Home » ಕರ್ನಾಟಕ ಅಂಚೆ ಇಲಾಖೆಯಲ್ಲಿ 2637 ಹುದ್ದೆಗಳು: ಕನ್ನಡದಲ್ಲಿ ಓದಿದವರಿಂದ ಮಾತ್ರ ಅರ್ಜಿ ಆಹ್ವಾನ

ಕರ್ನಾಟಕ ಅಂಚೆ ಇಲಾಖೆಯಲ್ಲಿ 2637 ಹುದ್ದೆಗಳು: ಕನ್ನಡದಲ್ಲಿ ಓದಿದವರಿಂದ ಮಾತ್ರ ಅರ್ಜಿ ಆಹ್ವಾನ

by manager manager

ಕರ್ನಾಟಕ ವೃತ್ತ ಅಂಚೆ ಇಲಾಖೆಯಿಂದ, ಪ್ರಾದೇಶಿಕವಾಗಿ ಖಾಲಿ ಇರುವ ಬೃಹತ್‌ ಪ್ರಮಾಣದ 2637 ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್‌ ಈ ಕೆಳಗಿನಂತಿದೆ ಓದಿರಿ.

ಈ ನೇಮಕಾತಿ ಪ್ರಕಟಣೆ ಬಗ್ಗೆ ಸಂತೋಷದ ಸಂಗತಿ ಏನೆಂದರೆ, ಕರ್ನಾಟಕದಲ್ಲಿ ಅದರಲ್ಲೂ 1ನೇ ತರಗತಿಯಿಂದ 10 ನೇ ತರಗತಿ ವರೆಗೂ ಕನ್ನಡ ಭಾಷೆಯಲ್ಲಿ ಓದಿದವರಿಗೆ ಮಾತ್ರ ಈ ಉದ್ಯೋಗಕ್ಕೆ ಅರ್ಜಿ ಹಾಕುವ ಅರ್ಹತೆ ನಿಗದಿಪಡಿಸಲಾಗಿದೆ.

ಒಟ್ಟು ಹುದ್ದೆಗಳ ಸಂಖ್ಯೆ: 2637

ಹುದ್ದೆಗಳ ಹೆಸರುಗಳು

1. ಶಾಖಾ ಪೋಸ್ಟ್‌ಮಾಸ್ಟರ್

2. ಸಹಾಯಕ ಶಾಖಾ ಪೋಸ್ಟ್‌ ಮಾಸ್ಟರ್

3. ಡಾಕ್‌ ಸೇವಕ

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 05-08-2019

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04-09-2019

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 04-09-2019

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ ಮಾತ್ರ

ಅರ್ಜಿ ಶುಲ್ಕ

– ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು: ರೂ.100

– ಮಹಿಳಾ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ : ಶುಲ್ಕ ವಿನಾಯಿತಿ ನೀಡಲಾಗಿದೆ

ಅರ್ಜಿ ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್‌ ಮೂಲಕ ಅಥವಾ ಅಂಚೆ ಕಛೇರಿಯಲ್ಲಿ ಪಾವತಿಸಬಹುದು.

ಶೈಕ್ಷಣಿಕ ಅರ್ಹತೆ

– ಅಭ್ಯರ್ಥಿಗಳು ಗಣಿತ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ SSLC ವಿದ್ಯಾರ್ಹತೆಯನ್ನು ಪೂರೈಸಬೇಕು

– ಕಡ್ಡಾಯವಾಗಿ ಕನ್ನಡ ಭಾಷಾ ವಿಷಯದಲ್ಲಿ 1ನೇ ತರಗತಿಯಿಂದ 10 ನೇ ತರಗತಿವರೆಗೆ ಶಿಕ್ಷಣ ಪಡೆದಿರಬೇಕು.

– ಬೇಸಿಕ್ ಕಂಪ್ಯೂಟರ್ ಜ್ಞಾನ ಮತ್ತು ಸರ್ಟಿಫಿಕೇಟ್ ಹೊಂದಿರಬೇಕು.

ಅಭ್ಯರ್ಥಿಗಳ ಆಯ್ಕೆ ವಿಧಾನ

ಆನ್‌ಲೈನ್‌ ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ನಿಯಮಗಳ ಪ್ರಕಾರ ಸ್ವಯಂಚಾಲಿತ ಮೆರಿಟ್ ಪಟ್ಟಿ ತಯಾರು ಮಾಡುವ ಮೂಲಕ ಆಯ್ಕೆ ಮಾಡಲಾಗುತ್ತದೆ.

ವಯೋಮಿತಿ ಸಡಿಲಿಕೆ ಈ ಕೆಳಗಿನಂತಿದೆ.

ನೇಮಕಾತಿ ಅಧಿಸೂಚನೆ ಬಗ್ಗೆ ಇತರೆ ಹೆಚ್ಚಿನ ಮಾಹಿತಿ ತಿಳಿಯಲು ಪ್ರಕಟಣೆ ಪಿಡಿಎಫ್‌ಗಾಗಿ – ಕ್ಲಿಕ್ ಮಾಡಿ

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು : ಕ್ಲಿಕ್ ಮಾಡಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಫೋನ್‌: 080-22392554

ಇಮೇಲ್: gdsonlinecycle2.kar@gmail.com

ಯಾವ ಹುದ್ದೆಗೆ ಆರಂಭಿಕ ಸಂಬಳ ಎಷ್ಟು ಎಂಬುದು ಈ ಕೆಳಗಿನಂತಿದೆ ನೋಡಿ

You may also like