Home » ಐಲವ್‌PDF: ಯಾವುದೇ ಡಾಕ್ಯುಮೆಂಟ್‌ಗಳನ್ನು ಸರಳವಾಗಿ ಕ್ಷಣದಲ್ಲಿ PDFಗೆ ಬದಲಿಸಿ

ಐಲವ್‌PDF: ಯಾವುದೇ ಡಾಕ್ಯುಮೆಂಟ್‌ಗಳನ್ನು ಸರಳವಾಗಿ ಕ್ಷಣದಲ್ಲಿ PDFಗೆ ಬದಲಿಸಿ

by manager manager

ನಿಮ್ಮ ಯಾವುದೇ ಡಾಕ್ಯುಮೆಂಟ್‌ಗಳನ್ನು ಪಿಡಿಎಫ್‌ ಫೈಲ್‌ಗೆ, ಅಥವಾ ನಿಮ್ಮ ಯಾವುದೇ ಪಿಡಿಎಫ್‌ ಫೈಲ್‌ಗಳನ್ನು ಯಾವುದೇ ಡಾಕ್ಯುಮೆಂಟ್‌ ಫಾರ್ಮ್ಯಾಟ್‌ಗಳಿಗೆ ಬದಲಿಸಲು ಬಹಳ ಸಲ ಆನ್‌ಲೈನ್‌ ಮೊರೆ ಹೋಗಿರುತ್ತೀರಿ. ಅಲ್ಲಿ ಎಷ್ಟೇ ಹುಡುಕಿದರು, ಗೂಗಲ್ ನ ಮೊದಲನೇ ರಿಸಲ್ಟ್‌ ಪೇಜ್‌ನಲ್ಲಿ ನಿಮ್ಮ ಡಾಕ್ಯುಮೆಂಟ್‌ಗಳನ್ನು ಪಿಡಿಎಫ್‌ಗೆ ಬದಲಿಸಲು ಯಾವುದೇ ವೆಬ್‌ಸೈಟ್‌ ಓಪನ್‌ ಮಾಡಿದರು ನಿಮ್ಮ ಕೆಲಸ ಪೂರ್ಣ ಗಳಿಸಲು ಆಗುವುದಿಲ್ಲ. ಕಾರಣ ಬಹುಸಂಖ್ಯಾತ ವೆಬ್‌ಸೈಟ್‌ಗಳು ನೀವು ಹಲವು ಮಾಹಿತಿಗಳನ್ನು ನೀಡಿ ಲಾಗಿನ್‌ ಆಗಲು ಕೇಳುತ್ತವೆ. ಅಥವಾ ಪ್ರೀಮಿಯಂ ಗೆ ಅಪ್‌ಡೇಟ್‌ ಆಗಿ ಎಂದು ಕೇಳುತ್ತವೆ. ಅಥವಾ ನಿಮ್ಮ ಕಾರ್ಯ ಪೂರ್ಣಗೊಳಿಸಲು ಅವಕಾಶ ನೀಡದೇ ಸತಾಯಿಸುವ ಇನ್ನಿತರ ಆಯ್ಕೆಗಳನ್ನು ಅಲ್ಲಿ ನೀಡಲಾಗಿರುತ್ತದೆ.

