Home » ಕರ್ನಾಟಕ ಎಣ್ಣೆಬೀಜ ಬೆಳೆಗಾರರ ಮಂಡಳಿಯಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಎಣ್ಣೆಬೀಜ ಬೆಳೆಗಾರರ ಮಂಡಳಿಯಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

by manager manager

Karnataka Oilseed Growers Board invited application for various post

Karnataka Oilseed Growers Board has invited application for various post recruitment

ಕರ್ನಾಟಕ ಎಣ್ಣೆಬೀಜ ಬೆಳೆಗಾರರ ಮಹಾಮಂಡಳಿ ನೇಮಕಾತಿಯ ಕೇಂದ್ರ ಕಛೇರಿ ಹಾಗೂ ಇದರ ಘಟಕಗಳಿಗೆ ಮತ್ತು ಚಿತ್ರದುರ್ಗ ಒಕ್ಕೂಟದಲ್ಲಿ ಖಾಲಿ ಇರುವ ವಿವಿಧ ಹುದ್ದಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

1 ಹುದ್ದೆಯ ಹೆಸರು: ಅಸಿಸ್ಟಂಟ್ ಎಕ್ಸಿಕ್ಯೂಟಿವ್ (ಅಕೌಂಟ್ಸ್)

ವೇತನ ಶ್ರೇಣಿ: 21400-42000

ಹುದ್ದೆಗಳ ಸಂಖ್ಯೆ : 04

ವಿದ್ಯಾರ್ಹತೆ ಮತ್ತು ಅನುಭವ : ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪಡೆದ ಬಿ.ಕಾಂ ಪದವಿ, ಟ್ಯಾಲಿ ಅಥವಾ ಇತರೆ ಯಾವುದೇ ಅಕೌಂಟಿಂಗ್ ಪ್ಯಾಕೇಜ್ ಜ್ಞಾನ ಅವಶ್ಯಕ. ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದ ಎಂ.ಕಾಂ ಮತ್ತು ಎಂ.ಬಿ.ಎ ಸ್ನಾತಕೋತ್ತರ ಪದವೀಧರರು ಸಹ ಅರ್ಜಿ ಸಲ್ಲಿಸಬಹುದು. ಕನಿಷ್ಟ 2 ವರ್ಷಗಳ ಕೆಲಸದ ಅನುಭವ ಇರಬೇಕು

2 ಹುದ್ದೆಯ ಹೆಸರು: ಅಸಿಸ್ಟಂಟ್ ಎಕ್ಸಿಕ್ಯೂಟಿವ್ (ಕಂಪ್ಯೂಟರ್)

ವೇತನ ಶ್ರೇಣಿ: 21400-42000

ಹುದ್ದೆಗಳ ಸಂಖ್ಯೆ : 01

ವಿದ್ಯಾರ್ಹತೆ ಮತ್ತು ಅನುಭವ : ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಅಥವಾ ಡಿಪ್ಲೊಮೋ. ಕನಿಷ್ಠ ಎರಡು ವರ್ಷಗಳ ಕೆಲಸದ ಅನುಭವ ಇರಬೇಕು

3 ಹುದ್ದೆಯ ಹೆಸರು: ಅಸಿಸ್ಟಂಟ್ ಎಕ್ಸಿಕ್ಯೂಟಿವ್ (ಟೆಕ್- ಗುಣನಿಯಂತ್ರಣ)

ವೇತನ ಶ್ರೇಣಿ: 21400-42000

ಹುದ್ದೆಗಳ ಸಂಖ್ಯೆ : 02

ವಿದ್ಯಾರ್ಹತೆ ಮತ್ತು ಅನುಭವ : ಅಂಗೀಕೃತ ವಿಶ್ವವಿದ್ಯಾಲಯದಿಂದ ಕೆಮಿಸ್ಟ್ರಿಯಲ್ಲಿ ಬಿ.ಎಸ್ಸಿ ಪಡೆದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ, ಕನಿಷ್ಟ ಎರಡು ವರ್ಷಗಳ ಕೆಲಸದ ಅನುಭವ ಇರಬೇಕು.

ವಯೋಮಿತಿ: ಅರ್ಜಿ ಸಲ್ಲಿಸಲು SC/ST ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷ. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ.

