Home » ಈ ಸರಳ ಟ್ರಿಕ್ಸ್‌ಗಳಿಂದ ಸ್ಲೋ ಮೊಬೈಲ್ ಡಾಟಾವನ್ನು ಅತಿ ಬೇಗ ವೇಗಗೊಳಿಸಿ

ಈ ಸರಳ ಟ್ರಿಕ್ಸ್‌ಗಳಿಂದ ಸ್ಲೋ ಮೊಬೈಲ್ ಡಾಟಾವನ್ನು ಅತಿ ಬೇಗ ವೇಗಗೊಳಿಸಿ

by manager manager

7 steps to speed up a slow Smartphone Data Connection in kannada

ಸ್ಮಾರ್ಟ್‌ಫೋನ್(Smartphone) ಬಳಕೆಯು ಒಂದು ಕಲೆ. ಕೆಲವರು ತಾವು ಖರೀದಿಸಿದ ಸ್ಮಾರ್ಟ್‌ಫೋನ್ ಅನ್ನು ಕೇವಲ ಒಂದು ವರ್ಷವು ಉತ್ತಮವಾಗಿ ಬಳಕೆ ಮಾಡಲು ಆಗುವುದಿಲ್ಲ. ಕಾರಣ ಸ್ಮಾರ್ಟ್‌ಫೋನ್ ಹೊಸತರಲ್ಲಿ ಕಾರ್ಯನಿರ್ವಹಿಸುವ ವೇಗದಲ್ಲಿ ದಿನಕಳೆದಂತೆ ಅದೇ ವೇಗದಲ್ಲಿ ಕಾರ್ಯನಿರ್ವಹಿಸುವ ಹಾಗೆ ಕಾಪಾಡಿಕೊಳ್ಳಲು ಬರುವುದಿಲ್ಲ.

ಇನ್ನು ಇತ್ತೀಚಿನ ದಿನಗಳಲ್ಲಿ ಮನುಷ್ಯನ ದೈನಂದಿನ ಒಂದೊಂದು ಚಟುವಟಿಕೆಯನ್ನು ಸ್ಮಾರ್ಟ್‌ಫೋನ್ ನಲ್ಲಿನ ಅಪ್ಲಿಕೇಶನ್‌ಗಳು ನಿರ್ವಹಿಸುವ, ನೆನಪು ಮಾಡುವ ಕಾರ್ಯಗಳನ್ನು ಮಾಡುತ್ತವೆ. ಆದ್ದರಿಂದ ಅಂತಹ ಎಲ್ಲ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡುತ್ತಹೋದಂತೆ ಸ್ಮಾರ್ಟ್‌ಫೋನ್‌ ಅಷ್ಟೇವೇಗದಲ್ಲಿ ಕಾರ್ಯನಿರ್ವಹಿಸುವ ವೇಗವು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೇ ಇಂಟರ್ನೆಟ್‌ ಡಾಟಾ ಬಳಸುವಾಗ ಯಾವುದೇ ಕಾರ್ಯನಿರ್ವಹಿಸಿದರೂ ವೇಗ ಕಡಿಮೆ ಆಗಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಕಿರಿಕಿರಿ ಖಂಡಿತ.

ಹಾಗಿದ್ರೆ ನಾವು ಎಷ್ಟೇ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡರೂ ಮೊಬೈಲ್‌ ಡಾಟಾ ಬಳಸುವಾಗ ವೇಗ ಹೆಚ್ಚು ಮಾಡುವುದು ಹೇಗೆ? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಲಾಗಿದೆ.

1 ಸ್ಮಾರ್ಟ್‌ಫೋನ್‌ ರೀಸ್ಟಾರ್ಟ್‌ ಮಾಡಿ

ಯಾವುದೇ ಸ್ಮಾರ್ಟ್‌ಫೋನ್‌ ಅನ್ನು ರೀಸ್ಟಾರ್ಟ್‌ ಮಾಡುವುದು ತುಂಬಾ ಸರಳವಾದ ಕೆಲಸ. ಹಾಗೆ ಮಾಡುವುದರಿಂದ ಇಂಟರ್ನೆಟ್‌ ಡಾಟಾ ವೇಗಗೊಳ್ಳುವುದೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಬಹುದು. ಆದರೆ ಹೀಗೆ ಮಾಡುವುದರಿಂದ ನಿಧಾನಗತಿಯ ಸೆಲ್ಯೂಲಾರ್ ಡಾಟಾವನ್ನು ವೇಗಗೊಳಿಸಬಹುದು.

ಸ್ಮಾರ್ಟ್‌ಫೋನ್‌ ರೀಸ್ಟಾರ್ಟ್‌ ಮಾಡಲು ಸೌಂಡ್‌ ಬಟನ್‌ ಅನ್ನು ಅಥವಾ ಪವರ್ ಬಟನ್‌ ಅನ್ನು ದೀರ್ಘಕಾಲ ಪ್ರೆಸ್‌ ಮಾಡಿ.

