಗೆ ಸೇರಿದ ಅಭ್ಯರ್ಥಿಗಳಿಗೆ 500/- ರೂ

– ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 300/- ರೂ

ಚಾಲಕ ಹುದ್ದೆಗಳಿಗೆ

– ಸಾಮಾನ್ಯ ಅರ್ಹತೆ ಮತ್ತು ಪ್ರವರ್ಗ 2ಎ 2ಬಿ 3ಎ 3ಬಿ ಮತ್ತು ಪ್ರವರ್ಗ-1(CAT-1)ಗೆ ಸೇರಿದ ಅಭ್ಯರ್ಥಿಗಳಿಗೆ 400/- ರೂ

– ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 250/- ರೂ

ವಯೋಮಿತಿ

ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರತಕ್ಕದ್ದು ಮತ್ತು ಈ ಕೆಳಕಂಡ ಗರಿಷ್ಠ ವಯೋಮಿತಿ ಮೀರಿರಬಾರದು

-ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು 35 ವರ್ಷ

– ಪ್ರವರ್ಗ 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳು 38 ವರ್ಷ

– ಪ್ರವರ್ಗ-1, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 40 ವರ್ಷ

ವೇತನ ಶ್ರೇಣಿ ಈ ಕೆಳಗಿನಂತಿದೆ

– ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್ ) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 46,080/-ರಿಂದ 98,030/-ರೂ

– ಸಹಾಯಕ ಇಂಜಿನಿಯರ್ (ವಿದ್ಯುತ್) ಮತ್ತು ಸಹಾಯಕ ಇಂಜಿನಿಯರ್ (ಸಿವಿಲ್) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 41,130/- ರಿಂದ 72,920/-ರೂ

– ಕಿರಿಯ ಇಂಜಿನಿಯರ್ (ವಿದ್ಯುತ್ ) ಮತ್ತು ಕಿರಿಯ ಇಂಜಿನಿಯರ್ (ಸಿವಿಲ್) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 36,270/- ರಿಂದ 65,020/-ರೂ

– ಕಿರಿಯ ಆಪ್ತ ಸಹಾಯಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 22,920/-ರಿಂದ 56,320/-ರೂ

– ಕಿರಿಯ ಸಹಾಯಕ ಮತ್ತು ಚಾಲಕ ದರ್ಜೆ-11 ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 20,220/-ರಿಂದ 51,640/-ರೂ

– ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 16,370/- ರಿಂದ 35,180/-ರೂ

You may also like