Home » KRS ನಲ್ಲಿ ಉಚಿತ ಮೀನುಗಾರಿಕೆ ತರಬೇತಿ: ಅರ್ಜಿ ಆಹ್ವಾನ

KRS ನಲ್ಲಿ ಉಚಿತ ಮೀನುಗಾರಿಕೆ ತರಬೇತಿ: ಅರ್ಜಿ ಆಹ್ವಾನ

by manager manager

Application invited for free fishing training at KRS

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್(KRS) ನಲ್ಲಿರುವ ಒಳನಾಡು ಮೀನುಗಾರಿಕೆ ತರಬೇತಿ ಕೇಂದ್ರದ ವತಿಯಿಂದ ನಿರುದ್ಯೋಗಿಗಳಿಗೆ ಮೀನುಗಾರಿಕೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಈ ತರಬೇತಿ ಪಡೆಯಲು ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೊಡಗು ಸೇರಿದಂತೆ ಒಟ್ಟು ಐದು ಜಿಲ್ಲೆಗಳ ನಿರುದ್ಯೋಗಿಗಳು ಅರ್ಜಿ ಸಲ್ಲಿಸಿ ಮೀನುಗಾರಿಕೆ ತರಬೇತಿ ಪಡೆಯಬಹುದಾಗಿದೆ.

ಯಾರು ಅರ್ಜಿ ಸಲ್ಲಿಸಬಹುದು?

18 ರಿಂದ 40 ವರ್ಷದೊಳಗಿನ ವಯೋಮಾನದ ನಿರುದ್ಯೋಗಿಗಳು ಅರ್ಜಿ ಸಲ್ಲಿಸಬಹುದು. ಮೀನುಗಾರಿಕೆ ತರಬೇತಿಯನ್ನು ಒಂದು ತಿಂಗಳ ಕಾಲಾವಧಿ ಉಚಿತವಾಗಿ ನೀಡಲಾಗುತ್ತದೆ. ಜೊತೆಗೆ 2000 ರೂಪಾಯಿ ಶಿಷ್ಯವೇತನವನ್ನು ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.

– ಇಂದಿನಿಂದ 15 ದಿನಗಳ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬುದು : 9535373793

Mandya district KRS inland fishing training centre invited application for fishing training for the unemployees from the Mandya, Mysuru, Hasan, Kodagu, Chamarajanagara district.

You may also like