Home » ಬೆಂಗಳೂರು ನಗರ ಜಿಲ್ಲೆ ಗ್ರಾಮ ಲೆಕ್ಕಾಧಿಕಾರಿಗಳ(VA) ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು ನಗರ ಜಿಲ್ಲೆ ಗ್ರಾಮ ಲೆಕ್ಕಾಧಿಕಾರಿಗಳ(VA) ಹುದ್ದೆಗೆ ಅರ್ಜಿ ಆಹ್ವಾನ

by manager manager

Bangalore Urban district Village Accountants recruitment in kannada

ಬೆಂಗಳೂರು ನಗರ ಜಿಲ್ಲಾ (Bangalore Urban va District)ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ(VA) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಪ್ರಕಟಣೆ ಹೊರಡಿಸಲಾಗಿದೆ.

ಒಟ್ಟು ಹುದ್ದೆಗಳ ಸಂಖ್ಯೆ : 25

ಹುದ್ದೆಯ ಹೆಸರು : ಗ್ರಾಮ ಲೆಕ್ಕಿಗ (Village Accountant)

ಅರ್ಜಿಗಳನ್ನು ಸಲ್ಲಿಸಲು ಆರಂಭಿಕ ದಿನಾಂಕ: 01-12-2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-12-2018 ಸಂಜೆ 5 ಗಂಟೆ ವರೆಗೆ

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ : ರೂ 400

ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ : ರೂ.400

ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ.200

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ : ರೂ.200

ಶೈಕ್ಷಣಿಕ ವಿದ್ಯಾರ್ಹತೆ:

ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ನಡೆಸುವ ದ್ವಿತೀಯ ಪಿಯುಸಿ ಅಥವಾ ಸಿಬಿಎಸ್‌ಇ, ಐಸಿಎಸ್‌ಇ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ವಯೋಮಿತಿ :

ಅರ್ಜಿಸುವ ಕೊನೆಯ ದಿನಾಂಕದೊಳಗೆ ಕನಿಷ್ಟ 18 ವರ್ಷ ಪೂರೈಸಿರಬೇಕು.

ಸಾಮಾನ್ಯ ವರ್ಗ ಗರಿಷ್ಠ : 35 ವರ್ಷ

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ : 40 ವರ್ಷ

ಪ್ರವರ್ಗ 2ಎ/ಬಿ/3ಎ/3ಬಿ : 38 ವರ್ಷ

ಅರ್ಜಿ ಸಲ್ಲಿಸುವುದು ಹೇಗೆ?

ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಾಗಿದ್ದು, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಅಧಿಕೃತ ವೆಬ್‌ಸೈಟ್ https //bengaloreurban.va.kar.nic.in ಗೆ ಭೇಟಿ ನೀಡಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವೇ ಅರ್ಜಿ ಶುಲ್ಕ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

ಅರ್ಜಿ ಶುಲ್ಕವನ್ನು ಇಂಟರ್ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮೂಲಕ ಆನ್‌ಲೈನ್‌ ನಲ್ಲಿ ಪೇ ಮಾಡಬಹುದು. ಅಥವಾ ಚಲನ್ ಪ್ರಿಂಟ್ ತೆಗೆದುಕೊಂಡು ಯಾವುದೇ ಎಸ್‌ಬಿಐ ಶಾಖೆಗಳಲ್ಲಿ ಶುಲ್ಕ ಪಾವತಿಸಬಹುದು.

ಸೂಚನೆ: ಯಾವುದೇ ರೀತಿಯ ದಾಖಲೆಗಳನ್ನು ಅರ್ಜಿಗಳೊಂದಿಗೆ ಸಲ್ಲಿಸುವ ಅಗತ್ಯವಿರುವುದಿಲ್ಲ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‌ಸೈಟ್ ಅನ್ನು ಪರಿಶೀಲಿಸಲು ಕೋರಲಾಗಿದೆ.

ವಿಶೇಷ ಸೂಚನೆ : ಈ ಮಾಹಿತಿ ನವೆಂಬರ್ 25-2018 ರಂದು ಪತ್ರಿಕೆಯಲ್ಲಿ ಪ್ರಕಟಣೆಯಾದ ಅಧಿಸೂಚನೆ ಜಾಹಿರಾತು ಆಗಿರುತ್ತದೆ. ಈ ಪ್ರಕಟಣೆ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ದೂರವಾಣಿ ಸಂಖ್ಯೆ : 080-22211106, 080-22211292 ಗೆ ಕರೆ ಮಾಡಲು ತಿಳಿಸಲಾಗಿದೆ.

Bangalore urban district invited application for the post of Village Accountant(VA). Read full details here to apply for the VA job.

You may also like