Home » ಮನೆಯಲ್ಲೇ ಮಾಡಿ ಸವಿಯಿರಿ ಸ್ಪೆಷಲ್ ಎಗ್ ರೋಲ್

ಮನೆಯಲ್ಲೇ ಮಾಡಿ ಸವಿಯಿರಿ ಸ್ಪೆಷಲ್ ಎಗ್ ರೋಲ್

by manager manager

ಇದೀಗ ಆರಂಭವಾಗಿರುವ ಮಳೆಗಾಲದ ಚುಮು ಚುಮು ಚಳಿಯಲ್ಲಿ ಏನಾದರು ತಿನ್ನಬೇಕೆಂದು ಹಂಬಲಿಸುತ್ತಿರುವವರು ಹಾಗೂ ಸಂಜೆಯ ಟೀ-ಕಾಫಿಗೆ, ಬರಿ ಬಿಸ್ಕೆಟ್, ಸ್ನ್ಯಾಕ್ಸ್ ತಿಂದು ತಿಂದು ಬೋರ್ ಆಗಿರುವವರು ಮನೆಯಲ್ಲೇ ಸ್ಪೆಷಲ್ ಆಗಿ ಎಗ್ ರೋಲ್ (Egg Roll) ತಯಾರಿಸಿ ಸವಿಯಬಹುದಾಗಿದೆ. ಅತ್ಯಂತ ಸರಳವಾಗಿ ಮನೆಯಲ್ಲಿರುವ ಅಡುಗೆ ಸಾಮಾಗ್ರಿಗಲಲ್ಲೇ ಈ ಎಗ್ ರೋಲ್ ತಯಾರಿಸಬಹುದಾಗಿದೆ. ಹಾಗಿದ್ದರೆ ಬನ್ನಿ ಇಂದು ಕನ್ನಡ ಅಡ್ವೈಜರ್ ಎಗ್ ರೋಲ್ ಮಾಡುವ ವಿಧಾನವನ್ನು ತಿಳಿಸಿಕೊಡಲಿದೆ.

ಬೇಕಾಗುವ ಸಾಮಾಗ್ರಿಗಳು:

  • ಎರಡು ಚಪಾತಿ / ರೋಟಿ
  • 2 ರಿಂದ 3 ಮೊಟ್ಟೆ
  • ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ
  • ಅರ್ಧ ಚಮಚ ಅರಿಶಿಣ ಪುಡಿ
  • ರುಚಿಗೆ ತಕ್ಕ ಉಪ್ಪು
  • ಟೊಮೆಟೊ
  • ಹಸಿಮೆಣಸಿನಕಾಯಿ 1
  • ನಿಂಬೆರಸ
  • 1 ಚಮಚ ಎಣ್ಣೆ

ಮಾಡುವ ವಿಧಾನ:

ಮೊದಲಿಗೆ ಸ್ಟೌ ಮೇಲೆ ತವಾವನ್ನು ಕಾಯಲು ಬಿಡಿ. ನಂತರ ಒಂದು ಬೌಲ್ ನಲ್ಲಿ ಎಗ್ ಜತೆಗೆ ಅರಿಶಿಣ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಹಸಿಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕಾದ ತವಾಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಮೊಟ್ಟೆ ಮಿಶ್ರಣವನ್ನು ಹಾಕಿ. ಅದು ಸ್ವಲ್ಪ ಬೆಂದಾಗ ಅದರ ಮೇಲೆ ಚಪಾತಿ ಹಾಕಿ ಮೆಲ್ಲನೆ ಪ್ರೆಸ್ ಮಾಡಿ. ಬೆಂದ ನಂತರ ಮಗುಚಿ ಹಾಕಿ ಒಂದು 30 ಸೆಕೆಂಡ್ ಬೇಯಿಸಿ ಗ್ಯಾಸ್ ಆಫ್ ಮಾಡಿ. ಇದಾದ ನಂತರ ಅದರ ಮೇಲೆ ಕತ್ತರಿಸಿದ ಈರುಳ್ಳಿ, ಟೊಮೆಟೊ, ಎರಡು ಹನಿ ನಿಂಬೆರಸ ಹಾಕಿ ರೋಲ್ ಮಾಡಿದರೆ ಟೊಮೆಟೊ ಸಾಸ್ ನೊಂದಿಗೆ ಎಗ್ ರೋಲ್ (Egg Roll) ಸವಿಯಲು ಸಿದ್ದ.

Egg roll can be made in the most simple homemade kitchenware. For those who are eager to eat something in the rainy season, and evening tee-coffee They can make an special egg roll at home.

You may also like