ಆಯ್ಕೆ ವಿಧಾನ ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ವಿದ್ಯಾ್ಹತೆ, ಕೆಲಸದ ಅನುಭವ, ಲಿಖಿತ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಿ, ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಸೂಚನೆ: ನಿಗಮವು ಅಸಿಸ್ಟಂಟ್ ಎಕ್ಸಿಕ್ಯೂಟಿವ್(ಟೆಕ್ ಗುಣನಿಯಂತ್ರಣ) ಹುದ್ದೆಗೆ ಚಿತ್ರದುರ್ಗ ಸಂಸ್ಥೆಯ ಪರವಾಗಿ ಒಂದು ಹುದ್ದೆ ಕರೆಯಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

– ಕನ್ನಡ ಭಾಷಾಜ್ಞಾನ ಹಾಗೂ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿರುತ್ತದೆ. ವಿದ್ಯಾರ್ಹತೆ, ಅನುಭವ, ವಯಸ್ಸು ಹಾಗೂ ಮೀಸಲಾತಿಗೆ ಸಂಬಂಧಿಸಿದಂತೆ ಪ್ರತಿಗಳನ್ನು ಲಗತ್ತಿಸತಕ್ಕದು.

– ಕೆ.ಓ.ಎಫ್ ವೆಬ್‌ಸೈಟ್ www.kof.co.in ನಿಂದ ಅರ್ಜಿಯ ನಮೂನೆಯನ್ನು ಡೌನ್‌ ಲೋಡ್ ಮಾಡಿಕೊಳ್ಳಬೇಕು

– ಅಪೂರ್ಣ/ ಶುಲ್ಕವಿಲ್ಲದ ಅರ್ಜಿಗಳನ್ನು ತಿರಸ್ಕರಿಸಲಾಗುವುದು

– ಆಯ್ಕೆಯಾದ ಅಭ್ಯರ್ಥಿಗಳನ್ನು ಕರ್ನಾಟಕ ರಾಜ್ಯ ಅಥವಾ ರಾಜ್ಯದ ಹೊರಗು ನೇಮಕಾತಿ ಮತ್ತು ವರ್ಗಾವಣೆ ಮಾಡಲು ಅವಕಾಶವಿರುತ್ತದೆ.

– ಸೇವೆಯಲ್ಲಿರತಕ್ಕೆ ಅಭ್ಯರ್ಥಿಗಳು, ಸಂಬಂಧಪಟ್ಟ ಇಲಾಖೆಯ ಮೂಲಕ ಅರ್ಜಿಗಳನ್ನು ಸಲ್ಲಿಸತಕ್ಕದ್ದು.

– ಎಲ್ಲಾ ದಾಖಲೆಗಳನ್ನು ಒಳಗೊಂಡ ಅರ್ಜಿಯನ್ನು ವ್ಯವಸ್ಥಾಪಕ ನಿರ್ದೇಶಕರು, ಕೆ.ಸಿ.ಓ.ಜಿ.ಎಫ್.ಲಿ ನಂ.11. 4ನೇ ಮಹಡಿ, ಬ್ಯ್ಲೂ ಕ್ರಾಸ್ ಛೇಂಬರ್ಸ್, ಇನ್‌ಫೆಂಟ್ರಿ ಅಡ್ಡರಸ್ತೆ, ಬೆಂಗಳೂರು – 01 ಈ ವಿಳಾಸಕ್ಕೆ ನೇಮಕಾತಿ ಪ್ರಕಟಿತ ದಿನಾಂಕದಿಂದ 30 ದಿನಳೊಳಗೆ ತಲುಪುವಂತಿರಬೇಕು.

– ಲಕೋಟೆಯ ಮೇಲೆ ಯಾವ ಹುದ್ದೆಗೆ ಅರ್ಜಿ ಸಲ್ಲಿಸಲಾಗುತ್ತಿದೆ ಎಂದು ನಮೂದಿಸಬೇಕು.

– ಅಭ್ಯರ್ಥಿಗಳ ಅರ್ಹತೆ/ಆಯ್ಕೆ ಬಗ್ಗೆ ನೇಮಕಾತಿ ಪ್ರಾಧಿಕಾರದ ನಿರ್ಣಯವೇ ಅಂತಿಮವಾದದ್ದು.

ಅರ್ಜಿ ಶುಲ್ಕ : SC/ST ಅಭ್ಯರ್ಥಿಗಳಿಗೆ 100 ರೂ, ಹಿಂದುಳಿದ ವರ್ಗಗಳಿಗೆ 150 ರೂ, ಸಾಮಾನ್ಯ ವರ್ಗಗಳಿಗೆ 200 ರೂ. ಅರ್ಜಿ ಶುಲ್ಕವನ್ನು ವ್ಯವಸ್ಥಾಪಕ ನಿರ್ದೇಶಕರು, ಕೆ.ಸಿ.ಓ.ಜಿ.ಎಫ್.ಲಿ.. ಬೆಂಗಳೂರು ಇವರ ಹೆಸರಿಗೆ ಬೆಂಗಳೂರಿನಲ್ಲಿ ಪಾವತಿಯಾಗುವಂತೆ ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕಿನ ಡಿ.ಡಿ.ಯ ಮೂಲಕ ಸಲ್ಲಿಸುವುದು.

Karnataka Oilseed Growers Board invited application for various post. Read more about this in above post

You may also like