Home » ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಸಾಲ ಪಡೆಯುವುದು ಹೇಗೆ?

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಸಾಲ ಪಡೆಯುವುದು ಹೇಗೆ?

by manager manager

ನರೇಂದ್ರ ಮೋದಿಯವರು ದೇಶದ ಎಲ್ಲಾ ವರ್ಗದ ಮನೆಯಿಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಸಾಲ ನೀಡುವ ಮಹತ್ವಾಕಾಂಕ್ಷೆ ಯೋಜನೆಯನ್ನು ಘೋಷಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಬಹುಸಂಖ್ಯಾತರಿಗೆ ತಿಳಿಯದ ವಿಷಯ ಎನಂದ್ರೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಕಟ್ಟಲು ಸಾಲ ಪಡೆಯುವುದು ಹೇಗೆ ಎಂಬುದು.

ಪಿಎಂಎವೈ (PMAY) ಯೋಜನೆ ಕ್ರೆಡಿಟ್-ಲಿಂಕ್ಡ್ ಸಬ್ಸಿಡಿಯನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನೀಡಲಿದ್ದು, ಯಾರು, ಹೇಗೆ, ಎಷ್ಟು ವಸತಿ ಸಾಲ ಪಡೆಯಬಹುದು ಎಂಬ ಕಂಪ್ಲೀಟ್ ಡಿಟೇಲ್ಸ್ ಈ ಕೆಳಗಿನಂತಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ವಸತಿ ಸೌಲಭ್ಯಕ್ಕಾಗಿ ಸಾಲ ನೀಡಲು ಅರ್ಜಿದಾರರನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ

1 ಆರ್ಥಿಕವಾಗಿ ದುರ್ಬಲ ಹೊಂದಿದವರು(EWS)

2 ಲಘು ಆದಾಯ ಗುಂಪು (LIG)

3 ಮಧ್ಯಮ ಆದಾಯ ಗುಂಪು (MIG I)

4 ಮಧ್ಯಮ ಆದಾಯ ಗುಂಪು (MIG II)

– ಈ ಮೇಲಿನ ಗುಂಪಿಗೆ ಸೇರಿದವರು ಸಾಲ ಪಡೆಯಬೇಕಾದರೆ ಅಗತ್ಯ ದಾಖಲೆಗಳನ್ನು ನೀಡಬೇಕು.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಸಾಲಕ್ಕಾಗಿ ಆದಾಯ ಮಿತಿ ಎಷ್ಠಿರಬೇಕು? ?

ಮಧ್ಯಮ ಆದಾಯ ಗುಂಪು (MIG I) ವಾರ್ಷಿಕ ಆದಾಯವು ರೂ.12 ಲಕ್ಷಗಳಿಗಿಂತ ಕಡಿಮೆ ಇರಬೇಕು. ಮಧ್ಯಮ ಆದಾಯ ಗುಂಪು (MIG II) ವರ್ಗದವರ ಆದಾಯ ರೂ.12 ಲಕ್ಷದಿಂದ ರೂ.18 ಲಕ್ಷದ ನಡುವೆ ಇಬೇಕು.

ಅರ್ಜಿ ಎಲ್ಲಿ ಸಲ್ಲಿಸಬಹುದು?

ಪ್ರಧಾನ ಮಂತ್ರಿ ಆವಾಸ್ ಯೋಜನೆ ಸಾಲಕ್ಕಾಗಿ ಅರ್ಜಿದಾರರು ತಮ್ಮ ಆದ್ಯತೆಯ ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ವಿವರಗಳು, ಆದಾಯ, ಹೂಡಿಕೆಗಳು, ಇತರ ಸಾಲಗಳು, ಆಸ್ತಿ ವಿವರಗಳು ಮತ್ತು ಸಹ-ಅರ್ಜಿದಾರರ ವಿವರಗಳನ್ನು ನೀಡಬೇಕು.

– PMAY ಸಬ್ಸಿಡಿ ಯೋಜನೆ ಅರ್ಜಿಯನ್ನು https://pmaymis.gov.in/ ಈ ಲಿಂಕ್‌ ಮಾಡಿ ಓಪನ್‌ ಆಗುವ ವೆಬ್‌ಸೈಟ್‌ನಲ್ಲಿ Citizen Assessment ಟ್ಯಾಪ್‌ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಎರಡನೇ ಆಯ್ಕೆಯನ್ನು ಕ್ಲಿಕ್ ಮಾಡಿ ಮುಂದುವರೆಯಿರಿ.

– ಅರ್ಜಿದಾರರು ತಮ್ಮ ವರ್ಗಕ್ಕೆ ಅನುಗುಣವಾಗಿ ಆಯ್ಕೆ ವಿಧಾನ ಮಾಡಿಕೊಳ್ಳಿ.

– ಮೊದಲಿಗೆ ಆಧಾರ್ ಸಂಖ್ಯೆ, ಹೆಸರು ನಮೂದಿಸಬೇಕು. ನಂತರ ಮುಂದಿನ ಇತರೆ ಮಾಹಿತಿಗಳಾದ ಆದಾಯ, ಕುಟುಂಬ ಸದಸ್ಯರ ಸಂಖ್ಯೆ, ವಿಳಾಸ, ಸಂಪರ್ಕ ಸಂಖ್ಯೆ, ಕುಟುಂಬದ ಮುಖ್ಯಸ್ಥರ ವಯಸ್ಸು, ಧರ್ಮ, ಜಾತಿ, ಇತರೆ ಮಾಹಿತಿ ನೀಡಬೇಕು.

ಬ್ಯಾಂಕ್‌ಗೆ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು

– ಜಾತಿ ಮತ್ತು ಆದಾಯ ಪ್ರಮಾಣ ಪತ್ರ

– ಆಧಾರ್ ಜೆರಾಕ್ಸ್ ಪ್ರತಿ

– ರೇಷನ್ ಕಾರ್ಡ್

– ಆಸ್ತಿ ಸಂಬಂಧಿತ ದಾಖಲೆಗಳ ಜೆರಾಕ್ಸ್ ಪ್ರತಿ

– ಆದಾಯದ ಪುರಾವೆಗಳು

– ಇತರೆ ಸಾಲಗಳಿದ್ದಲ್ಲಿ ಅದರ ಪುರಾವೆಗಳು

ಸೂಚನೆ: ಮಹಿಳೆಯರು ಅಥವಾ ಕುಟುಂಬದ ಏಕೈಕ ಪೋಷಕರು ಅರ್ಜಿ ಸಲ್ಲಿಸಿದರೆ ಬೇಗ ಸಾಲ ಮಾನ್ಯವಾಗುತ್ತದೆ.