ಆದರೆ ಇಂದು ನಾವು ತಿಳಿಸುತ್ತಿರುವ ವೆಬ್‌ಸೈಟ್‌ ಗೆ ಭೇಟಿ ನೀಡಿದಲ್ಲಿ, ನಿಮ್ಮ ಯಾವುದೇ ರೀತಿಯ ಡಾಕ್ಯುಮೆಂಟ್‌ಗಳಾದ, ಪವರ್‌ ಪಾಯಿಂಟ್, ಎಂಎಸ್‌ ವರ್ಲ್ಡ್‌, ಎಂಎಸ್‌ ಎಕ್ಸೆಲ್ ಫೈಲ್, ಫೋಟೋಗಳನ್ನು PDF ಫೈಲ್‌ಗೆ ಅಥವಾ ಯಾವುದೇ ಪಿಡಿಎಫ್‌ ಫೈಲ್‌ ಅನ್ನು ಇತರ ಯಾವುದೇ ಡಾಕ್ಯುಮೆಂಟ್‌ ಫಾರ್ಮ್ಯಾಟ್‌ಗೆ ಉಚಿತವಾಗಿ, ಸರಳವಾಗಿ, ಕ್ಷಣ ಮಾತ್ರದಲ್ಲಿ ಬದಲಿಸಬಹುದು. ಹಲವು ಫೈಲ್‌ಗಳನ್ನು ಒಟ್ಟಿಗೆ ಸೇರಿದಂತೆ ಪಿಡಿಎಫ್‌ಗೆ ಬದಲಿಸಬಹುದು. ಆ ವೆಬ್‌ಸೈಟ್‌ ಯಾವುದು ಅಂತಿರಾ?

ವೆಬ್‌ಸೈಟ್‌ ವಿಳಾಸ : www.ilovepdf.com

– ಈ ವೆಬ್‌ಸೈಟ್‌ಗೆ ಮೊಬೈಲ್‌ನಲ್ಲಿ ಆಗಲಿ ಅಥವಾ ಲ್ಯಾಪ್‌ಟಾಪ್‌, ಕಂಪ್ಯೂಟರ್‌ಗಳಲ್ಲಿ ಆಗಲಿ ಭೇಟಿ ನೀಡಿ ತುಂಬಾ ಸರಳವಾಗಿ ನಿಮ್ಮ ಕಾರ್ಯ ನಿರ್ವಹಿಸಬಹುದು. ಕೇವಲ ಮೂರು ಕ್ಲಿಕ್ ಗಳಲ್ಲಿ ನಿಮ್ಮ ಯಾವುದೇ ಪಿಡಿಎಫ್‌ ಬದಲಾವಣೆ ಕೆಲಸಗಳನ್ನು ಮುಗಿಸಿಕೊಳ್ಳಬಹುದು.

ilovepdf ನಲ್ಲಿ ಪಡೆಯಬಹುದಾದ ಸೇವೆಗಳು ಈ ಕೆಳಗಿನಂತಿವೆ.

– ಹಲವು ಪಿಡಿಎಫ್‌ ಫೈಲ್‌ಗಳನ್ನು ಒಂದೇ ಪಿಡಿಎಫ್‌ ಫೈಲ್‌ ಆಗಿ ಮರ್ಜ್‌ ಮಾಡಬಹುದು

– ಒಂದು ಪಿಡಿಎಫ್‌ ಫೈಲ್‌ ಅನ್ನು ಅಗತ್ಯಕ್ಕೆ ತಕ್ಕಂತೆ ಕತ್ತರಿಸಬಹುದು.

– ಪಿಡಿಎಫ್‌ ಫೈಲ್‌ ಅನ್ನು ಬೇಕಾದ ಡಾಟಾ ಸಾಮರ್ಥ್ಯಕ್ಕೆ ತಕ್ಕಂತೆ ಕಡಿಮೆ ಮಾಡಿಕೊಳ್ಳಬಹುದು.

– ಯಾವುದೇ ಡಾಕ್ಯುಮೆಂಟ್‌ಗಳಾದ, ಪವರ್‌ ಪಾಯಿಂಟ್, ಎಂಎಸ್‌ ವರ್ಲ್ಡ್‌, ಎಂಎಸ್‌ ಎಕ್ಸೆಲ್ ಫೈಲ್, ಫೋಟೋಗಳನ್ನು PDF ಫೈಲ್‌ಗೆ ಅಥವಾ ಯಾವುದೇ ಪಿಡಿಎಫ್‌ ಫೈಲ್‌ ಅನ್ನು ಇತರ ಯಾವುದೇ ಡಾಕ್ಯುಮೆಂಟ್‌ ಫಾರ್ಮ್ಯಾಟ್‌ಗೆ ಬದಲಿಸಬಹುದು.

