Home » ಆಪಲ್ ಕಾರ್ಡ್ ಲಭ್ಯತೆ ಆರಂಭ: ಆಹ್ವಾನ ಪಡೆದವರಿಗೆ ಮೊದಲು

ಆಪಲ್ ಕಾರ್ಡ್ ಲಭ್ಯತೆ ಆರಂಭ: ಆಹ್ವಾನ ಪಡೆದವರಿಗೆ ಮೊದಲು

by manager manager

ಏನಿದು ಆಪಲ್‌ ಕಾರ್ಡ್‌?

ಆಪಲ್‌ ಕಾರ್ಡ್ ಆಪಲ್ ಕಂಪನಿಯು ಅಭಿವೃದ್ಧಿ ಪಡಿಸಿರುವ ಒಂದು ಕ್ರೆಡಿಟ್ ಕಾರ್ಡ್. ಪ್ರಾಥಮಿಕವಾಗಿ ಇದನ್ನು ಆಪಲ್‌ ಪೇ ಮತ್ತು ಆಪಲ್‌ ಡಿವೈಸ್‌ಗಳೊಂದಿಗೆ ಬಳಸಲು ವಿನ್ಯಾಸಗೊಳಿಸಲಾಗಿದೆ. ಐಫೋನ್ ಮತ್ತು ಆಪಲ್‌ ವಾಚ್‌ ಗಳೊಂದಿಗೆ ಬಳಸಬಹುದು.

ಆಪಲ್‌ ಕಾರ್ಡ್ ಬಳಸುವುದು ಹೇಗೆ?

ನೇರವಾಗಿ ಇದು ವಾಲೆಟ್‌ ಅಪ್ಲಿಕೇಶನ್‌ನ ಆಫಲ್‌ ಕ್ಯಾಶ್ ಕಾರ್ಡ್‌ ಗೆ ಸಂಪರ್ಕಿಸುತ್ತದೆ. ಒಂದು ಬಾರಿ ಇದನ್ನು ಟ್ಯಾಪ್‌ ಮಾಡುವ ಮೂಲಕ ಆಪಲ್‌ ಸ್ಟೋರ್‌, ವೆಬ್‌ಸೈಟ್, ಆಪ್ಸ್ ನಲ್ಲಿ ಗ್ರಾಹಕರು ತಮಗೆ ಬೇಕಾದುದನ್ನು ಖರೀದಿಸಬಹುದು ಅಥವಾ ಆಪಲ್‌ ಕಾರ್ಡ್‌ನಲ್ಲಿ ಪೇಮೆಂಟ್ ಸಹ ಮಾಡಬಹುದು. ಇದರ ಬಳಕೆ ಹೇಗೆ ಎಂದು ಇನ್ನಷ್ಟು ತಿಳಿಯಬೇಕೆಂದರೆ ಆಪಲ್ ಬಿಡುಗಡೆ ಮಾಡಿರುವ ವಿಡಯೋವನ್ನು ಒಮ್ಮೆ ನೋಡಲೇಬೇಕು.

ಆಪಲ್‌ ಬಳಕೆ ಹೇಗೆ ವಿಡಿಯೋ ನೋಡಲು – ಕ್ಲಿಕ್ ಮಾಡಿ

ಆಪಲ್ ಸಿಇಓ ಟಿಮ್ ಕುಕ್‌ ಕೆಲವು ದಿನಗಳ ಹಿಂದೆ ಆಗಸ್ಟ್‌ ನಲ್ಲಿ ಆಪಲ್‌ ಕಾರ್ಡ್‌ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ ಪ್ರಸ್ತುತ ಈಗ ಕೇವಲ ಯಾರು ನೋಟಿಫೈ ಮಾಡಿದ್ದಾರೊ ಅವರಿಗೆ ಆಪಲ್‌ ಕಾರ್ಡ್‌ ಲಭ್ಯತೆ ಅವಕಾಶ ಕಲ್ಪಿಸಲಾಗಿದೆ. ಬಹುದೊಡ್ಡ ಮಟ್ಟದಲ್ಲಿ ಸಾರ್ವಜನಿಕರಿಗೆ ಆಪಲ್‌ ಕಾರ್ಡ್ ಅನ್ನು ಈ ತಿಂಗಳ ನಂತರ ಬಿಡುಗಡೆ ಮಾಡುವ ಭರವಸೆ ನೀಡಲಾಗಿದೆ.

ಆಪಲ್‌ ಕಾರ್ಡ್‌ ಅನ್ನು ಐಫೋನ್‌ನ ವಾಲೆಟ್ ಆಪ್‌ ಓಪನ್ ಮಾಡಿ ಸೈನಪ್‌ ಮಾಡುವುದರ ಮೂಲಕ ಪಡೆಯಬಹುದು. ಆಪಲ್‌ ಕಾರ್ಡ್, ಒಂದು ಡಿಜಿಟಲ್ ಕಾರ್ಡ್‌ ಆಗಿದ್ದು, ಆಸಕ್ತಿ ಇರುವವರು ಅಪ್ಲೆ ಮಾಡಬಹುದು. ಅನುಮತಿ ಸಿಕ್ಕಲ್ಲಿ ಆಪ್‌ನಲ್ಲಿ ಸೇರ್ಪಡೆ ಆಗುತ್ತದೆ. ಶೀಘ್ರವಾಗಿ ನೀವು ಬಳಸಬಹುದು. ಆಕರ್ಷಕವಾದ ಹಣ ಮರುಪಾವತಿ ಬಹುಬೇಗ ಆಗುತ್ತಿರುತ್ತವೆ. ಒಂದು ರೀತಿ ಇತರೆ ಪೇಮೆಂಟ್ ಆಪ್‌ಗಳಾದ ಗೂಗಲ್‌ ಪೇ, ಫೋನ್‌ ಪೇ, ಪೇಟಿಎಮ್ ಗಳ ರೀತಿ ಇದು ಕಾರ್ಯ ನಿರ್ವಹಿಸಲಿದೆ. ಸ್ನೇಹಿತರಿಗೆ ಆಪಲ್‌ ಕ್ಯಾಶ್ ಮೂಲಕವೇ ಹಣ ವರ್ಗಾವಣೆ ಮಾಡಬಹುದು, ಬ್ಯಾಂಕ್ ಖಾತೆಗೂ ಸಹ ಆಪ್‌ ನಲ್ಲಿನ ಹಣ ವರ್ಗಾವಣೆ ಮಾಡಿಕೊಳ್ಳಬಹುದು.

ಆಕಸ್ಮಿಕವಾಗಿ ನಿಮ್ಮ ಐಫೋನ್ ಕಳೆದುಹೋಗಿ ಆಫಲ್‌ ಕಾರ್ಡ್‌ ಸಹ ಕಳೆದುಹೋದರೆ ಐಕ್ಲೌಡ್ ಗೆ ಲಾಗಿನ್‌ ಆಗಿ ಪೇಮೆಂಟ್‌ ವಿಧಾನವನ್ನು ತೆಗೆದು ಹಾಕಬಹುದು.

ಭಾರತದಲ್ಲಿ ಆಪಲ್‌ ಕಾರ್ಡ್ ಬಿಡುಗಡೆ ಯಾವಾಗ ಎಂಬುದರ ಬಗ್ಗೆ ಅಧಿಕೃತ ಮಾಹಿತಿಯನ್ನು ಇನ್ನೂ ಪ್ರಕಟಿಸಿಲ್ಲ.

You may also like