Home » ಗಂಗಾ ಕಲ್ಯಾಣ ಯೋಜನೆ ಸೌಲಭ್ಯ ಪಡೆವ ರೈತರಿಗೆ ರೂ.4 ಲಕ್ಷವರೆಗೂ ಸಹಾಯಧನ

ಗಂಗಾ ಕಲ್ಯಾಣ ಯೋಜನೆ ಸೌಲಭ್ಯ ಪಡೆವ ರೈತರಿಗೆ ರೂ.4 ಲಕ್ಷವರೆಗೂ ಸಹಾಯಧನ

by manager manager

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದೇಶದ ಬೆನ್ನಲುಬು ಕೃಷಿ ಅಭಿವೃದ್ಧಿಗಾಗಿ ರೈತರಿಗೆ ಹಲವಾರು ಯೋಜನೆಗಳನ್ನು ಆಗಾಗ ಅನುಷ್ಠಾನಗೊಳಿಸುತ್ತಿರುತ್ತದೆ. ಈ ಯೋಜನೆಗಳ ಸಾಲಿನಲ್ಲಿ ಗಂಗಾಕಲ್ಯಾಣ ಯೋಜನೆ ಸಹ ಒಂದು. ಈ ಯೋಜನೆ ಅಡಿಯಲ್ಲಿ ರೈತರು ರೂ.4 ಲಕ್ವವರೆಗೂ ಸಹಾಯಧನ ಪಡೆಯಬಹುದಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ಓದಿರಿ..

ಗಂಗಾ ಕಲ್ಯಾಣ ನೀರಾವರಿ ಯೋಜನೆಯ ಉದ್ದೇಶ ಏನು?

ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳಿಗೆ ನಿರಾವರಿ ಸೌಲಭ್ಯ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ.

ಯಾರೆಲ್ಲಾ ಈ ಯೋಜನೆ ಸೌಲಭ್ಯ ಪಡೆಯಬಹುದು?

ಹಿಂದುಳಿದ ವರ್ಗಗಳಾದ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸೇರಿದವರು, ಸಣ್ಣ ಮತ್ತು ಅತಿಸಣ್ಣ ರೈತರು ಗಂಗಾ ಕಲ್ಯಾಣ ಯೋಜನೆ ಸೌಲಭ್ಯ ಪಡೆಯಬಹುದಾಗಿದೆ.

ಗಂಗಾ ಕಲ್ಯಾಣ ಯೋಜನೆ ಸೌಲಭ್ಯಗಳ ಸಂಕ್ಷಿಪ್ತ ವಿವರ ಹಾಗೂ ಅರ್ಹತೆ ಈ ಕೆಳಗಿನಂತಿವೆ..

ವೈಯಕ್ತಿಕ ನೀರಾವರಿ ಕೊಳವೆ ಬಾವಿ ಯೋಜನೆ:

– ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಭೂಮಿ ಹೊಂದಿರಬೇಕು.

– ಇತರೆ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಇರುವ ಕನಿಷ್ಠ 2 ಎಕರೆ ಜಮೀನು ಇರಬೇಕು.

– ಈ ಯೋಜನೆ ಅಡಿಯಲ್ಲಿ ಘಟಕವೆಚ್ಚ ರೂ.2.50 ಲಕ್ಷ ಸಹಾಯಧನ ದೊರೆಯುತ್ತದೆ. ಇದರಲ್ಲಿ ರೂ.2.00 ಲಕ್ಷ ಸಹಾಯಧನ(ಸಬ್ಸಿಡಿ) ಕೊಳವೆ ಬಾವಿ ಕೊರೆಸಲು, ಪಂಪ್‌ಸೆಟ್ ಅಳವಡಿಕೆಗೆ, ಪೂರಕ ಸಾಮಾಗ್ರಿಗಳ ಸರಬರಾಜಿಗೆ ವೆಚ್ಚ ಭರಿಸಲಾಗುವುದು. ಮತ್ತು ವಾರ್ಷಿಕ ಶೇ.4 ಬಡ್ಡಿದರದಲ್ಲಿ ರೂ.50000 ಸಾಲ ದೊರೆಯುತ್ತದೆ.

– ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ವೈಯಕ್ತಿಕ ಕೊಳವೆ ಬಾವಿಯ ಘಟಕ ವೆಚ್ಚ ರೂ.4.00 ಲಕ್ಷ ದೊರೆಯಲಿದೆ.

ಸಾಮೂಹಿಕ ನೀರಾವರಿ ಕೊಳವೆಬಾವಿ ಯೋಜನೆ:

– ಈ ಯೋಜನೆ ಅಡಿಯಲ್ಲಿ ಹಿಂದುಳಿದ ವರ್ಗಗಳಾದ ಪ್ರವರ್ಗ-1, 2ಎ, 3ಎ ಮತ್ತು 3ಬಿ ಗೆ ಸೇರಿದ 3 ಸಣ್ಣ ಮತ್ತು ಅತಿಸಣ್ಣ ರೈತರು ಹೊಂದಿರುವ 8 ಎಕರೆ ಪ್ರದೇಶ ಅಥವಾ ಅದಕ್ಕಿಂತ ಹೆಚ್ಚಿನ ಜಮೀನಿಗೆ ಸಾಮೂಹಿಕವಾಗಿ ಕೊಳವೆಬಾವಿ ನೀರಾವರಿ ಸೌಲಭ್ಯ ಒದಗಿಸಲಾಗುವುದು.

– ಈ ಯೋಜನೆ ಅಡಿಯಲ್ಲಿ 8-15 ಎಕರೆ ಪ್ರದೇಶಕ್ಕೆ 2 ಕೊಳವೆಬಾವಿ ಸೌಲಭ್ಯಕ್ಕೆ ರೂ.4 ಲಕ್ಷ ವರೆಗೆ ಸಹಾಯಧನ ದೊರೆಯುತ್ತದೆ.

– ಈ ಯೋಜನೆ ಅಡಿಯಲ್ಲಿ 15 ಎಕರೆಗಿಂತ ಹೆಚ್ಚು ಭೂಮಿಗೆ ಒಳಪಡುವ ಘಟಕಗಳಿಗೆ ರೂ.6 ಲಕ್ಷವರೆಗೆ ಸಹಾಯಧನ ದೊರೆಯಲಿದೆ. ಹಾಗೂ ಇದು ಸಂಪೂರ್ನ ಅನುದಾನವಾಗಿರುತ್ತದೆ.

ಈ ಯೋಜನೆ ಸೌಲಭ್ಯ ಪಡೆಯಲು ರೈತರು ತಮ್ಮ ತಾಲೂಕು ಕೇಂದ್ರಗಳ ಅಂತರ್ಜಲ ನಿರ್ವಹಣಾ ಕ‍ಛೇರಿ(ಇದ್ದಲ್ಲಿ) ಇಂದ ಅನುಮತಿ ಪಡೆದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಛೇರಿಗಳಲ್ಲಿ ಸೌಲಭ್ಯಕ್ಕಾಗಿ ಅರ್ಜಿ ಪ್ರಕ್ರಿಯೆ ಮುಂದುವರೆಸಬೇಕು.

ಈ ಬಗ್ಗೆ ಇನ್ನಷ್ಟು ಹೆಚ್ಚು ಮಾಹಿತಿ ತಿಳಿಯಲು ಕ್ಲಿಕ್‌ ಮಾಡಿ

You may also like