Home » ನಿಮ್ಮ ಕಂಪ್ಯೂಟರ್‌/ಮೊಬೈಲ್‌ನಲ್ಲಿಯೇ ಜಾತಿ, ಆದಾಯ ಪ್ರಮಾಣ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ?

ನಿಮ್ಮ ಕಂಪ್ಯೂಟರ್‌/ಮೊಬೈಲ್‌ನಲ್ಲಿಯೇ ಜಾತಿ, ಆದಾಯ ಪ್ರಮಾಣ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ?

by manager manager

ಇನ್‌ಕಮ್‌ ಸರ್ಟಿಫಿಕೇಟ್, ಜಾತಿ ಪ್ರಮಾಣ ಮಾತ್ರ ಗಳನ್ನು ಪಡೆಯಲು ಪ್ರತಿಯೊಬ್ಬರು ಮೊದಲು ತಾಲೂಕು ಕೇಂದ್ರಗಳಲ್ಲಿ ಹೋಗಿ ಚಾಪಕಾಗದ ತೆಗೆದು ನೋಟರಿ ಮಾಡಿಸಿ ನಂತರ ನಾಡಕಛೇರಿಗಳಲ್ಲಿ ಇವುಗಳಿಗೆ ಅರ್ಜಿ ಸಲ್ಲಿಬೇಕು. ಅರ್ಜಿ ಸಲ್ಲಿಸಿದ 12 ದಿನಗಳ ನಂತರ ಈ ಸರ್ಟಿಫಿಕೇಟ್‌ಗಳನ್ನು ಪಡೆದು ಕೊಳ್ಳಲು ಮತ್ತೇ ಅದೇ ನಾಡಕಛೇರಿಗೆ ಅಲೆಯಬೇಕಿತ್ತು. ಅಲ್ಲಿ ಏನಾದ್ರು ತೊಂದರೆ ಆಗಿದ್ದಲ್ಲಿ, ಅವರು ರಜೆಯಿದ್ದಲ್ಲಿ ಮತ್ತೊಂದು ದಿನ ಅಲೆಯಬೇಕು. ಆದರೆ ಈಗ ಯಾವುದೇ ವ್ಯಕ್ತಿ ಈ ಯಾವುದೇ ಸರ್ಕಸ್‌ಗಳನ್ನು ಮಾಡುವ ಅಗತ್ಯವಿಲ್ಲ.

ಸಮಯದ ಉಳಿತಾಯದ ಜೊತೆಗೆ, ಕೇವಲ ರೇಷನ್‌ ಕಾರ್ಡ್‌ ನಂಬರ್ ಬಳಸಿಯೂ ಕಂಪ್ಯೂಟರ್, ಮೊಬೈಲ್‌ನಲ್ಲಿಯೇ ಜಾತಿ ಮತ್ತು ಆದಾಯ ಪ್ರಮಾಣ ಡೌನ್‌ಲೋಡ್ ಮಾಡಬಹುದು.

ಆನ್‌ಲೈನ್‌ ನಲ್ಲಿಯೇ ಅರ್ಜಿ ಸಲ್ಲಿಸಿ

– ಡೌನ್‌ಲೋಡ್ ಮಾತ್ರವಲ್ಲದೇ ಆನ್‌ಲೈನ್‌ ಮೂಲಕವೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಬಹುದು. ಇದರ ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಡೆಬಿಟ್‌ ಕಾರ್ಡ್ ಕ್ರೆಡಿಟ್ ಕಾರ್ಡ್, ನೆಟ್‌ ಬ್ಯಾಂಕಿಂಗ್ ಬಳಸಿ ಪಾವತಿಸಬಹುದು. ಈ ಶುಲ್ಕ ರೂ.25.

ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮೊಬೈಲ್‌ನಲ್ಲಿ ಆಗಲಿ, ಕಂಪ್ಯೂಟರ್‌ನಲ್ಲಿ ಆಗಲಿ ಆನ್‌ಲೈನ್ ಮೂಲಕ ಡೌನ್‌ಲೋಡ್ ಮಾಡುವ ವಿಧಾನ ಈ ಕೆಳಗಿನಂತಿದೆ..

– ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ ನ ಇಂಟರ್ನೆಟ್‌ ಬ್ರೌಸರ್‌ ನಲ್ಲಿ www.nadakacheri.karnataka.gov.in ಗೆ ಭೇಟಿ ನಿಡಿ

– ನಂತರ ಓಪನ್ ಆದ ಪೇಜ್‌ ನ ಮೇಲ್ಬಾಗದಲ್ಲಿ ಎಡಗಡೆ ಕಾಣಿಸುವ ಮೂರು ಗೆರೆ ಇರುವ Home ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಆನ್‌ಲೈನ್ ಅಪ್ಲಿಕೇಷನ್ ಮೇಲೆ ಕ್ಲಿಕ್ ಮಾಡಿ Apply Online ಎಂಬುದರ ಮೇಲೆ ಕ್ಲಿಕ್ ಮಾಡಿ

– ನಂತರ ನಿಮ್ಮ ಮೊಬೈಲ್ ನಂಬರ್ ಬಳಸಿ ಲಾಗ್‌ ಇನ್‌ ಆಗಿರಿ.