2 ಇರುವ ಸ್ಥಳವನ್ನು ಬದಲಾಯಿಸಿ.

ವಾತಾವರಣ, ನೆಟ್‌ವರ್ಕ್‌ ದಟ್ಟಣೆ, ಸುತ್ತಮುತ್ತಲಿನ ಬಿಲ್ಡಿಂಗ್‌ಗಳು ಸಹ ಡಾಟಾ ವೇಗ ಕುಗ್ಗಲು ಕಾರಣವಾಗುತ್ತವೆ. ಆದ್ದರಿಂದ ಕೆಲವೊಮ್ಮೆ ಡಾಟಾ ಸಂಪರ್ಕ ವೇಗ ಕಡಿಮೆ ಇದ್ದಾಗ ಇರುವ ಸ್ಥಳದಿಂದ ಮತ್ತೊಂದು ಕಡೆಗೆ ಬದಲಿಸಿ.

3 ಆಪ್‌ಗಳ ಡಿಸೇಬಲ್ ಮತ್ತು ಅಪ್‌ಡೇಟ್

ಸ್ಮಾರ್ಟ್‌ಫೋನ್‌ ನಲ್ಲಿ ಕೆಲವು ಆಪ್‌ಗಳು ಸಹ ಮೊಬೈಲ್ ಡಾಟಾ ಸಂಪರ್ಕ ವೇಗ ಕಡಿಮೆಗೊಳ್ಳಲು ಕಾರಣವಾಗುತ್ತವೆ. ಅಲ್ಲದೇ ಬಳಕೆದಾರರಿಗೆ ಗೊತ್ತಿಲ್ಲದೆಯೇ ಇಂತಹ ಆಪ್‌ಗಳು ಹೆಚ್ಚು ಡಾಟಾ ಬಳಸುತ್ತಾ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆಯ ವೇಗವನ್ನು ಕುಂಡಿತಗೊಳಿಸುತ್ತವೆ. ಆದ್ದರಿಂದ ಅಂತಹ ಕೆಲವೊಂದು ಆಪ್‌ಗಳನ್ನು ಅನ್‌ಇನ್‌ಸ್ಟಾಲ್‌ ಮಾಡುವ ಅಥವಾ ಬ್ಯಾಗ್ರೌಂಡ್‌ ಡಾಟಾ ಡಿಸೇಬಲ್ ಮಾಡುವ ಕಾರ್ಯವನ್ನು ಮಾಡಬೇಕು.

– ಐಫೋನ್ ಬಳಕೆದಾರರು Settings > Cellular ಹೋಗುವ ಮೂಲಕ ಹೆಚ್ಚು ಡಾಟಾ ಬಳಸುತ್ತಿರುವ ಆಪ್‌ ಅನ್ನು ಅನ್‌ಇನ್‌ಸ್ಟಾಲ್‌ ಮಾಡುವ ಅಥವಾ ಬ್ಯಾಗ್ರೌಂಡ್‌ ಡಾಟಾ ಡಿಸೇಬಲ್‌ ಮಾಡುವ ಮೂಲಕ ಡಾಟಾ ವೇಗಗೊಳಿಸಬಹುದು.

– ಆಂಡ್ರಾಯ್ಡ್‌ ಬಳಕೆದಾರರು Settings > Network & internet > Mobile network > Data usage ಗೆ ಹೋಗಿ ಬ್ಯಾಗ್ರೌಂಡ್‌ನಲ್ಲಿ ಹೆಚ್ಚು ಡಾಟಾ ಬಳಸುತ್ತಿರುವ ಆಪ್‌ ಅನ್ನು ಡಿಸೇಬಲ್‌ ಮಾಡಬಹುದು. ಹಾಗೆ ಕೆಲವು ಆಪ್‌ಗಳ ಅಪ್‌ಡೇಟ್‌ ಅನ್ನು ಚೆಕ್‌ ಮಾಡಿಕೊಳ್ಳುತ್ತಿರಬೇಕು.

4 VPN ನಿಂದ ಡಿಸ್‌ ಕನೆಕ್ಟ್ ಮಾಡಿ

ಕೆಲವೊಮ್ಮೆ ಯಾವುದೋ ದೂರದ ಸರ್ವರ್‌ಗೆ ಕನೆಕ್ಟ್‌ ಆದಾಗ ಡಾಟಾ ಸ್ಪೀಡ್ ಕಡಿಮೆ ಆಗುತ್ತದೆ. ಅಂತಹ ಸಂದರ್ಭದಲ್ಲಿ ಒಮ್ಮೆ ಇಂಟರ್ನೆಟ್ ಡಿಸ್‌ ಕನೆಕ್ಟ್‌ ಮಾಡಿ ಅಂದರೆ ಮೊಬೈಲ್ ಡಾಟಾ ಆಫ್‌ ಮಾಡಿ, ಪುನಃ ಆನ್‌ ಮಾಡಿ. ಹೀಗೆ ಮಾಡುವುದರಿಂದ ಹತ್ತಿರದ VPN ಗೆ ಕನೆಕ್ಟ್ ಆಗಿ ಇಂಟರ್ನೆಟ್ ವೇಗ ಹೆಚ್ಚಾಗುವ ಸಾಧ್ಯತೆಗಳು ಹೆಚ್ಚು.

