Home » ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ದಾಖಲೆ ಏರಿಕೆ

ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ದಾಖಲೆ ಏರಿಕೆ

by manager manager

ಜನತೆಗೆ ಅವರ ಮೂಲ ಕರ್ತವ್ಯ ಯಾವುದೋ ಖುಷಿಯಲ್ಲಿ ಮಾಯವಾಗುತ್ತಿದೆ. ಆ ಕರ್ತವ್ತ ಯಾವುದು ಎಂದು ಯೋಚನೆಯು ಅವರಿಗೆ ಬರುವಂತಹ ಯಾವುದೇ ಸನ್ನಿವೇಶವು ಅವರ ಗಮನಕ್ಕೆ ಬಂದರೂ ಅವರಿಗೂ ತಿಳಿಯುತ್ತಿಲ್ಲ. ಅದು ಏನು? ಎಂಬುದಕ್ಕೆ ಕೇವಲ ಒಂದು ಕರ್ತವ್ಯವಿಲ್ಲ. ಹಲವು ಇವೆ. ಅದರಲ್ಲಿ ಒಂದರ ಪರಿಣಾಮವನ್ನು ಈಗ ಜರ್ಮನಿಯ ಪಾಟ್ಸ್‌ಡಂ ಹವಾಮಾನ ಬದಲಾವಣೆ ಸಂಶೋಧನಾ ಸಂಸ್ಥೆ ಜಗತ್ತಿನ ಮುಂದಿಟ್ಟಿದೆ.

ವಾತಾವರಣದಲ್ಲಿ ಪ್ರಸ್ತುತ ಇರುವ ಕಾರ್ಬನ್ ಡೈ ಆಕ್ಸೈಡ್ (CO2) ಪ್ರಮಾಣವು ಕಳೆದ 30 ಲಕ್ಷ ವರ್ಷಗಳಲ್ಲಿಯೇ ಅತ್ಯಧಿಕ ಮಟ್ಟದ್ದಾಗಿದೆ ಎಂದು ಸಂಶೋಧನೆಯ ಅಧ್ಯಯನ ವರದಿ ಹೇಳಿದೆ.

ಇಂಧನಗಳ ಅತಿಯಾದ ಬಳಕೆ ವಾತಾವರಣವನ್ನು ಸೇರುತ್ತಿರುವುದರಿಂದ ಜೀವಗಾಳಿ ಪ್ರಮಾಣ ಕಡಿಮೆ ಆಗುತ್ತಿದ್ದು, ವಿಷಾನಿ ಮಟ್ಟವು ಹೆಚ್ಚಾಗತ್ತಿದೆ. ಹಸಿರುಮನೆ ಅನಿಲಗಳ ಪ್ರಮಾಣವು ದಿನದಿಂದ ದಿನಕ್ಕೆ ದೊಡ್ಡಮಟ್ಟದಲ್ಲಿ ಏರುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಜಾಗತಿಕ ಸರಾಸರಿ ತಾಪಮಾನ 2 ಡಿಗ್ರಿ ಸೆಲ್ಸಿಯಸ್‌ ಪ್ರಮಾಣ ಹೆಚ್ಚಿದ್ದು, ಈ ತಾಪಮಾನ ಮಟ್ಟ ಕಳೆದ 30 ಲಕ್ಷ ವರ್ಷಗಳಲ್ಲಿಯೇ ಅತಿ ಹೆಚ್ಚಾಗಿದೆ. ಇದೆ ಪ್ರಮಾಣದಲ್ಲಿ ತಾಪಮಾನ ಮುಂದಿನ ದಿನಗಳಲ್ಲೂ ಹೆಚ್ಚಾದರೆ ಮುಂದಿನ 50 ವರ್ಷಗಳಲ್ಲಿ ಮತ್ತೆ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಹೆಚ್ಚಾಗುವ ಅಪಾಯವಿದೆ ಎಂದು ಜರ್ಮನ್ ಪಾಟ್ಸ್‌ಡಂ ಹವಾಮಾನ ಬದಲಾವಣೆ ಸಂಶೋಧನಾ ಸಂಸ್ಥೆ ಹೇಳಿದ್ದಾರೆ.

ಸಮುದ್ರವನ್ನು ಸೇರುತ್ತಿರುವ ಕಲುಷಿತ ಕೆಸರಿನ ಪ್ರಮಾಣ, ಕರಗುತ್ತಿರುವ ಮಂಜುಗಡ್ಡೆಯ ಆಧಾರದ ಮೇಲೆ ವಿಜ್ಞಾನಿಗಳು ಈ ಅಧ್ಯಯನ ವರದಿ ಸಿದ್ಧಪಡಿಸಿದ್ದಾರೆ. ಆಧುನಿಕ ಯುಗದಲ್ಲಿ ಹವಾಮಾನ ಬದಲಾವಣೆಯೂ ಇನ್ನೂ ತೀವ್ರತರವಾದ ದಷ್ಪರಿಣಾಮವನ್ನುಂಟು ಮಾಡುವ ಅಪಾಯವಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದಲ್ಲಿ ಕಾರ್ಬನ್ ಡೈ ಅಕ್ಸೈಡ್ ಹೊರಸೂಸುವಿಕೆ 2018 ರಲ್ಲಿ 2,299 ಮಿಲಿಯನ್ ಟನ್ಸ್, 4.8% ಹೆಚ್ಚಿದೆ ಎಂದು ಅಂತರಾಷ್ಟ್ರೀಯ ಇಂಧನ ಸಂಸ್ಥೆ(IEA) ವರದಿ ಹೇಳಿದೆ. ಭಾರತದ ಕಾರ್ಬನ್ ಡೈ ಆಕ್ಸೈಡ್ ಹೊರಸೂಸುವಿಕೆ ಪ್ರಮಾಣ ಅಮೆರಿಕ ಮತ್ತು ಚೀನಾಗಿಂತ ಅತ್ಯಧಿಕವಾಗಿದೆ ಎಂದಿದೆ ವರದಿ.

ಈ ವರದಿ ಓದಿದವರು ಈಗ ಯೋಚಿಸಿ ತಮ್ಮ ಕರ್ತ್ಯವ್ಯಗಳು ಸಾಮಾಜಿಕವಾಗಿ ಏನು? ಎಂದು…

You may also like