Home » ಒಂದೇ ಮೊಬೈಲ್‌ ನಂಬರ್ ನೀಡಿ ಹಲವು ಫೋನ್‌ಗಳಲ್ಲಿ ವಾಟ್ಸಪ್ ಬಳಕೆ

ಒಂದೇ ಮೊಬೈಲ್‌ ನಂಬರ್ ನೀಡಿ ಹಲವು ಫೋನ್‌ಗಳಲ್ಲಿ ವಾಟ್ಸಪ್ ಬಳಕೆ

by manager manager

ಒಂದು ಮೊಬೈಲ್ ನಂಬರ್ ನೀಡಿ ಒಂದೇ ಮೊಬೈಲ್‌ ನಲ್ಲಿ ಮಾತ್ರ ವಾಟ್ಸಪ್ ಬಳಕೆ ಮಾಡಲು ಸಾಧ್ಯ. ಅದೇ ನಂಬರ್ ನೀಡಿ ಮತ್ತೊಂದು ಮೊಬೈಲ್‌ ನಲ್ಲಿ ವಾಟ್ಸಪ್ ಬಳಕೆ ಮಾಡಲು ಪ್ರಯತ್ನಿಸಿದರೆ, ಮೊದಲು ಯಾವ ಡಿವೈಸ್‌ ನಲ್ಲಿ ವಾಟ್ಸಪ್‌ ಇನ್‌ಸ್ಟಾಲ್‌ ಮಾಡಲಾಗಿರುತ್ತದೋ ಅದರಲ್ಲಿ ಅನ್‌ಇನ್‌ಸ್ಟಾಲ್‌ ಆಗುತ್ತದೆ ಅಥವಾ ಬಳಕೆ ಮಾಡಲು ಆಗುವುದಿಲ್ಲ. ಆದರೆ ಎರಡೆರಡು ಸ್ಮಾಟ್‌ಫೋನ್‌ ಹೊಂದಿರುವವರು ವಾಟ್ಸಪ್‌ನ ಈ ಒಂದೇ ಒಂದು ಫೀಚರ್‌ ಅನ್ನು ಸಹಜವಾಗಿಯೇ ಬೇಸರ ಪಡುತ್ತಾರೆ.

ವಾಟ್ಸಪ್ ಸದ್ಯದಲ್ಲೇ ಹೊಸ ಫೀಚರ್ ಅನ್ನು ಅಭಿವೃದ್ಧಿ ಪಡಿಸುತ್ತಿದ್ದು, ಇದರಿಂದ ಒಂದೇ ಮೊಬೈಲ್‌ ನಂಬರ್‌ನಿಂದ ಎರಡು ಫೋನ್‌ಗಳಲ್ಲಿ ಏಕಕಾಲದಲ್ಲಿ ವಾಟ್ಸಪ್ ಬಳಸಲು ಸಹಾಯವಾಗಲಿದೆಯಂತೆ.

ವಾಟ್ಸಪ್‌ನ ಈ ಹೊಸ ಫೀಚರ್ ಕುರಿತು ವಾಬೀಟಾಇನ್ಫೋ(wabetainfo) ವರದಿ ಮಾಡಿದೆ. ಇದು ತಿಳಿಸಿರುವ ಪ್ರಕಾರ ವಾಟ್ಸಪ್ ಹೊಸದಾಗಿ ಯುನಿವರ್ಷಲ್ ವಿಂಡೋಸ್ ಪ್ಲಾಟ್‌ಫಾರ್ಮ್‌ (UWP) ಆಪ್‌ ಅನ್ನು ಅಭಿವೃದ್ಧಿಪಡಿಸುತ್ತಿದೆಯಂತೆ. ಇದರ ಸಹಾಯದಿಂದ ವಾಟ್ಸಪ್‌ ಅನ್ನು ಒಂದೇ ಮೊಬೈಲ್ ನಂಬರ್ ನಿಡಿ ಎರಡು ಫೋನ್‌ಗಳಲ್ಲಿ ಉಪಯೋಗಿಸಬಹುದಂತೆ.

ವಾಟ್ಸಪ್ ಶೀಘ್ರದಲ್ಲೇ ಡೆಸ್‌ಟಾಪ್‌ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದು ಫೋನ್‌ ಇಲ್ಲದೆಯೇ ಡೆಸ್‌ಟಾಪ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ ವಾಟ್ಸಪ್ ಬಳಸಬಹುದೆಂದು ವರದಿಯಾಗಿದೆ. ಪ್ರಸ್ತುತದಲ್ಲಿ ವಾಟ್ಸಪ್ ಅನ್ನು ಡೆಸ್‌ಟಾಪ್ ಅಥವಾ ಲ್ಯಾಪ್‌ಟಾಪ್‌ ನಲ್ಲಿ ಬಳಕೆ ಮಾಡಲು ಮೊಬೈಲ್‌ ಫೋನ್‌ನಲ್ಲಿನ ವಾಟ್ಸಪ್ ಆಪ್ ಓಪನ್ ಮಾಡಿ whatsapp web ಫೀಚರ್ ಮೇಲೆ ಕ್ಲಿಕ್ ಮಾಡಿ ಸ್ಕ್ಯಾನ್‌ ಮಾಡಬೇಕಿದೆ.