Home » ಕೇಂದ್ರಿಯ ಮನೋಚಿಕಿತ್ಸಾ ಸಂಸ್ಥಾನದಲ್ಲಿ 101 ವಿವಿಧ ಹುದ್ದೆಗಳ ನೇಮಕ

ಕೇಂದ್ರಿಯ ಮನೋಚಿಕಿತ್ಸಾ ಸಂಸ್ಥಾನದಲ್ಲಿ 101 ವಿವಿಧ ಹುದ್ದೆಗಳ ನೇಮಕ

by manager manager
central institute of psychiatry recruitment 2019

ರಾಂಚಿಯಲ್ಲಿರುವ ಕೇಂದ್ರಿಯ ಮನೋಚಿಕಿತ್ಸಾ ಸಂಸ್ಥಾನದಲ್ಲಿ(central institute of psychiatry) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅರ್ಹಾನಿಸಲಾಗಿದೆ. ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಈ ಕೆಳಗಿನಂತಿದೆ.

ಹುದ್ದೆಯ ಹೆಸರು : ಕಾರ್ಪೆಂಟರ್

ಹುದ್ದೆಗಳ ಸಂಖ್ಯೆ : 3

ಶೈಕ್ಷಣಿಕ ಅರ್ಹತೆ : ಎಸ್‌ಎಸ್‌ಎಲ್‌ ಸಿ ಮತ್ತು ಕಾರ್ಪೆಂಟರ್ ಟ್ರೇಡ್‌ನಲ್ಲಿ ಐಟಿಐ, ಒಂದು ವರ್ಷದ ಸೇವಾನುಭವ

ಹುದ್ದೆಯ ಹೆಸರು : ಅಡಿಗೆ ಭಟ್ಟ

ಹುದ್ದೆಗಳ ಸಂಖ್ಯೆ : 1 (OBC)

ಶೈಕ್ಷಣಿಕ ಅರ್ಹತೆ : ಎಸ್‌ಎಸ್‌ಎಲ್‌ಸಿ ಮತ್ತು ಸರ್ಕಾರಿ ಅಥವಾ ಖಾಸಗಿ ಹೋಟೆಲ್‌ಗಳಲ್ಲಿ ಎರಡು ವರ್ಷಗಳ ಸೇವಾನುಭವ

ಹುದ್ದೆಯ ಹೆಸರು : ಸ್ಟಾಫ್ ಕಾರ್ ಡ್ರೈವರ್

ಹುದ್ದೆಗಳ ಸಂಖ್ಯೆ : 2

ಶೈಕ್ಷಣಿಕ ಅರ್ಹತೆ : ಡ್ರೈವಿಂಗ್ ಲೈಸೆನ್ಸ್‌ ಹೊಂದಿರಬೇಕು. ಹೋಮ್‌ ಗಾರ್ಡ್‌ ಅಥವಾ ಸಿವಿಲ್ ವಾಲಂಟಿಯರ್ ಆಗಿ ಮೂರು ವರ್ಷಗಳ ಸೇವಾನುಭವ ಇರಬೇಕು

ಹುದ್ದೆಯ ಹೆಸರು : ವೀವರ್

ಒಟ್ಟು ಹುದ್ದೆಗಳ ಸಂಖ್ಯೆ : 2

ಶೈಕ್ಷಣಿಕ ಅರ್ಹತೆ : ಎಸ್‌ಎಸ್‌ಎಲ್‌ಸಿ ಮತ್ತು ಜೊತೆಗೆ ಕೈಬಗ್ಗ ಅಥವಾ ಜವಳಿ ನೇಕಾರಿಕೆ ಘಟಕದಲ್ಲಿ ಕನಿಷ್ಠ ಎಡು ವರ್ಷಗಳ ಸೇವಾನುಭವ ಹೊಂದಿರಬೇಕು.

ಹುದ್ದೆಯ ಹೆಸರು : ಮಲ್ಟಿ ಟಾಸ್ಕಿಂಗ್ ಸ್ಟಾಫ್

ಒಟ್ಟು ಹುದ್ದೆಗಳ ಸಂಖ್ಯೆ : 93

ಶೈಕ್ಷಣಿಕ ಅರ್ಹತೆ : ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪಾಸಾಗಿರಬೇಕು.

ವೇತನ ಶ್ರೇಣಿ

ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ ರೂ.18000 ದಿಂದ ರೂ.56900 ವರೆಗೆ. ಇತರೆ ಹುದ್ದೆಗಳಿಗೆ ರೂ.19900 ರಿಂದ ರೂ.63200 ವರೆಗೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19-01-2019

ವಯೋಮಿತಿ

ಅರ್ಜಿಸುವ ಕೊನೆಯ ದಿನಾಂಕದೊಳಗೆ ಕನಿಷ್ಟ 18 ವರ್ಷ, ಗರಿಷ್ಠ 25 ವರ್ಷ. ಅರ್ಹ ಅಭ್ಯರ್ಥಿಗಳಿಗೆ ನಿಯಮಾವಳಿಗಳ ಪ್ರಕಾರ ಸೂಕ್ತ ವಯೋ ಸಡಿಲಿಕೆಯನ್ನು ನೀಡಲಾಗುತ್ತದೆ.

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ, ಕೌಶಲ ಪರೀಕ್ಷೆ, ದೈಹಿಕ ಪರೀಕ್ಷೆ, ದಾಖಲಾತಿ ಪರಿಶೀಲನೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲಾತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಕಳುಹಿಸಬೇಕು.

– ಅರ್ಜಿ ನಮೂನೆಗಾಗಿ ಮತ್ತು ಇತರೆ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಅಧಿಸೂಚನೆಯನ್ನು ಪಿಡಿಎಫ್‌ ನಲ್ಲಿ ನೋಡಲು ಕ್ಲಿಕ್‌ ಮಾಡಿ

– ಕೇಂದ್ರಿಯ ಮನೋಚಿಕಿತ್ಸಾ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ https://cipranchi.nic.in/

Central Institute of Psychiatry, Ranchi has invited application for recruit various post like Carpenter, Staff Car driver, Viewer, cook and one more.

You may also like

1 comment

CIP Recruitment 2019 Apply for 9 Senior Resident Vacancies January 10, 2019 - 6:16 pm

[…] ರೆಸಿಡೆಂಟ್ ಹುದ್ದೆಗೆ ನೇರ ಸಂದರ್ಶನ ಕೇಂದ್ರಿಯ ಮನೋಚಿಕಿತ್ಸಾ ಸಂಸ್ಥಾನದಲ್ಲಿ 101 … RRB ಗ್ರೂಪ್ ಡಿ ಫಲಿತಾಂಶ ಯಾವಾಗ? ಕೀ […]

Comments are closed.