– ನಂತರ ಓಪನ್‌ ಆಗುವ ಪೇಜ್‌ನಲ್ಲಿ New Request ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮಗೆ ಬೇಕಾದ ಸೇವೆಗಳನ್ನು ಇಲ್ಲಿ ಆಯ್ಕೆ ಮಾಡಿಕೊಳ್ಳಬಹುದು.

– ಜಾತಿ ಮತ್ತು ಆದಾಯದ ಪ್ರಮಾಣ ಪತ್ರದ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ರೇಷನ್ ನಂಬರ್ ಹಾಕಿ. ಅಲ್ಲಿ ಕೇಳುವ ಮಾಹಿತಿಯನ್ನು ಟೈಪ್‌ ಮಾಡುವ ಮೂಲಕ ನೀಡಿ. (ಸೂಚನೆ : GSC No ನೀಡುವ ಅಗತ್ಯವಿಲ್ಲ)

– ನಿಮಗೆ ಅಗತ್ಯವಿರುವ ಸದಸ್ಯರ ಆಯ್ಕೆ ಮಾಡಿ ಪರಿಶೀಲಿಸಿ.(ಪ್ರಮಾಣ ಪತ್ರದಲ್ಲಿ ಹೆಸರು ತಪ್ಪು ಇದ್ದಲ್ಲಿ ನಿಮ್ಮ ನಾಡಕಛೇರಿ ಅಥವಾ ಅಟಲ್‌ ಜೀ ಕೇಂದ್ರಗಳಿಗೆ ಹೋಗಿ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು)

– ನಿಮಗೆ ಬೇಕಾದ ಪ್ರಮಾಣ ಪತ್ರಗಳನ್ನು ಆಯ್ದುಕೊಂಡ ನಂತರ Pay Service ಎಂಬುದರ ಮೇಲೆ ಕ್ಲಿಕ್ ಮಾಡಿ ಶುಲ್ಕ ಪಾವತಿಸಿ. ನಂತರ ಪ್ರಮಾಣ ಪತ್ರಗಳ ಡೌನ್‌ಲೋಡ್ ಲಭ್ಯ.

– ನೀವು ನಾಡಕಛೇರಿಗೆ ಹೋಗಿ ಜಾತಿ ಆದಾಯ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೇ ಅವರು ನಿಮಗೆ ನೀಡಿರುವ ಸ್ವೀಕೃತಿ ನಂಬರ್(Acknowledgement Number) ನೀಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪುನಃ ಅದೇ ಕಛೇರಿಗೆ ಹೋಗುವ ಅಗತ್ಯವಿಲ್ಲ.

ನಾವು ತಿಳಿಸಿದ ಈ ಸೇವೆಗಳನ್ನು ಪಡೆಯಲು ಅಧಿಕೃತ ವೆಬ್‌ಸೈಟ್‌ ವಿಳಾಸ nadakacheri.karnataka.gov.in/ajsk ಅಥವಾ www.nadakacheri.karnataka.gov.in/Home.aspx

ಈ ಅಂಶಗಳನ್ನು ನೆನಪಿಡಿ

– ನೀವು ಅರ್ಜಿ ಸಲ್ಲಿಸುವಾಗ ಪ್ರಿಂಟರ್ ಸಂಪರ್ಕ ಇದ್ದರೆ ಆಗಲೇ ಪ್ರಿಂಟ್ ತೆಗೆದುಕೊಳ್ಳಬಹುದು. ಅಥವಾ Save PDF ಎಂಬುದನ್ನು ಕ್ಲಿಕ್ ಮಾಡಿ ಮೊಬೈಲ್‌ ನಲ್ಲೇ ಅಥವಾ ಕಂಪ್ಯೂಟರ್‌ ನಲ್ಲೇ ಸೇವ್ ಮಾಡಿ ಇಟ್ಟಿಕೊಳ್ಳಬಹುದು. ಪ್ರಿಂಟ್ ಪಡೆಯಲು ಇಮೇಲ್‌ ಗೆ ಕಳುಹಿಸಿಕೊಂಡೋ ಅಥವಾ ಪೆನ್‌ಡ್ರೈವ್ ಮೂಲಕ ತೆಗೆದುಕೊಂಡು ಯಾವಾಗ ಬೇಕಾದರೂ ಪ್ರಿಂಟ್ ತೆಗೆದುಕೊಳ್ಳಬಹುದು.

You may also like