– ಪೇಜ್‌ ನಂಬರ್‌ಗಳನ್ನು ಪಿಡಿಎಫ್‌ ನಲ್ಲಿ ಸೇರಿಸಬಹುದು.

– ಪಿಡಿಎಫ್‌ ಫೈಲ್‌ನ ಎಲ್ಲಾ ಪೇಜ್‌ಗಳಿಗೆ ವಾಟರ್‌ ಮಾರ್ಕ್‌, ಲೋಗೋಗಳನ್ನು ಸೇರಿಸಬಹುದು.

– ಪಿಡಿಎಫ್‌ನಲ್ಲಿ ಸಮಸ್ಯೆ ಇದ್ದಲ್ಲಿ(ಓಪನ್‌ ಆಗದೇ ಇದ್ದಲ್ಲಿ) ಸರಿಪಡಿಸಬಹುದು.

– ನಿಮ್ಮ ಪಿಡಿಎಫ್‌ ಫೈಲ್‌ ಅನ್ನು ಯಾರು ಓಪನ್ ಮಾಡದಂತೆ ಪಾಸ್‌ವರ್ಡ್‌ ನೀಡಿ ಸುರಕ್ಷತೆ ಕೊಡಬಹುದು.

– ಅಥವಾ ಪಾಸ್‌ವರ್ಡ್‌ ಮರೆತಿದ್ದಲ್ಲಿ ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಪಿಡಿಎಫ್‌ ಫೈಲ್‌ ಅನ್ನು ಅನ್‌ಲಾಕ್ ಮಾಡಬಹುದು.

– ನಿಮ್ಮ ಪಿಡಿಎಫ್‌ ಫೈಲ್‌ಗೆ ಮಧ್ಯದಲ್ಲಿ ಬೇರೆ ಯಾವುದೇ ಪೇಜ್‌ ಬೇಕಾದಲ್ಲಿ ಸೇರಿಸಬಹುದು. ಅಥವಾ ನಿರ್ಧಿಷ್ಟ ಪೇಜ್‌ ಅನ್ನು ಡಿಲೀಟ್ ಮಾಡಬಹುದು.

ಇತರೆ ಹೆಚ್ಚಿನ ಮಾಹಿತಿಗಾಗಿ ನಾವು ಮೇಲೆ ತಿಳಿಸಿದ ಇಷ್ಟೆಲ್ಲಾ ಅನುಕೂಲಗಳಿರುವ ವೆಬ್‌ಸೈಟ್‌ www.ilovepdf.com ಗೆ ಭೇಟಿ ನೀಡಿ.

IlovePDF ಆಪ್‌ ಐಫೊನ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಡೌನ್‌ಲೋಡ್ ಮಾಡಲು ಲಭ್ಯವಿದೆ.

ಐಫೋನ್‌ ಬಳಕೆದಾರರು IlovePDF ಆಪ್‌ ಡೌನ್‌ಲೋಡ್ ಮಾಡಲು – ಕ್ಲಿಕ್ ಮಾಡಿ

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು IlovePDF ಆಪ್‌ ಡೌನ್‌ಲೋಡ್ ಮಾಡಲು – ಕ್ಲಿಕ್ ಮಾಡಿ

ಲ್ಯಾಪ್‌ಟಾಪ್‌ ಅಥವಾ ಕಂಪ್ಯೂಟರ್‌ನಲ್ಲಿ ಆಫ್‌ಲೈನ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಡೌನ್‌ಲೋಡ್ ಮಾಡಿಕೊಳ್ಳಲು – ಕ್ಲಿಕ್ ಮಾಡಿ

Word to pdf converter for mac – download

How to convert pdf file to msword file know here. Via visiting this website.

You may also like