5 ನೆಟ್‌ವರ್ಕ್‌ ಪರಿಶೀಲನೆ

ಎಲ್ಲಾ ಮೊಬೈಲ್‌ ಲವರ್‌ಗಳು, ಡಾಟಾ ಕೆನೆಕ್ಷನ್ ಸ್ಲೋ ಆದಾಗ ಮಾಡಬೇಕಾದ ಮೊದಲ ಕೆಲಸ ಅಂದ್ರೆ ನೆಟ್‌ವರ್ಕ್ ಪರಿಶೀಲನೆ. ವೈಫೈ ಆನ್‌ ಮಾಡುವ ಮೂಲಕ ಅಥವಾ ಯಾವುದೇ ಒಂದು ವೆಬ್‌ಸೈಟ್ ಓಪನ್‌ ಮಾಡಲು ಪ್ರಯತ್ನಿಸಿ ನೆಟ್‌ವರ್ಕ್‌ ಪರಿಶೀಲನೆ ಮಾಡಬಹುದು.

6 ನೆಟ್‌ವರ್ಕ್ ಸೆಟ್ಟಿಂಗ್ ರೀಸೆಟ್ ಮಾಡಿ

ಮೊಬೈಲ್ ರೀಸ್ಟಾರ್ಟ್‌ ಮಾಡುವ ಜೊತೆಗೆ ನೆಟ್‌ವರ್ಕ್ ರೀಸೆಟ್‌ ಮಾಡುವುದು ಒಂದು ಉತ್ತಮ ಟ್ರಿಕ್ಸ್.

– ಐಫೋನ್ ಬಳಕೆದಾರರು ನೆಟ್‌ವರ್ಕ್ ರೀಸೆಟ್ ಮಾಡಲು Settings > General > Reset > Reset Network Settings ಗೆ ಹೋಗಿ.

– ಆಂಡ್ರಾಯ್ಡ್ ಬಳಕೆದಾರರು ನೆಟ್‌ವರ್ಕ್‌ ರೀಸೆಟ್ ಮಾಡಲು Settings > System > Reset options > Reset Wi-Fi, mobile & Bluetooth ಗೆ ಹೋಗಿ. ಆಂಡ್ರಾಯ್ಡ್‌ನಲ್ಲಿನ ಆಯ್ಕೆಗಳು ಕೆಲವು ಉತ್ಪಾದಕ ಕಂಪನಿಗಳ ಮೇಲೆ ಆಧಾರಿತವಾಗಿ ಒಂದಕ್ಕಿಂತ ಒಂದರಲ್ಲಿ ವಿಭಿನ್ನವಾಗಿರುತ್ತವೆ.

7 ಸಿಮ್ ಕಾರ್ಡ್ ತೆಗೆದು ಹಾಕಿ

ಕೆಲವೊಮ್ಮೆ ಸಿಮ್‌ ಕಾರ್ಡ್‌ ತೆಗೆದು ಮತ್ತೆ ಹಾಕುವುದು ಅಥವಾ ಬೇರೊಂದು ಸಿಮ್ ಸ್ಲಾಟ್‌ಗೆ ಇನ್‌ಸರ್ಟ್‌ ಮಾಡುವ ಚಟುವಟಿಕೆಯಿಂದಲೂ ಡಾಟಾ ಕನೆಕ್ಷನ್ ವೇಗಗೊಳಿಸುವ ಎಲ್ಲಾ ಸಾಧ್ಯತೆಗಳಿವೆ. ಆದರೆ ಹೀಗೆ ಮಾಡುವಾಗ ಸಮತಟ್ಟಾದ ಜಾಗದಲ್ಲಿ ಕುಳಿತು ಸಿಮ್ ರಿಮೂವ್ ಮಾಡಿ. ಕಾರಣ ಸಿಮ್ ನ್ಯಾನೊ ಮತ್ತು ಮೈಕ್ರೋ ಸಿಮ್ ಆಗಿದ್ದಾಗ ಕಳೆದು ಹೋಗುವ ಸಂಭವವಿರುತ್ತದೆ.

These seven steps to enough to speeding up a slow Mobile Data Connection. Read more here and fixs smartphone problems. Then start your work again.

You may also like