Home » ಅರ್ಜಿ ಸಲ್ಲಿಸಿದವರು ಸ್ವೀಕೃತಿ ನಂಬರ್ ಇಲ್ಲದೆ PAN CARD ಸ್ಟೇಟಸ್ ಚೆಕ್‌ ಮಾಡುವುದು ಹೇಗೆ?

ಅರ್ಜಿ ಸಲ್ಲಿಸಿದವರು ಸ್ವೀಕೃತಿ ನಂಬರ್ ಇಲ್ಲದೆ PAN CARD ಸ್ಟೇಟಸ್ ಚೆಕ್‌ ಮಾಡುವುದು ಹೇಗೆ?

by manager manager

TIN-NSDL ಆನ್‌ಲೈನ್‌ ಪೋರ್ಟಲ್ ಪಾನ್‌ ಕಾರ್ಡ್‌ಗಾಗಿ(PAN Card) ಅರ್ಜಿ ಸಲ್ಲಿಸಿದವರು ಪಾನ್‌ಕಾರ್ಡ್ ಸ್ಟೇಟಸ್ ಚೆಕ್‌ ಮಾಡಲು ಅವಕಾಶ ನೀಡಿದೆ. ಅಷ್ಟೇ ಅಲ್ಲದೇ ಸ್ವೀಕೃತಿ ನಂಬರ್(Acknowledgement Number) ಇಲ್ಲದೆಯೇ ಪಾನ್‌ ಕಾರ್ಡ್‌ ಸ್ಟೇಟಸ್ ಚೆಕ್‌ ಮಾಡಲು ಸಹ ಅವಕಾಶ ನೀಡಿದೆ.

ಪಾನ್‌ ಕಾರ್ಡ್‌(PAN Card) ಗೆ ಅರ್ಜಿ ಸಲ್ಲಿಸಿದವರು ಸ್ವೀಕೃತಿ ನಂಬರ್ ಇಲ್ಲದಿದ್ದರು ಸಹ ಕೇವಲ ಅವರ ಹೆಸರು ಮತ್ತು ಜನ್ಮ ದಿನಾಂಕವನ್ನು TIN-NSDL ಆನ್‌ಲೈನ್ ಪೋರ್ಟಲ್‌ ನಲ್ಲಿ ನೀಡಿ ಪಾನ್‌ ಕಾರ್ಡ್‌ ಸ್ಟೇಟಸ್ ಚೆಕ್‌ ಮಾಡಬಹುದು. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ..

TIN-NSDL ಆನ್‌ಲೈನ್‌ ಪೋರ್ಟಲ್‌ ಗೆ ಭೇಟಿ ನೀಡಲು – ಕ್ಲಿಕ್ ಮಾಡಿ

– ನಂತರ ಈ ಕೆಳಗಿನಂತೆ ಪೇಜ್‌ ಒಂದು ಓಪನ್ ಆಗುತ್ತದೆ.

– ಓಪನ್ ಆದ ಪೇಜ್‌ನಲ್ಲಿ ಮೊದಲಿಗೆ ‘PAN – New/Change Request’ ಅಪ್ಲಿಕೇಶನ್ ಟೈಪ್‌ ಅನ್ನು ಆಯ್ಕೆ ಮಾಡಿ.

– ನಂತರ ಸ್ವೀಕೃತಿ ನಂಬರ್ (Acknowledgement Number) ಅನ್ನು ಟೈಪಿಸಲು ಇರುವ ಕಾಲಂ ಅನ್ನು ಹಾಗೆ ಬಿಡಿ.

– ಮುಂದಿನ ಕಾಲಂ ನಲ್ಲಿ ನಿಮ್ಮ ಹೆಸರನ್ನು Last Name, First Name, Middle Name ಮತ್ತು ಜನ್ಮ ದಿನಾಂಕವನ್ನು ನೀಡಿ.

– Submit ಆಯ್ಕೆ ಮೇಲೆ ಕ್ಲಿಕ್ ಮಾಡಿ.

You may also like