Home » ಕರ್ಬೂಜ ಹಣ್ಣಿನ ಬಗ್ಗೆ ತಿಳಿಯಲೇ ಬೇಕಾದ ಮಾಹಿತಿ ಇದು!

ಕರ್ಬೂಜ ಹಣ್ಣಿನ ಬಗ್ಗೆ ತಿಳಿಯಲೇ ಬೇಕಾದ ಮಾಹಿತಿ ಇದು!

by manager manager

ಕರ್ಬೂಜ ಹಣ್ಣು ಬೇಸಿಗೆಗೆ ಅತಿ ಸೂಕ್ತವಾದ ಹಣ್ಣು. ಬಿರು ಬೇಸಿಗೆಯಲ್ಲಿ ಹೆಚ್ಚು ಬೆವರುವವರು ಈ ಹಣ್ಣನ್ನು ಹೆಚ್ಚಾಗಿ ತಿನ್ನಲೇಬೇಕು. ಯಾಕಂದ್ರೆ ಈ ಹಣ್ನು ಹೆಚ್ಚು ನೀರಿನಾಂಶವನ್ನು ಹೊಂದಿದೆ.

ಕರ್ಬೂಜ ದೇಹಕ್ಕೆ ತಂಪು ಮಾತ್ರವಲ್ಲದೇ ಅನೇಕ ಪೋಟಾಷಿಯಂ, ವಿಟಮಿನ್ ಎ, ಸಿ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಲ್ಲಂಗಡಿ ಹಣ್ಣಿನಂತೆಯೇ ಕರ್ಬೂಜ ಹಣ್ಣು ಸಹ ಬೇಸಿಕೆ ಕಾಲದಲ್ಲಿ ಎದುರಾಗುವ ನಿರ್ಜಲೀಕರಣ(ಡಿಹೈಡ್ರೇಶನ್) ಸಮಸ್ಯೆಯಿಂದ ದೂರವಿರಲು ಸಹಾಯ ಮಾಡುತ್ತದೆ. ಅಲ್ಲದೇ ದೇಹದ ತೂಕ ಇಳಿಸಿಕೊಳ್ಳಲು ಸಹ ಸೂಕ್ತವಾದ ಹಣ್ಣು. ಇನ್ನೂ ವಿಶೇಷವಾಗಿ ಕರ್ಬೂಜ ಹಣ್ಣಿನಿಂದ ಇನ್ನೇನ್ನೆಲ್ಲ ಉಪಯೋಗಗಳಿವೆ ಎಂಬುದನ್ನು ಮಿಸ್ ಮಾಡದೇ ಓದಿರಿ..

1 ಕರ್ಬೂಜ ಹಣ್ಣು ರಕ್ತವನ್ನು ಶುದ್ದ ಮಾಡುವ ಗುಣ ಹೊಂದಿದೆ.

2 ಪಿತ್ತವನ್ನು ಕಡಿಮೆ ಮಾಡುತ್ತದೆ

3 ಕರ್ಬೂಜ ರಕ್ತದೊತ್ತಡ ಕಡಿಮೆ ಮಾಡುತ್ತದೆ

4 ಅತಿ ಕಡಿಮೆ ಕೊಬ್ಬು ಮತ್ತು ಕ್ಯಾಲೊರಿ ಹೊಂದಿದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಬಯಸುವವರು ಇದನ್ನು ತಿನ್ನಬಹುದು.

5 ಇದರಲ್ಲಿನ ನಾರಿನಾಂಶ ಬೇಗ ಹಸಿವಾಗುವುದನ್ನು ತಡೆಯುತ್ತದೆ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

6 ಜೀವಸತ್ತ್ವ ಎ ಮತ್ತು ಸಿ ಇರುವುದರಿಂದ ಕಣ್ಣಿನ ದೃಷ್ಟಿಯನ್ನು ಉತ್ತಮವಾಗಿರುಸುತ್ತದೆ.

7 ಕರ್ಬೂಜ ಜ್ಯೂಸ್ ಕುಡಿಯುವುದರಿಂದ ಕಜ್ಜಿ, ಕೆಲವು ಚರ್ಮರೋಗಗಳಿಂದ ದೂರವಿರಲು ಸಹಾಯಕಾರಿಯಾಗಿದೆ.

8 ಈ ಹಣ್ಣು ಸಪ್ಪೆಯಾಗಿದ್ದು, ಮಧುಮೇಹ ಕಾಯಿಲೆಯವರು ನಿಶ್ಚಿಂತೆಯಿಂದ ಸೇವಿಸಬಹುದು. ಅಲ್ಲದೇ ಇದರಲ್ಲಿರುವ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಮಪ್ರಮಾಣದಲ್ಲಿರಿಸಿ ಮಧುಮೇಹದ ಪರಿಣಾಮಕಾರಿ ನಿಯಂತ್ರಣ ಆಗುತ್ತದೆ.

9 ವಿಟಮಿನ್ ಸಿ ಮತ್ತು ಬೀಟಾ ಕೆರೋಟಿನ್ ಎಂಬ ಆಂಟಿ ಆಕ್ಸಿಡೆಂಟ್ ಕ್ಯಾನ್ಸರ್ ಕಾರಕ ಕಣಗಳನ್ನು ಹಿಮ್ಮೆಟ್ಟಿಸಬಲ್ಲದು. ಹಾಗಾಗಿ ಕ್ಯಾನ್ಸರ್ ತಡೆಯುವ ಅಂಶಗಳು ಈ ಹಣ್ಣಿನಲ್ಲಿವೆ.

10 ಕಿಡ್ನಿಯಲ್ಲಿನ ಕಲ್ಲುಗಳನ್ನು ಕರಗಿಸಲು ಸಹಾಯಕಾರಿ

11 ಈ ಹಣ್ಣಿನ ಸೇವನೆಯಿಂದ ಹೃದಯದ ಆರೋಗ್ಯಕ್ಕೆ ಉತ್ತಮ

12 ನಿದ್ರಾಹೀನತೆಯಿಂದ ಬಳ.ಲುತ್ತಿರುವವರು ಈ ಹಣ್ಣು ಸೇವನೆ ಮಾಡಿದರೆ ಪರಿಹಾರ ಕಾಣಬಹುದು.

13 ಕರ್ಬೂಜ ಸೌಂದರ್ಯವರ್ಧಕವೂ ಹೌದು. ಚರ್ಮದ ಕಾಂತಿಯೂ ಹೆಚ್ಚುತ್ತದೆ. ಅಲ್ಲದೇ ವಿಟಮಿನ್ ಸಿ ಚರ್ಮ ಸುಕ್ಕಾಗದಂತೆ ತಡೆದು, ಮುಪ್ಪನ್ನು ದೂರವಿರುಸುತ್ತದೆ.

14 ಕರಬೂಜದಲ್ಲಿನ ವಿಟಮಿನ್ ಬಿ ತಲೆಕೂದಲು ಉದುರುವುದನ್ನು ತಡೆಯುತ್ತದೆ.

Here are the amazing health benefits of musk melon… Muskmelons are rich in potassium which helps in regulating the blood pressure and keepshypertension at bay.

You may also like